ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ: ಇಕೋ ಬೀಚ್ ಗೆ ‘ಬ್ಲ್ಯೂ ಫ್ಲಾಗ್’ ಅಂತರಾಷ್ಟ್ರೀಯ ಮಾನ್ಯತೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಅಕ್ಟೊಬರ್ 11: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡಿನ ಇಕೋ ಬೀಚ್ ಗೆ 'ಬ್ಲ್ಯೂ ಫ್ಲಾಗ್' ಬೀಚ್ ಎಂಬ ಅಂತರಾಷ್ಟ್ರೀಯ ಮಾನ್ಯತೆ ದೊರೆತಿದೆ.

ಹೊನ್ನಾವರ ತಾಲ್ಲೂಕಿನ ಕಾಸರಕೋಡಿನಲ್ಲಿರುವ ಇಕೋ ಬೀಚ್ ಇದೀಗ ಅಂತರಾಷ್ಟ್ರೀಯ ಮಟ್ಟದ ಬೀಚ್‌ ಆಗಿ ಮೇಲ್ದರ್ಜೆಗೇರಿದೆ. ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ಕುಳಿತುಕೊಳ್ಳುವ ಆಸನದಿಂದ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲತೀರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಸಿಬ್ಬಂದಿಯನ್ನು ಒಳಗೊಂಡ ವಿನೂತನ ಮಾದರಿಯ ವ್ಯವಸ್ಥೆ ಒದಗಿಸಲಾಗಿದೆ.

ಕರಾವಳಿ ಪ್ರದೇಶದಲ್ಲಿ ಭಯೋತ್ಪಾದನೆ ತಡೆಗಟ್ಟಲು ಬಿಗಿ ಭದ್ರತೆಕರಾವಳಿ ಪ್ರದೇಶದಲ್ಲಿ ಭಯೋತ್ಪಾದನೆ ತಡೆಗಟ್ಟಲು ಬಿಗಿ ಭದ್ರತೆ

ಇಲ್ಲಿಗೆ ಬರುವ ಪ್ರವಾಸಿಗರಿಗೆ ಸ್ವಚ್ಛ ಕಡಲ ತೀರದ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರಿಂದ ದೇಶ, ವಿದೇಶಗಳ ಪ್ರವಾಸಿಗರನ್ನೂ ಇತ್ತ ಸೆಳೆಯುವಲ್ಲಿ ಅನುಕೂಲವಾಗಲಿದೆ.

Karawar: International Recognition Of Blue Flag For Eco Beach

ಡೆನ್ಮಾರ್ಕ್‌ನ ಪರಿಸರ ಶಿಕ್ಷಣ ಪ್ರತಿಷ್ಠಾನ ಪರಿಶೀಲನೆ ಬಳಿಕ "ಬ್ಲ್ಯೂ ಫ್ಲಾಗ್' ಪ್ರಮಾಣಪತ್ರ ನೀಡಿದೆ. ಕಡಲತೀರದಲ್ಲಿನ ಅಭಿವೃದ್ಧಿ ಕಾರ್ಯಗಳು ಹಾಗೂ ಬೀಚ್ ಸ್ಥಿತಿಯನ್ನು ಆಧರಿಸಿ ಬ್ಲ್ಯೂ ಫ್ಲಾಗ್ ಪ್ರಮಾಣಪತ್ರ ನೀಡಲಾಗುತ್ತದೆ.

Karawar: International Recognition Of Blue Flag For Eco Beach

Recommended Video

ಮನೆ ಮುಂದೆ ಗಾಂಜಾ ಗಿಡ, ಖತರ್ನಾಕ್ ಕಳ್ಳರು | Oneindia Kannada

5.6 ಕಿಲೋಮೀಟರ್ ಉದ್ದವಿರುವ ಕಾಸರಕೋಡು ಕಡಲತೀರದ 750 ಮೀಟರ್ ವ್ಯಾಪ್ತಿಯಲ್ಲಿ ಸದ್ಯ ಸುಮಾರು 8 ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ ಬ್ಲ್ಯೂ ಫ್ಲ್ಯಾಗ್ ಹೊಂದುವ ಮೂಲಕ ಇಕೋ ಬೀಚ್ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಪ್ರವಾಸಿಗರಿಗೆ ಲಭ್ಯವಾಗುತ್ತಿದೆ.

English summary
Eco Beach in Kasarakod, Honnavar Taluk, Uttara Kannada District, has gained international recognition as 'Blue Flag'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X