ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದ ಕ್ರಾಂತಿಕಾರಕ ನಡೆ; 150 ಐಟಿಐ ಉನ್ನತೀಕರಣ, ಹೊಸ ಕೋರ್ಸ್ ಆರಂಭ

By ದೇವರಾಜ್ ನಾಯ್ಕ್
|
Google Oneindia Kannada News

ಕಾರವಾರ, ಜುಲೈ 15; "ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗದೊಂದಿಗೆ ಕರ್ನಾಟಕದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಉನ್ನತೀಕರಿಸಲಾಗುತ್ತಿದ್ದು, ಇಲ್ಲಿ ಹೊಸ ತಂತ್ರಾಂಶ, ತಂತ್ರಜ್ಞಾನಗಳ ಕೋರ್ಸ್‌ಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ" ಎಂದು ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತ ಡಾ. ಕೆ. ಹರೀಶಕುಮಾರ್ ತಿಳಿಸಿದ್ದಾರೆ.

ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಬೆಂಗಳೂರು ಆಕಾಶವಾಣಿ ಹಮ್ಮಿಕೊಂಡಿದ್ದ ಕೌಶಲ್ಯ ಕರ್ನಾಟಕ ವಿಶೇಷ ಕಾರ್ಯಕ್ರಮ ಸರಣಿಯಲ್ಲಿ ಮಾತನಾಡಿರುವ ಅವರು, "ಶೇ 88ರಷ್ಟು ಅನುದಾನ ಟಾಟಾ ಟೆಕ್ನಾಲಜೀಸ್ ನಿಂದ ಹಾಗೂ ಶೇ 12ರಷ್ಟು ಸರ್ಕಾರದ ಅನುದಾನದ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ" ಎಂದರು.

ಕೆನರಾ ಬ್ಯಾಂಕ್ ನೇಮಕಾತಿ; ಜುಲೈ 31ರೊಳಗೆ ಅರ್ಜಿ ಹಾಕಿ ಕೆನರಾ ಬ್ಯಾಂಕ್ ನೇಮಕಾತಿ; ಜುಲೈ 31ರೊಳಗೆ ಅರ್ಜಿ ಹಾಕಿ

"ಇದು ಸರಿಸುಮಾರು 5 ಸಾವಿರ ಕೋಟಿ ಅನುದಾನದ ಯೋಜನೆಯಾಗಿದ್ದು, ಹೊಸ ಟೆಕ್ ಲ್ಯಾಬ್, ಹೊಸ ವರ್ಕ್ ಶಾಪ್‌ಗಳನ್ನು ಸ್ಥಾಪಿಸಿ, ನುರಿತ ತರಬೇತುದಾರರನ್ನು‌ ಇದಕ್ಕಾಗಿ ನೇಮಕಗೊಳಿಸಲಾಗುತ್ತದೆ. ಡಿಜಿಟಿ ಅಪ್ರೂವಲ್ ಪಡೆದು ಈ ಹೊಸ ಟ್ರೇಡ್ (ಕೋರ್ಸ್) ಅನ್ನು ಪರಿಚಯಿಸುತ್ತಿದ್ದೇವೆ‌. ಇದಕ್ಕೆ ಬೇಕಾದ ತರಬೇತುದಾರರನ್ನು ವಿಶೇಷವಾಗಿ ತರಬೇತಿಗೊಳಿಸುತ್ತೇವೆ" ಎಂದು ಹೇಳಿದ್ದಾರೆ.

ಬೆಸ್ಕಾಂ; ಅಪ್ರೆಂಟಿಸ್ ನೇಮಕಾತಿ, 400 ಹುದ್ದೆಗಳಿಗೆ ಅರ್ಜಿ ಹಾಕಿ ಬೆಸ್ಕಾಂ; ಅಪ್ರೆಂಟಿಸ್ ನೇಮಕಾತಿ, 400 ಹುದ್ದೆಗಳಿಗೆ ಅರ್ಜಿ ಹಾಕಿ

Karnataka Govt To Develop 150 ITI Colleges

"ಈ ಕೋರ್ಸ್ ಪೂರ್ಣಗೊಳಿಸಿ ಹೊರ ಬರುವ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಹೊಸತನಕ್ಕೆ ತೆರೆದುಕೊಳ್ಳುವ ಕಾರಣ ಅವರಲ್ಲಿ ಈ ಹೊಸ ಕೋರ್ಸ್‌ನಿಂದಾಗಿ ಉದ್ಯೋಗ ಸಿಗದಿದ್ದರೆ? ಎಂಬ ಆತಂಕ ಸಹಜವಾಗಿ ಇರುತ್ತದೆ. ಹೀಗಾಗಿ ಮೊದಲ ಬ್ಯಾಚ್‌ಗೆ ಉದ್ಯೋಗ ನಿರೀಕ್ಷಿತವಾಗಿ ಸಿಗುವ ರೀತಿ ಸುಮಾರು 20 ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಈ ಉನ್ನತೀಕರಣ ಯೋಜನೆ ರಾಜ್ಯದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದ್ದು, ದೇಶದಲ್ಲೇ ಮೊದಲ ಪ್ರಯತ್ನವಾಗಿದೆ' ಎಂದು ವಿವರಣೆ ನೀಡಿದ್ದಾರೆ.

ಬಡ ರೈತನನ್ನು ಸಾಲದ ನೆರಳಿನಿಂದ ಆಚೆ ತಂದ ಉದ್ಯೋಗ ಖಾತ್ರಿ ಬಡ ರೈತನನ್ನು ಸಾಲದ ನೆರಳಿನಿಂದ ಆಚೆ ತಂದ ಉದ್ಯೋಗ ಖಾತ್ರಿ

"ಇಂಡಸ್ಟ್ರಿಯಲ್ ಪಾಟ್ನರ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ ಎಂಬ ದೂರು ಈವರೆಗೆ ಇತ್ತು‌. ಆದರೆ ಈ ಯೋಜನೆಯ ಮೂಲಕ ಅವರನ್ನೂ ತೊಡಗಿಸಿಕೊಳ್ಳುತ್ತಿದ್ದೇವೆ. ಇದು ಯಶಸ್ವಿಯಾದರೆ ಬೇರೆ ರಾಜ್ಯಗಳು ಕೂಡ ಯೋಜನೆಯನ್ನು ಮಾದರಿಯಾಗಿ ಅನುಸರಿಸಲಿದೆ. ಈ ಶೈಕ್ಷಣಿಕ ವರ್ಷದಿಂದಲೇ ಜಾರಿ ಮಾಡಲು ಸಚಿವ ಡಾ.ಅಶ್ವತ್ಥ್‌ ನಾರಾಯಣ ಭರವಸೆ ನೀಡಿರುವ ಕಾರಣ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲೇ ಈ ಕೋರ್ಸ್ ಪರಿಚಯಿಸಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ" ಎಂದರು.

Recommended Video

ಇಂಗ್ಲೆಂಡ್ ಟೂರ್ ಯಿಂದ ರಿಷಬ್ ಹೊರಗುಳಿತಾರ ! | Oneindia Kannada

"ಈ ಹೊಸ ಟ್ರೇಡ್ ಪರಿಚಯಿಸುವುದು ಮಾತ್ರವಲ್ಲ, ಸಮೀಪದ ಸಣ್ಣಪುಟ್ಟ ಕೈಗಾರಿಕೆಗಳು, ಸಂಸ್ಥೆಗಳು ಕೂಡ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಈ ಸಂಸ್ಥೆಗಳನ್ನು ಇಂಡಸ್ಟ್ರಿಯಲ್ ಹಬ್ ಮಾಡಲಾಗುವುದು. 11 ದೀರ್ಘಾವಧಿ ಹಾಗೂ 23 ಅಲ್ಪಾವಧಿ ಕೋರ್ಸ್ ಮಾಡುತ್ತಿದ್ದೇವೆ. ಈ ಮಹತ್ವಾಕಾಂಕ್ಷೆ ಯೋಜನೆ ಯಶಸ್ವಿಯಾದರೆ ಬೇರೆ ಕೈಗಾರಿಕೆಗಳ ಸಹಯೋಗವನ್ನೂ ಪಡೆದು ಇನ್ನಷ್ಟು ಹೊಸ ಕೋರ್ಸ್ ಪರಿಚಯಿಸಲು ಪ್ರಯತ್ನಿಸಲಾಗುವುದು" ಎಂದು ಹೇಳಿದ್ದಾರೆ.

English summary
Karnataka government to develop 150 Industrial Training Institute (ITI) colleges and start new course soon said commissioner employment and training department Dr. K. Harish Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X