ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಸ್ಲಾಂ ಕುರಿತ ಹೇಳಿಕೆ; ಅನಂತಕುಮಾರ್ ಹೆಗಡೆ ಆರೋಪ ಮುಕ್ತ

By ಕಾರವಾರ ಪ್ರತಿನಿಧಿ
|
Google Oneindia Kannada News

ಶಿರಸಿ, ಡಿಸೆಂಬರ್ 29; "ಎಲ್ಲಿಯವರೆಗೆ ಜಗತ್ತಿನಲ್ಲಿ ಇಸ್ಲಾಂ ಇರುತ್ತದೆಯೋ, ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ" ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ಈ ಕುರಿತು ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಿಂದ ಅವರು ಖುಲಾಸೆಗೊಂಡಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಿಂದ ಅವರನ್ನು ಖುಲಾಸೆಗೊಳಿಸಿದೆ. ಶಿರಸಿಯಲ್ಲಿ 2016ರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆಯನ್ನು ಅವರು ನೀಡಿದ್ದರು.

ಇಸ್ಲಾಂ ಕುರಿತು ಸಂಸದ ತೇಜಸ್ವಿ ಟ್ವೀಟ್: ಅಳಿಸಿ ಹಾಕಲು ಟ್ವಿಟ್ಟರ್‌ಗೆ ಕೇಂದ್ರ ಮನವಿ ಇಸ್ಲಾಂ ಕುರಿತು ಸಂಸದ ತೇಜಸ್ವಿ ಟ್ವೀಟ್: ಅಳಿಸಿ ಹಾಕಲು ಟ್ವಿಟ್ಟರ್‌ಗೆ ಕೇಂದ್ರ ಮನವಿ

"ಎಲ್ಲಿಯವರೆಗೆ ಜಗತ್ತಿನಲ್ಲಿ ಇಸ್ಲಾಂ ಇರುತ್ತದೆಯೋ, ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ. ಇಸ್ಲಾಂ ಜಗತ್ತಿನ ಶಾಂತಿಗೆ ಇಟ್ಟಿರುವ ಬಾಂಬ್. ಇಸ್ಲಾಂ ಇರುವವರೆಗೆ ಜಗತ್ತಿನಲ್ಲಿ ನೆಮ್ಮದಿ ಇಲ್ಲ. ಭಟ್ಕಳ ಭಯೋತ್ಪಾದನೆಯ ಕೇಂದ್ರವಾಗಿದೆ' ಎಂದು ಹೇಳಿಕೆ ಕೊಟ್ಟಿದ್ದರು.

 ಇಸ್ಲಾಂ ವಿರುದ್ಧ ಅವಹೇಳನಕಾರಿ ಪೋಸ್ಟ್– ದುಬೈನಲ್ಲಿ ಕೆಲಸದಿಂದ ಹಾವೇರಿ ಯುವಕ ವಜಾ ಇಸ್ಲಾಂ ವಿರುದ್ಧ ಅವಹೇಳನಕಾರಿ ಪೋಸ್ಟ್– ದುಬೈನಲ್ಲಿ ಕೆಲಸದಿಂದ ಹಾವೇರಿ ಯುವಕ ವಜಾ

Islam And Terrorism Statement Anant Kumar Hegde Acquitted

"ಪತ್ರಿಕೆಗಳಲ್ಲಿ ಬರಿಯೋ ಅವಕಾಶ ಇದ್ದರೆ ಇದೇ ಶಬ್ದಗಳಲ್ಲಿ ಬರೆಯಿರಿ. ಶೇ 100ರಷ್ಟು ನಾನು ನೀಡುವ ಹೇಳಿಕೆಯನ್ನು ಮುಂದೆಯೂ ಒಪ್ಪಿಕೊಳ್ಳುತ್ತೇನೆ. ಮುಂದೆ ನಾನು ಈ ವಾಕ್ಯವನ್ನು ಹೇಳಿಲ್ಲ ಅಂತಲೂ ಹೇಳುವುದಿಲ್ಲ" ಎಂದು ಕೂಡ ಮಾಧ್ಯಮದವರಿಗೆ ಸವಾಲು ಹಾಕಿದ್ದರು.

ಇಸ್ಲಾಂ ಧಾರ್ಮಿಕ ಭಾಷಣಗಾರ ಜಾಕೀರ್ ಆಸ್ತಿ ವಶಕ್ಕೆ ಆದೇಶಇಸ್ಲಾಂ ಧಾರ್ಮಿಕ ಭಾಷಣಗಾರ ಜಾಕೀರ್ ಆಸ್ತಿ ವಶಕ್ಕೆ ಆದೇಶ

ಸಂಸದರ ಹೇಳಿಕೆಯಿಂದಾಗಿ ಮುಸಲ್ಮಾನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಮುರಾದ್ ಹುಸೇನ್ ಎನ್ನುವವರು ದೂರು ನೀಡಿದ್ದರು. ಆದರೆ, ಸಂಸದರ ಪರ ವಕೀಲ ಸಂತೋಷ್ ನಗರಾಳೆ, "ಈ ಹೇಳಿಕೆಗಳನ್ನು ಅವರು ಉದ್ದೇಶಪೂರ್ವಕವಾಗಿ ನೀಡಿದ್ದಲ್ಲ. ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವೂ ಅವರಿಗೆ ಇರಲಿಲ್ಲ" ಎಂದು ವಾದ ಮಂಡನೆ ಮಾಡಿದ್ದರು.

Recommended Video

ಧರ್ಮೆ ಗೌಡ ಕಾರ್ ಚಾಲಕ ಪ್ರತಿಕ್ರಿಯೆ| Dharme Gowda Car Driver | Oneindia Kannada

ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ತ್ಯಾಗರಾಜ ಎನ್. ಇನವಳ್ಳಿ ಪ್ರಕರಣದಿಂದ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.

English summary
Special court for elected representatives acquitted BJP MP Anant Kumar Hegde. Criminal case booked against BJP leader for his statement on booked Islam and terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X