ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ ನಗರಸಭೆ ಚುನಾವಣೆ: ಬಿಜೆಪಿಗೆ ಆನಂದ್ ಅಸ್ನೋಟಿಕರ್ ಬೆಂಬಲ

|
Google Oneindia Kannada News

ಕಾರವಾರ, ಅಕ್ಟೋಬರ್ 30: ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಗುರುವಾರ ಘೋಷಣೆ ಮಾಡಿದ್ದಾರೆ.

31 ಸದಸ್ಯ ಬಲದ ಕಾರವಾರ ನಗರಸಭೆಯಲ್ಲಿ ತಲಾ 11 ಸ್ಥಾನವನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಗೆದ್ದಿದ್ದರೆ, ಜೆಡಿಎಸ್ 4 ಹಾಗೂ ಪಕ್ಷೇತರರು 5 ಸ್ಥಾನದಲ್ಲಿ ಗೆದ್ದಿದ್ದರು. ಇನ್ನು ಗೆದ್ದಂತಹ ಇಬ್ಬರು ಪಕ್ಷೇತರರು ಆನಂದ್ ಅಸ್ನೋಟಿಕರ್ ಜೊತೆ ಗುರುತಿಸಿಕೊಂಡಿದ್ದು, ಆರು ಜನ ಸದಸ್ಯರು ಆನಂದ್ ಒಟ್ಟಿಗೆ ಇದ್ದ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಯಾರೇ ಬರಲು ಜೆಡಿಎಸ್ ಬೆಂಬಲ ಅನಿವಾರ್ಯವಾಗಿತ್ತು.

ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ-ಜೆಡಿಎಸ್ ಮೈತ್ರಿ?ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ-ಜೆಡಿಎಸ್ ಮೈತ್ರಿ?

ನವೆಂಬರ್ 1ರಂದು ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು, ಜೆಡಿಎಸ್ ಪಕ್ಷದ ನಾಲ್ವರು ಹಾಗೂ ಇಬ್ಬರು ಪಕ್ಷೇತರರು ಬಿಜೆಪಿಗೆ ಬೆಂಬಲ ಕೊಡಲಿದ್ದಾರೆ. ನಗರಸಭೆಯ ಸಂಪೂರ್ಣ ಆಡಳಿತವನ್ನು ಬಿಜೆಪಿಗರೇ ಮಾಡಲಿದ್ದು, ನಾವು ಬಾಹ್ಯ ಬೆಂಬಲ ಕೊಡಲಿದ್ದೇವೆ ಎಂದು ಆನಂದ್ ಅಸ್ನೋಟಿಕರ್ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಘೋಷಿಸಿದರು.

 Karwar: JDS Supporting BJP In Municipal Council Election

ನಗರಸಭೆ ಚುನಾವಣೆಯಾಗಿ ಎರಡು ವರ್ಷವಾದರೂ ಸದಸ್ಯರಿಗೆ ಅಧಿಕಾರ ಸಿಗದೇ ಇದ್ದದ್ದು ಬೇಸರ ತಂದಿದೆ. ಈಗ ಚುನಾವಣೆ ನಡೆಸಲು ನಿರ್ಧರಿಸಿದ್ದು, ಕಾರವಾರದ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲ ಕೊಡಲು ನಿರ್ಧರಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಹೆಚ್ಚಿನ ಅನುದಾನ ತರಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಬೇಡಿಕೆ ಇಲ್ಲದೇ ಬೆಂಬಲ ಕೊಡಲು ನಿರ್ಧರಿಸಿದ್ದೇವೆ ಎಂದರು.

ಜೆಡಿಎಸ್ ಬೆಂಬಲ ನೀಡಿರುವುದು ಸ್ವಾಗತಾರ್ಹ: ರೂಪಾಲಿ ನಾಯ್ಕ
ಕಾರವಾರ ನಗರಸಭೆಯಲ್ಲಿ ಬಿಜೆಪಿ ಆಡಳಿತ ನಡೆಸಲು ಜೆಡಿಎಸ್ ಬೆಂಬಲ ನೀಡಿರುವುದು ಸ್ವಾಗತಾರ್ಹ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ. ನಗರಸಭೆಯಲ್ಲಿ ಉತ್ತಮ ಆಡಳಿತವನ್ನು ಮುಂದಿನ ದಿನದಲ್ಲಿ ಬಿಜೆಪಿ ಕೊಡಲಿದೆ. ಎಲ್ಲರೂ ಕುಳಿತು ಚರ್ಚೆ ನಡೆಸಿಯೇ ತಿರ್ಮಾನಗ ತೆಗೆದುಕೊಳ್ಳಲಿದ್ದೇವೆ. ಮುಂದಿನ ದಿನದಲ್ಲಿ ಕಾರವಾರ ನಗರಸಭೆ ಮಾದರಿ ನಗರಸಭೆ ಎನ್ನುವ ಹೆಗ್ಗಳಿಕೆ ಪಡೆಯಬೇಕೆಂಬುದು ನಮ್ಮ ಉದ್ದೇಶ ಎಂದಿದ್ದಾರೆ.

English summary
"Jds will support bjp in municipal council president and vice president election" announced former minister Anand Asnotikar in karwar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X