ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

20 ದಿನಗಳ ಬಳಿಕ ಕ್ರೂಸ್ ನಿಂದ ಹೊರಬಂದ ಭಾರತೀಯರು

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಫೆಬ್ರವರಿ 27: ಕೊರೋನಾ ಭೀತಿಯಿಂದಾಗಿ ಡೈಮಂಡ್ ಕ್ರೂಸ್ ನಲ್ಲಿ ಸಿಲುಕಿಕೊಂಡಿದ್ದ ಕಾರವಾರಿಗ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಅಭಿಷೇಕ್ ಮಗರ್ ಸುರಕ್ಷಿತವಾಗಿರುವುದಾಗಿ ತಿಳಿದುಬಂದಿದೆ.

ಅಭಿಷೇಕ್ ಮತ್ತು ಭಾರತೀಯ ಮೂಲದ 127 ಜನರು ದೆಹಲಿಗೆ ಬಂದಿಳಿದಿದ್ದಾರೆ. ಪ್ರಸ್ತುತ ಹರಿಯಾಣ ಮಿಲಿಟರಿ ಕ್ಯಾಂಪ್‌ನಲ್ಲಿದ್ದಾರೆ. ಕೊರೊನಾ ಶಂಕೆ ಹಿನ್ನೆಲೆ ಚೈನಾದಿಂದ ಜಪಾನಿಗೆ ಆಗಮಿಸುವ ವೇಳೆ ಯೂಕೊಹಾಮಾದಲ್ಲಿ ಜಪಾನ್ ಸರ್ಕಾರ ಡೈಮಂಡ್ ಕ್ರೂಸ್ ಅನ್ನು ತಡೆಹಿಡಿದಿತ್ತು.

ಮೃತ್ಯುಕೂಪವಾದ ಜಪಾನ್‌ ಹಡಗು: ಕೊರೊನಾಗೆ ಇಬ್ಬರು ಬಲಿ ಮೃತ್ಯುಕೂಪವಾದ ಜಪಾನ್‌ ಹಡಗು: ಕೊರೊನಾಗೆ ಇಬ್ಬರು ಬಲಿ

ಡೈಮಂಡ್ ಪ್ರಿನ್ಸೆಸ್ ಕ್ರೂಸ್ ನಲ್ಲಿ ಅಭಿಷೇಕ್ ಉದ್ಯೋಗ ಮಾಡುತ್ತಿದ್ದರು. ಇದೀಗ 20 ದಿನಗಳ ಬಳಿಕ ಕ್ರೂಸ್ ನಿಂದ ಎಲ್ಲರೂ ಹೊರಬಂದಿದ್ದಾರೆ. ಅಭಿಷೇಕನನ್ನು ಊರಿಗೆ ಕರೆತರಲು ಭಾರತೀಯ ರಾಯಭಾರಿ ಕಚೇರಿ ಅಗತ್ಯ ಕ್ರಮ‌ಕೈಗೊಂಡಿದ್ದು, ಇನ್ನು 15 ದಿನಗಳ ಬಳಿಕ ಕಾರವಾರಕ್ಕೆ ಅಭಿಷೇಕ್ ಬರುವುದಾಗಿ ತಿಳಿದುಬಂದಿದೆ. ತೀವ್ರ ಆರೋಗ್ಯ ತಪಾಸಣೆ ಬಳಿಕವೇ ಮನೆಗೆ ಮರಳಲು ಅವಕಾಶ ನೀಡಲಾಗುವುದು.

Indias Stucked In Diamond Cruise Safely Returned

ಡೈಮಂಡ್ ಕ್ರೂಸ್ ನಲ್ಲಿ ಒಟ್ಟು 137 ಭಾರತೀಯರು ಸಿಲುಕಿದ್ದರು.

English summary
Indians who were trapped in a diamond cruise because of corona virus fear have returned safely to India. Abhishek Magar from Karwar in Uttara Kannada district, has been found to be safe and will return within 15 days,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X