ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಲ್ಕನೇ ದಿನಕ್ಕೆ ಮೀನುಗಾರರ ಪ್ರತಿಭಟನೆ; ಇಂದು ‘ಕಾರವಾರ ಬಂದ್’

|
Google Oneindia Kannada News

ಕಾರವಾರ, ಜನವರಿ 16: ಇಲ್ಲಿನ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ಕಾಮಗಾರಿ ವಿರುದ್ಧದ ಮೀನುಗಾರರ ಪ್ರತಿಭಟನೆ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲೆಯ ವಿವಿಧೆಡೆಯಿಂದ ಮೀನುಗಾರರು ನಗರಕ್ಕೆ ಆಗಮಿಸಲಿದ್ದು, ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಪ್ರತಿಭಟನೆಯ ಅಂಗವಾಗಿ ಇಂದು 'ಕಾರವಾರ ಬಂದ್' ಹಮ್ಮಿಕೊಳ್ಳಲಾಗಿದೆ. ಒತ್ತಾಯಪೂರ್ವಕ ಬಂದ್‌ಗೆ ಅನುಮತಿ ಇಲ್ಲದಿರುವ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಬಿಟ್ಟು, ಎಲ್ಲರೂ ಸ್ವಯಂಪ್ರೇರಿತವಾಗಿ ಇಂದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಪ್ರೇರೇಪಿಸಲಾಗಿದೆ.

ಮುಂದುವರಿದ ಮೀನುಗಾರರ ಪ್ರತಿಭಟನೆ: ಕಾರವಾರದಲ್ಲಿ ಅಘೋಷಿತ ಬಂದ್ಮುಂದುವರಿದ ಮೀನುಗಾರರ ಪ್ರತಿಭಟನೆ: ಕಾರವಾರದಲ್ಲಿ ಅಘೋಷಿತ ಬಂದ್

ಹೀಗಾಗಿ ನಗರದಲ್ಲಿ ಆಸ್ಪತ್ರೆ, ಔಷಧಿ ಅಂಗಡಿಗಳು ಹಾಗೂ ಪೆಟ್ರೋಲ್ ಬಂಕ್ ‌ಗಳನ್ನು ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳಲಿದೆ.

ರಿಕ್ಷಾ ಯೂನಿಯನ್‌ಗಳು ಹಾಗೂ ಟೆಂಪೊ ಯೂನಿಯನ್‌ಗಳು ಕೂಡ ಈ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವ ಕಾರಣ ನಗರದಲ್ಲಿ ಖಾಸಗಿ ಪ್ರಯಾಣಿಕ ವಾಹನಗಳ ಓಡಾಟ ಸ್ಥಗಿತಗೊಳ್ಳಲಿದೆ.

 Karwar Bandh On Behalf Of Fishermen 4th Day Protest

ಬ್ಯಾರಿಕೇಡ್ ಮುರಿದು ಪ್ರತಿಭಟನೆ; ನೂರಾರು ಮೀನುಗಾರರು ಪೊಲೀಸರ ವಶಕ್ಕೆಬ್ಯಾರಿಕೇಡ್ ಮುರಿದು ಪ್ರತಿಭಟನೆ; ನೂರಾರು ಮೀನುಗಾರರು ಪೊಲೀಸರ ವಶಕ್ಕೆ

ಕಾರವಾರದಿಂದ ಯಾವುದೇ ಸಾರಿಗೆ ಬಸ್ಸುಗಳು ಸಂಚರಿಸುತ್ತಿಲ್ಲ. ಇತರೆಡೆಯಿಂದ ಕೂಡ ಬಸ್ ಗಳು ಬರುತ್ತಿಲ್ಲ. ಯಾವುದೇ ಪ್ರಯಾಣಿಕ ವಾಹನಗಳು ಸಂಚಾರ ನಡೆಸದಿರದ ಕಾರಣ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ತೆರಳುವವರಿಗೆ ಸಮಸ್ಯೆ ಉಂಟಾಗಿದೆ. ಹೀಗಾಗಿ ಖಾಸಗಿ ಶಾಲಾ- ಕಾಲೇಜುಗಳಲ್ಲಿ ಅಘೋಷಿತ ರಜೆ ನೀಡಲಾಗಿದೆ.

English summary
The fishermen's protest against the second phase of the expansion of the commercial port has reached its fourth day today. Fishermen said the karwar bandh is being held today as part of the protest
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X