• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇನ್‌ಸ್ಟಾಗ್ರಾಂನಲ್ಲಿ ಪರಿಚಯ: ಮಹಿಳೆಯಿಂದ ಪುರೋಹಿತನಿಗೆ 4.90 ಲಕ್ಷ ರೂ. ಪಂಗನಾಮ

|
Google Oneindia Kannada News

ಕಾರವಾರ, ಜುಲೈ 1: ಉಡುಗೊರೆಯ ಆಮಿಷಕ್ಕೆ ಬಲಿಯಾಗಿ ಪುರೋಹಿತರೊಬ್ಬರು 4.90 ಲಕ್ಷ ರೂ. ವಂಚನೆಗೊಳಗಾಗಿರುವ ಕುರಿತು ಕಾರವಾರದ ಸೈಬರ್ ಎಕಾನಾಮಿಕ್ಸ್ ಮತ್ತು ಮಾದಕವಸ್ತು ಅಪರಾಧ (ಸಿಇಎನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿರಸಿಯ ಬಕ್ಕಳದ ಶ್ರೀಪಾದ ಹೆಗಡೆ ವಂಚನೆಗೊಳಗಾದವರಾಗಿದ್ದು, ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಪೋರ್ಚುಗಲ್ ದೇಶದ ಮಹಿಳೆ ವಂಚನೆ ಮಾಡಿದ್ದಾಳೆ.

"ಭಾರತದಲ್ಲಿ ತಾನು ಹೂಡಿಕೆ ಮಾಡಬೇಕೆಂದಿದ್ದು, ಅದಕ್ಕಾಗಿ ನಂಬಿಕಸ್ಥ ವ್ಯಕ್ತಿಯನ್ನು ಹುಡುಕುತ್ತಿದ್ದೇನೆಂದು ಪರಿಚಯಿಸಿಕೊಂಡಿದ್ದಾಳೆ. ತನ್ನ ಪ್ರತಿನಿಧಿಯಾಗಿ ವ್ಯಕ್ತಿಯೋರ್ವ ಭಾರತಕ್ಕೆ ಬರುತ್ತಿದ್ದು, ಉಡುಗೊರೆಯಾಗಿ ಬಟ್ಟೆ, ಶೂ, ವಾಚ್, ಮೊಬೈಲ್ ಫೋನ್ ಹಾಗೂ 2 ಲಕ್ಷ ಡಾಲರ್ ಹಣವನ್ನು ಕಳುಹಿಸಿಕೊಡುತ್ತಿರುವುದಾಗಿ,'' ತಿಳಿಸಿದ್ದಾಳೆ.

   ಭಾರತೀಯ ಲಸಿಕೆಗಳಿಗೆ ಯೂರೋಪ್ ರಾಷ್ಟ್ರಗಳಲ್ಲಿ ಅನುಮೋದನೆ ಇಲ್ಲ | Oneindia Kannada

   ಅದರಂತೆ ಆಕೆಯ ಪ್ರತಿನಿಧಿ ತಾನು ಭಾರತಕ್ಕೆ ಬಂದಿರುವುದಾಗಿ ಕರೆ ಮಾಡಿ, "ವಿಮಾನಯಾನ ಖರ್ಚು ಹಾಗೂ ತೆರಿಗೆ ಕಟ್ಟಬೇಕೆಂದು ಶ್ರೀಪಾದರ ಬಳಿಕ ಹಣ ಕೇಳಿದ್ದಾನೆ. ಆತನ ಮಾತು ನಂಬಿ ವಿವಿಧ ಬ್ಯಾಂಕ್ ಖಾತೆಗೆ ಜೂ.10ರಿಂದ 25ರವರೆಗೆ ಹಣ ವರ್ಗಾಯಿಸಿದ್ದು, ಆರೋಪಿತರು ಯಾವುದೇ ಪಾರ್ಸಲ್ ಅನ್ನು ನೀಡದೇ ಮೋಸ ಮಾಡಿದ್ದಾರೆಂದು,'' ದೂರಿನಲ್ಲಿ ತಿಳಿಸಿದ್ದಾರೆ.

   English summary
   Instagram lady friend dupes Sirsi priest of Rs 4.90 lakh on pretext of sending costly gift, Case Filed In Karwar Police Station.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X