ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಸೋಂಕಿತರ 'ಮನಸ್ಸಿನ ಆರೋಗ್ಯಕ್ಕೆ ಆಪ್ತ ಮಾತು’

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್ 24; ಕೊರೊನಾ ಸೋಂಕಿಗೆ ಒಳಗಾದವರು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿ, ಆತ್ಮಹತ್ಯೆಯಂತಹ ಹೆಜ್ಜೆಯಿಟ್ಟ ಘಟನೆಗಳು ದೇಶ, ರಾಜ್ಯದಲ್ಲಿ ನಡೆದಿದೆ. ಹೀಗಾಗಿ ಸೋಂಕಿತರ ಹಾಗೂ ಸೋಂಕಿನಿಂದ ಗುಣಮುಖರಾದವರ ಮಾನಸಿಕ ಒತ್ತಡ ನಿವಾರಿಸಲು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 'ಮನಸ್ಸಿನ ಆರೋಗ್ಯಕ್ಕೆ ಆಪ್ತ ಮಾತು' ಎಂಬ ಸಹಾಯವಾಣಿ ಆರಂಭಿಸಲಾಗಿದೆ.

ಕೋವಿಡ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದ್ದರಿಂದ ಸೋಂಕಿತರನ್ನು ಜನರು ನೋಡುವ ದೃಷ್ಟಿಕೋನವೇ ಬೇರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸೋಂಕಿಗೆ ಗುರಿಯಾದವರು ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದು, ಕೊರೊನಾ ಸೋಂಕಿನ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ.

ಕಾರವಾರ; ವೃದ್ಧೆಯ ಸಂಕಷ್ಟಕ್ಕೆ ಮಿಡಿದ ಉಪವಿಭಾಗಾಧಿಕಾರಿಕಾರವಾರ; ವೃದ್ಧೆಯ ಸಂಕಷ್ಟಕ್ಕೆ ಮಿಡಿದ ಉಪವಿಭಾಗಾಧಿಕಾರಿ

ಇನ್ನು ಸೋಂಕಿಗೆ ಗುರಿಯಾಗಿ ತನ್ನ ದೇಹದಲ್ಲಿ ಬದಲಾವಣೆ ಆಗುತ್ತಿದೆ ಎನ್ನುವ ಭಯದಲ್ಲಿಯೇ ಜನರು ಹೆದರಿ ಇನ್ನಷ್ಟು ಅಪಾಯ ತಂದುಕೊಳ್ಳುತ್ತಿದ್ದಾರೆ. ಸೋಂಕಿಗೆ ಒಳಗಾದವರ ಮಾನಸಿಕ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ವಿಭಾಗದ ವತಿಯಿಂದ 'ಮನಸ್ಸಿನ ಆರೋಗ್ಯಕ್ಕೆ ಆಪ್ತ ಮಾತು' ಎನ್ನುವ ವಿಷಯವನ್ನ ಇಟ್ಟುಕೊಂಡು ಸಹಾಯವಾಣಿ ಪ್ರಾರಂಭಿಸಲಾಗಿದೆ.

ಕಾರವಾರ: ಬ್ಲ್ಯಾಕ್ ಫಂಗಸ್ ಎರಡನೇ ಪ್ರಕರಣ ಪತ್ತೆ!ಕಾರವಾರ: ಬ್ಲ್ಯಾಕ್ ಫಂಗಸ್ ಎರಡನೇ ಪ್ರಕರಣ ಪತ್ತೆ!

Karwar Institute Of Medical Sciences Set Up Helpline For Covid Patients

ಕೋವಿಡ್ ಸೋಂಕಿಗೆ ಒಳಗಾದವರು ಹಾಗೂ ಸೋಂಕಿನಿಂದ ಗುಣಮುಖರಾದವರು ಸಹಾಯವಾಣಿಗೆ ದಿನದ 24ಯೂ ಕರೆ ಮಾಡಿ ವೈದ್ಯರಿಂದ ಸಲಹೆಗಳನ್ನು ಪಡೆಯುವ ಅವಕಾಶವನ್ನು ಮಾಡಿಕೊಡಲಾಗಿದೆ. ಮೊದಲ ಅಲೆಯಿರುವ ವೇಳೆಯಲ್ಲಿ ಜನರಿಗೆ ಕೊರೊನಾ ಸೋಂಕಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಸೋಂಕಿಗೆ ಓಳಗಾದವರು ನಂತರದ ದಿನದಲ್ಲಿ ಸಾಕಷ್ಟು ಮಾನಸಿಕ ಖಿನ್ನತೆಗೆ ಒಳಗಾದ ಘಟನೆಗಳು ನಡೆದಿತ್ತು. ಎರಡನೇ ಅಲೆ ವೇಳೆಗೆ ಸಾವಿನ ಸಂಖ್ಯೆ ಹೆಚ್ಚಾಗಿದ್ದರಿಂದ ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಹಾಗೂ ಸೋಂಕಿನಿಂದ ಗುಣಮುಖರಾದರು ಭಯದಿಂದಲೇ ಕಾಲ ಕಳೆಯುವಂತಾಗಿತ್ತು.

ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!

ಇದನ್ನ ಅರಿತ ಮಾನಸಿಕ ಆರೋಗ್ಯ ವಿಭಾಗದ ವೈದ್ಯರು ಸಹಾಯವಾಣಿ ಪ್ರಾರಂಭಿಸಿ ನಂಬರ್‌ಗಳನ್ನು ಪ್ರಕಟಿಸಿದ್ದರು. ಸೋಂಕಿಗೆ ಒಳಗಾದವರು ಅಥವಾ ಗುಣಮುಖರಾದವರು ವಿಡಿಯೋ ಕಾಲ್ ಮಾಡಿ ಅಥವಾ ಕರೆ ಮಾಡಿ ಸಲಹೆ ಪಡೆಯಬಹುದಾಗಿದೆ.

ಇನ್ನು ಕೊರೊನಾ ವಾರ್ಡ್‌ನಲ್ಲಿ ಮಾನಸಿಕ ಕಿನ್ನತೆಗೆ ಓಳಗಾದವರಿಗೂ ಸಲಹೆಗಳನ್ನು ನೀಡುತ್ತ ಧೈರ್ಯವನ್ನು ತುಂಬಿ ಗುಣಮುಖರಾಗಿ ಧೈರ್ಯದಿಂದ ವಾಪಾಸ್ ತೆರಳಲು ಸಹಾಯವಾಣಿ ಸಹಕಾರಿಯಾಗಿದೆ. ಇನ್ನು ವೈದ್ಯರ ಕಾರ್ಯಕ್ಕೆ ಸೋಂಕಿನಿಂದ ಗುಣಮುಖರಾದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ ಮೊದಲ ಅಲೆಯಲ್ಲಿ 1800 ಜನ ಸೋಂಕಿತರಿಗೆ ಸಲಹೆಯನ್ನು ನೀಡಲಾಗಿದೆ. ಎರಡನೇ ಅಲೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಸೋಂಕಿತರು ಸಲಹೆಗಳನ್ನ ಪಡೆದು ಮಾನಸಿಕ ಒತ್ತಡದಿಂದ ಹೊರ ಬಂದಿದ್ದಾರೆ. ಕೇವಲ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಯವರು ಸಹಾಯವಾಣಿಗೆ ಕರೆ ಮಾಡಿ ಸಲಹೆ ಪಡೆದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

"ವೈರಸ್ ರೂಪಾಂತರಗೊಳ್ಳುತ್ತಿದೆ. ಆದರೆ ಮನುಷ್ಯನ ಮನಸ್ಸು ರೂಪಾಂತರವಾಗುತ್ತಿಲ್ಲ. ಕೊರೊನಾ ಸೋಂಕು ದೃಢಪಟ್ಟ ನಂತರ ಹಲವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುಗುತ್ತಿದ್ದಾರೆ. ಸಹಾಯವಾಣಿ ಸಂಖ್ಯೆ 74112 64213ಗೆ ಯಾರೇ ಕರೆ ಮಾಡಿ ಅಥವಾ ವಿಡಿಯೋ ಕಾಲ್ ಮಾಡಿ ತಮ್ಮಲ್ಲಿರುವ ಸಮಸ್ಯೆ ಬಗ್ಗೆ ಹೇಳಿಕೊಂಡರೆ ಅದಕ್ಕೆ ಪರಿಹಾರ ಒದಗಿಸುವ ಕಾರ್ಯ ಮಾಡುತ್ತೇವೆ. ಕೋವಿಡ್ ವಾರ್ಡ್‌ನಲ್ಲೂ ಖುದ್ದು ಭೇಟಿ ನೀಡಿ ಮಾನಸಿಕವಾಗಿ ಸೋಂಕಿತರಿಗೆ ಧೈರ್ಯ ನೀಡುವ ಕಾರ್ಯ ಮಾಡಲಾಗುತ್ತಿದೆ" ಎನ್ನುತ್ತಾರೆ ಕ್ರಿಮ್ಸ್ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ಎನ್. ವಿಜಯರಾಜ್.

Recommended Video

ಈಜುಕೊಳ ಕಟ್ಟಿದ್ದು ರೋಹಿಣಿ ಸಿಂಧೂರಿಯ ನೈತಿಕ ಪತನ ಅಂದ್ರು IPS ಅಧಿಕಾರಿ D ರೂಪಾ | Oneindia Kannada

English summary
Karwar institute of medical sciences set up helpline for Covid patients and who recovered from Covid. People can call for helpline and get suggestions for mental health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X