ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮುದ್ರದಲ್ಲಿ 12 ಕಿ.ಮೀ ಒಬ್ಬಂಟಿಯಾಗಿ ಕಯಾಕ್ ಮಾಡಿ ಸಾಹಸ ಮೆರೆದ ಪತ್ರಕರ್ತ!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜನವರಿ 18: ಸಾಮಾನ್ಯವಾಗಿ ಪ್ರವಾಸಿಗರನ್ನು ಆಕರ್ಷಿಸಲು ನದಿಗಳಲ್ಲಿ ಕಯಾಕ್ ಸಾಹಸ ಚಟುವಟಿಕೆ ನಡೆಯೋದನ್ನು ನೋಡಿದ್ದೇವೆ. ಆದರೆ ಅರಬ್ಬಿ ಸಮುದ್ರದಲ್ಲಿ ಕಯಾಕ್ ಮಾಡುವ ಮೂಲಕ ಪತ್ರಕರ್ತನೋರ್ವ ಸಾಹಸ ಮೆರೆದಿದ್ದಾರೆ. ಉತ್ತರ ಕನ್ನಡದ ದಿಗ್ವಿಜಯ ನ್ಯೂಸ್ ಜಿಲ್ಲಾ ವರದಿಗಾರ ಶೇಷಗಿರಿ ಮುಂಡಳ್ಳಿ ಸಾಹಸ ಮೆರೆದ ಪತ್ರಕರ್ತರಾಗಿದ್ದಾರೆ.

ರವಿವಾರ ಬೆಳಿಗ್ಗೆ ಕಾರವಾರ ನಗರದ ಅಲಿಗದ್ದಾ ಕಡಲತೀರದಿಂದ ಒಬ್ಬಂಟಿಯಾಗಿ ಸಿಂಗಲ್ ಕಯಾಕ್ ಮೇಲೆ ತೆರಳಿದ ಇವರು ಆಳ ಸಮುದ್ರದಲ್ಲಿ ತಮ್ಮ ಪಯಣ ಮುಂದುವರಿಸಿದ್ದಾರೆ. ಕಡಲ ಅಲೆಯನ್ನು ಲೆಕ್ಕಿಸದೇ ಹುಟ್ಟು ಹಾಕುತ್ತಾ ಸಾಗಿದ್ದಾರೆ. ಒಂದು ತಾಸು 20 ನಿಮಿಷಗಳಲ್ಲಿ ಲೈಟ್ ಹೌಸ್ ಇರುವ ದ್ವೀಪ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ಉದ್ಧವ್ ಠಾಕ್ರೆ ಹೇಳಿಕೆ; ಪ್ರತಿಕ್ರಿಯೆಗೆ ನಿರಾಕರಿಸಿದ ಅನಂತಕುಮಾರ್ ಹೆಗಡೆ!ಉದ್ಧವ್ ಠಾಕ್ರೆ ಹೇಳಿಕೆ; ಪ್ರತಿಕ್ರಿಯೆಗೆ ನಿರಾಕರಿಸಿದ ಅನಂತಕುಮಾರ್ ಹೆಗಡೆ!

ಈ ಹಿಂದೆ ಶಾಲಾ-ಕಾಲೇಜಿಗೆ ಹೋಗುವ ಸಂದಭರ್ದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೇ ಕಾಲೇಜಿನಲ್ಲಿ ಸೈಕಲ್ ರೇಸ್ ನಲ್ಲೂ ಕೂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಸಾಮಾನ್ಯವಾಗಿ ಪತ್ರಿಕಾ ವೃತ್ತಿಯಲ್ಲಿರುವವರು ಸದಾ ಸುದ್ದಿಯಲ್ಲಿಯೇ ಇರುತ್ತಾರೆ. ಅವರಿಗೆ ಸಮಯ ವಿಶ್ರಾಂತಿ ಅಂತಾ ಸಿಗೋದಿಲ್ಲ. ಈ ನಡುವೆಯ ತಮ್ಮ ಒತ್ತಡ ಮರೆತು ಇವರು ನದಿಯನ್ನು ಮೀರಿದ ಸಮುದ್ರದಲ್ಲಿ ಕಯಾಕ್ ಅಡ್ವೆಂಚರ್ ಮಾಡಿ ಯಶಸ್ವಿಯಾಗಿರುವುದಕ್ಕ ಭೇಷ್ ಅನ್ನಲೇಬೇಕು.

 Karwar: Journalist Who Did 12 Km Kayak At Arebian Sea

ಇವರ ಸಾಹಸಮಯ ಕಾರ್ಯಕ್ಕೆ ಕರಾವಳಿ ಅಡ್ವೆಂಚರ್ ಪ್ರಕಾಶ ಹರಿಕಂತ್ರ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಟಿ.ಬಿ ಹರಿಕಾಂತ, ವಿಜಯವಾಣಿ ಜಿಲ್ಲಾ ವರದಿಗಾರ ಸುಭಾಷ್ ಧೂಪದಹೊಂಡ ಸೇರಿ ಕಾರವಾರ ಪತ್ರಕರ್ತರು ಸಹಕರಿಸಿದ್ದಕ್ಕೆ ಈ ಸಾಧನೆ ಸಾಧ್ಯವಾಗಿದೆ ಎಂದು ಶೇಷಗಿರಿ ಹೇಳಿದ್ದಾರೆ.

Recommended Video

Special Report :Karnataka-Maharashtra ಗಡಿವಿವಾದ ಬೂದಿ ಮುಚ್ಚಿದ ಕೆಂಡ- ಇದು ಇಂದು ನಿನ್ನೆಯ ವಿವಾದವಲ್ಲ..!

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಸಾಹಸಮಯ ಚಟುವಟಿಕೆಗಳು ಕಡಿಮೆಯಾಗುತ್ತಿದೆ. ಮೊಬೈಲ್ ಹಿಡಿದು ಯುವ ಜನತೆ ಕಾಲ ಹರಣ ಮಾಡುತ್ತಿದ್ದಾರೆ. ಹೀಗಾಗಿ ಯುವ ಜನರ ಗಮನ ಸೆಳೆಯುವ ಸಲುವಾಗಿ ಅರಬ್ಬಿ ಸಮುದ್ರದಲ್ಲಿ ಈ ಸಾಹಸ ಮಾಡಿದ್ದಾರೆ. ಈ ಸಾಹಸಕ್ಕೆ ಕಾರವಾರದ ಪತ್ರಕರ್ತರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಜಿಲ್ಲೆಯ ವಿವಿದೆಡೆಯಿಂದ ಸ್ನೇಹಿತರು ಅಭಿನಂದಿಸಿದ್ದಾರೆ.

English summary
A journalist has Adventured on a kayak in the Arabian Sea at Karwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X