ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕೋವಿಡ್ ವರ್ಷ'ದಲ್ಲೂ ಇಳಿಕೆಯಾಗದ ಅಪರಾಧ'; ಹೆಚ್ಚಿದ ಡ್ರಗ್ಸ್ ಪ್ರಕರಣಗಳ ಸದ್ದು

|
Google Oneindia Kannada News

ಕಾರವಾರ, ಡಿಸೆಂಬರ್ 9: 2020ರ ವರ್ಷ ಪೂರ್ತಿ ಕೋವಿಡ್ ಸೋಂಕಿನಿಂದಲೇ ಜನ ಜರ್ಜರಿತರಾಗಿದ್ದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆಯಲ್ಲೇನು ಹೆಚ್ಚು ಇಳಿಕೆಯಾಗಿಲ್ಲ.

ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಮಾದಕ ವಸ್ತುಗಳ ಬಳಕೆ, ಸಾಗಾಟ ಹಾಗೂ ಮಾರಾಟ ದಂಧೆಯತ್ತ ಕಣ್ಣಿಟ್ಟಿದ್ದ ಉತ್ತರ ಕನ್ನಡ ಪೊಲೀಸರು, ಉತ್ತರ ಕನ್ನಡ ಜಿಲ್ಲೆಯಲ್ಲೂ ಕಾರ್ಯಾಚರಣೆಗಳನ್ನು ನಡೆಸಿದ್ದರು. ಮಾದಕ ವಸ್ತುಗಳ ಬಳಕೆ, ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಗೋಕರ್ಣ ಹಾಗೂ ಶಿರಸಿ ಸೇರಿ ಈ ವರ್ಷ ಒಟ್ಟು 31 ಪ್ರಕರಣ ದಾಖಲಾಗಿದ್ದು, ಈ ಎರಡೂ ಸ್ಥಳವನ್ನು ಹಾಟ್‌ಸ್ಪಾಟ್ ಎಂದು ಜಿಲ್ಲಾ‌ ಪೊಲೀಸ್ ಗುರುತಿಸಿದೆ.

2020 ರಲ್ಲಿ 72 ಆರೋಪಿಗಳನ್ನು ಬಂಧಿಸಲಾಗಿದೆ

2020 ರಲ್ಲಿ 72 ಆರೋಪಿಗಳನ್ನು ಬಂಧಿಸಲಾಗಿದೆ

2017 ರಲ್ಲಿ 32 ಪ್ರಕರಣದಲ್ಲಿ 59 ಆರೋಪಿಗಳನ್ನು ಬಂಧಿಸಲಾಗಿದ್ದರೆ, 2018ರಲ್ಲಿ 16 ಪ್ರಕರಣದಲ್ಲಿ 31, 2019 ರಲ್ಲಿ 13 ಪ್ರಕರಣದಲ್ಲಿ 33 ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, 2020 ರಲ್ಲೇ ಅತಿ ಹೆಚ್ಚು ಅಂದರೆ 31 ಪ್ರಕರಣದಲ್ಲಿ 72 ಆರೋಪಿಗಳನ್ನು ಬಂಧಿಸಲಾಗಿದೆ.

ತುಕ್ಕು ಹಿಡಿಯುತ್ತಿದೆ ನಟ್- ಬೋಲ್ಟ್; ನಿರ್ವಹಣೆ ಇಲ್ಲದೇ ಸೊರಗಿದೆ ಶಿವಪುರ ತೂಗು ಸೇತುವೆತುಕ್ಕು ಹಿಡಿಯುತ್ತಿದೆ ನಟ್- ಬೋಲ್ಟ್; ನಿರ್ವಹಣೆ ಇಲ್ಲದೇ ಸೊರಗಿದೆ ಶಿವಪುರ ತೂಗು ಸೇತುವೆ

ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ತೆ

ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ತೆ

ಇನ್ನು, ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ಕಳ್ಳತನ ಪ್ರಕರಣಗಳಲ್ಲಿ ಹೆಚ್ಚಿನದನ್ನು ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ತೆ ಹಚ್ಚಲಾಗಿದೆ. 2017 ರಲ್ಲಿ ಶೇ 30.47, 2018 ರಲ್ಲಿ ಶೇ 31.46, 2019 ರಲ್ಲಿ ಶೇ 50.90 ರಷ್ಟು ಪ್ರಕರಣ ಪತ್ತೆಯಾಗಿತ್ತು. ಪ್ರಸಕ್ತ ಶ. 71.7 ರಷ್ಟು ಸಾಧನೆಯಾಗಿದೆ. 2017 ರಲ್ಲಿ ದಾಖಲಾದ 303 ರಲ್ಲಿ 169, 2018ರ 273 ರಲ್ಲಿ 83, 2019ರ 223 ರಲ್ಲಿ 70, 2020ರ 165 ಪ್ರಕರಣದಲ್ಲಿ 77ನ್ನು ಪತ್ತೆ ಮಾಡಲಾಗಿದೆ.

ಕಾನೂನು ಬಾಹಿರವಾಗಿ ಜಾನುವಾರು ಸಾಗಾಟ

ಕಾನೂನು ಬಾಹಿರವಾಗಿ ಜಾನುವಾರು ಸಾಗಾಟ

ಕಾನೂನು ಬಾಹಿರವಾಗಿ ಜಾನುವಾರು ಸಾಗಾಟಕ್ಕೆ ಸಂಬಂಧಿಸಿ 2017 ರಲ್ಲಿ 30 ಪ್ರಕರಣದ 68 ಆರೋಪಿಗಳು, 2018 ರಲ್ಲಿ 38 ಪ್ರಕರಣದ 114 ಆರೋಪಿಗಳು, 2019 ರಲ್ಲಿ 32 ಪ್ರಕರಣದ 88 ಆರೋಪಗಳು, 2020 ರಲ್ಲಿ 51 ಪ್ರಕರಣದ 121 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮಟ್ಕಾ ದಂಧೆಗೆ ಸಂಬಂಧಿಸಿ 128 ಪ್ರಕರಣದಲ್ಲಿ 198 ಆರೋಪಿತರು, 2018 ರಲ್ಲಿ 227 ಪ್ರಕರಣದಲ್ಲಿ 365 ಆರೋಪಿಗಳು, 2019 ರಲ್ಲಿ 392 ಪ್ರಕರಣದಲ್ಲಿ 623 ಆರೋಪಿಗಳು, 2020 ರಲ್ಲಿ 210 ಪ್ರಕರಣದಲ್ಲಿ 291 ಆರೋಪಿಗಳ ಬಂಧನವಾಗಿದೆ.

ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಕರಣ

ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಕರಣ

ಇನ್ನು, ಈ ಬಗ್ಗೆ ಮಾತನಾಡಿರುವ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ""ಕೊರೊನಾ ಲಾಕ್ ಡೌನ್ ಸಮಯದಲ್ಲಿ ಅಂತಹ ಹೆಚ್ಚು ಕಳವು ಪ್ರಕರಣಗಳು ನಡೆದಿಲ್ಲ. ಕಳೆದ ವರ್ಷದಷ್ಟೇ ಅಪರಾಧ ಪ್ರಕರಣಗಳು ಈ ವರ್ಷವೂ ದಾಖಲಾಗಿದೆ. ಆದರೆ, ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಈ ಬಾರಿ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

English summary
The Crimes Cases have been More reported in Uttara Kannada district, Espcially Gokarna and Sirsi having a total of 31 cases Reported this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X