• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರವಾರ ಸಮುದ್ರ ವ್ಯಾಪ್ತಿಯಲ್ಲಿ ಪ್ರಯೋಗಕ್ಕೊಳಪಡಲಿದೆಯೇ ಐಎನ್ಎಸ್ ವಿಕ್ರಾಂತ್?

|

ಕಾರವಾರ, ಅಕ್ಟೋಬರ್ 14: ಭಾರತದ ಪ್ರಥಮ ದೇಶೀಯ ವಿಮಾನವಾಹಕ ನೌಕೆ ಐಎನ್ ‌ಎಸ್ ವಿಕ್ರಾಂತ್ ಅನ್ನು ಡಿಸೆಂಬರ್ ಹೊತ್ತಿಗೆ ಕಾರವಾರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ಇಳಿಸಿ ಪ್ರಯೋಗಕ್ಕೊಳಪಡಿಸುವ ಸಾಧ್ಯತೆ ಇದೆ.

ಭಾರತದ ಮೊದಲ, ದೇಶೀಯವಾಗಿ ನಿರ್ಮಿಸಲಾದ ವಿಮಾನವಾಹಕ ನೌಕೆ ವಿಕ್ರಾಂತ್ ಅಂತಿಮವಾಗಿ ಪೂರ್ವ ಇಂಡಕ್ಷನ್ ಹಂತಕ್ಕೆ ಪ್ರವೇಶಿಸುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಸಮುದ್ರ ಪ್ರಯೋಗಕ್ಕೆ ಇಳಿಯಲಿದ್ದು, ಮೂಲಗಳ ಪ್ರಕಾರ ಪಶ್ಚಿಮ ಕರಾವಳಿಯ ಕಾರವಾರ ವ್ಯಾಪ್ತಿಯ ಸಮುದ್ರದಲ್ಲಿ ಇದು ಸಂಚಾರ ನಡೆಸಲಿದೆ ಎನ್ನಲಾಗಿದೆ.

 ಅಗತ್ಯ ವ್ಯವಸ್ಥೆಗಳ ಅಳವಡಿಕೆ ಪೂರ್ಣ

ಅಗತ್ಯ ವ್ಯವಸ್ಥೆಗಳ ಅಳವಡಿಕೆ ಪೂರ್ಣ

ಈಗಾಗಲೇ ನೌಕೆಯಲ್ಲಿ ಅಗತ್ಯವಾದ ವ್ಯವಸ್ಥೆಗಳು, ಸಲಕರಣೆಗಳನ್ನು ಅಳವಡಿಸಲಾಗಿದೆ. ಪ್ರಸರಣ ಹಾಗೂ ಇತರ ವ್ಯವಸ್ಥೆಗಳು ಈ ವರ್ಷದ ಆರಂಭದಲ್ಲಿ ಪ್ರಾರಂಭವಾಗಬೇಕಿತ್ತಾದರೂ ಕೋವಿಡ್- 19 ಸಾಂಕ್ರಾಮಿಕದ ಕಾರಣ ಮುಂದೂಡಲಾಗಿತ್ತು. ಇದೀಗ ಒಂದೊಂದೇ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ.

ಭಾರತೀಯ ನೌಕಾದಿನ: ನೌಕಾಪಡೆ ಕುರಿತು ಹೆಮ್ಮೆಪಡುವ 10 ಸಂಗತಿ

 1997ರ ಜನವರಿಯಲ್ಲಿ ಸ್ವದೇಶಿ ವಿಕ್ರಾಂತ್ ನಿರ್ಮಿಸುವ ಯೋಜನೆ

1997ರ ಜನವರಿಯಲ್ಲಿ ಸ್ವದೇಶಿ ವಿಕ್ರಾಂತ್ ನಿರ್ಮಿಸುವ ಯೋಜನೆ

ಕೇರಳದ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಲ್ಲಿ ನಿರ್ಮಿಸಲಾಗಿರುವ ಐಎನ್ ‌ಎಸ್ ವಿಕ್ರಾಂತ್ 40,000 ಟನ್ ತೂಕ ಹೊಂದಿದ್ದು, 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲವಿದೆ. ಐಎನ್ಎಸ್ ವಿಕ್ರಾಂತ್ ನಿವೃತ್ತವಾದ ಬಳಿಕ ಮತ್ತು ಐಎನ್ಎಸ್ ವಿಕ್ರಮಾದಿತ್ಯ ಆಗಮನದ ನಂತರ 1997ರ ಜನವರಿಯಲ್ಲಿ ಈ ಸ್ವದೇಶಿ ವಿಕ್ರಾಂತ್ ನಿರ್ಮಿಸುವ ಯೋಜನೆಯನ್ನು ಯೋಜಿಸಲಾಗಿತ್ತು.

 ಸ್ವದೇಶಿ ವಿಮಾನವಾಹಕ ನೌಕೆ

ಸ್ವದೇಶಿ ವಿಮಾನವಾಹಕ ನೌಕೆ

ಈ ಹಿಂದೆ ಏರ್ ಡಿಫೆನ್ಸ್ ಶಿಪ್ ಎಂದು ಕರೆಯಲಾಗುತ್ತಿದ್ದ ಈ ಯೋಜನೆಯಲ್ಲಿ 20,000 ಟನ್ ತೂಕದ ನೌಕೆಯನ್ನು ನಿರ್ಮಿಸಲು ಯೋಜಿಸಲಾಗಿತ್ತು. ಆದಾಗ್ಯೂ ನಂತರದ ಹಂತದಲ್ಲಿ ಇದನ್ನು 37,500ಕ್ಕೆ ಹೆಚ್ಚಿಸಲಾಗಿತ್ತು. ಇದರಿಂದಾಗಿ ಮಿಗ್ 29ಕೆ ನಂತಹ ಯುದ್ಧ ವಿಮಾನಗಳನ್ನು ಸಾಗಿಸಲು ಮತ್ತು ಹಿಂದಿನ ವಾಯು ರಕ್ಷಣಾ ನೌಕೆಯಿಂದಾಗಿ ಈ ಹೆಸರನ್ನು ಸ್ವದೇಶಿ ವಿಮಾನವಾಹಕ ನೌಕೆ ಎಂದು ಬದಲಾಯಿಸಲಾಯಿತು.

8 ತಿಂಗಳ ರಜೆ ಹಾಕಿದ ವಿಕ್ರಮಾದಿತ್ಯ, ಪರಿಹಾರ ಏನು?

 ಡೈರೆಕ್ಟರೇಟ್ ಆಫ್ ನೇವಲ್ ಡಿಸೈನ್ ನಿಂದ ವಿನ್ಯಾಸ

ಡೈರೆಕ್ಟರೇಟ್ ಆಫ್ ನೇವಲ್ ಡಿಸೈನ್ ನಿಂದ ವಿನ್ಯಾಸ

ಹಲವಾರು ಕಾರಣಗಳಿಂದಾಗಿ ಈ ಯೋಜನೆ ವಿಳಂಬವಾಗಿತ್ತು. ಅಂತಿಮವಾಗಿ ಅದರ ಆಧುನಿಕ ಮೂಲಸೌಕರ್ಯ ಸೌಲಭ್ಯಗಳನ್ನು ಪರಿಗಣಿಸಿ ಅದನ್ನು ಸಿಎಸ್ ‌ಎಲ್‌ಗೆ ವಹಿಸಲಾಗಿದೆ. ಈ ನೌಕೆಯನ್ನು ಡೈರೆಕ್ಟರೇಟ್ ಆಫ್ ನೇವಲ್ ಡಿಸೈನ್ ವಿನ್ಯಾಸಗೊಳಿಸಿದ್ದು, ಇದು ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮೊದಲ ಯೋಜನೆಯಾಗಿದೆ.

   ಆನೆಯ ಮೇಲೆ ಯೋಗಾಸನ ಮಾಡುವಾಗ ಉರುಳಿಬಿದ್ದ ರಾಮದೇವ್‌ ಬಾಬಾ! Oneindia kannada

   English summary
   INS Vikrant, a domestic aircraft carrier is likely to be under experiment by December at Arabian Sea in the Karwar range
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X