ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಮ್ಮೆ ಹಾಲಿ, ಇನ್ನೊಮ್ಮೆ ಮಾಜಿ ಶಾಸಕರಿಂದ ಮೀನು ಮಾರುಕಟ್ಟೆ ಲೋಕಾರ್ಪಣೆ

|
Google Oneindia Kannada News

ಕಾರವಾರ, ಡಿಸೆಂಬರ್ 04: ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಕಟ್ಟಡಗಳನ್ನು ಆಯ್ಕೆಯಾದ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಕ್ರಮ ಮಾಡಿ ಒಮ್ಮೆ ಉದ್ಘಾಟಿಸುವುದು ಪ್ರತೀತಿ. ಆದರೆ, ನಗರದಲ್ಲಿ ಒಂದೇ ಕಾಮಗಾರಿಯನ್ನು ಎರಡೆರಡು ಬಾರಿ ಉದ್ಘಾಟಿಸಿದ ಘಟನೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನಗರದ ನಂದನಗದ್ದಾ ಬಡಾವಣೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 27 ಲಕ್ಷ ಅನುದಾನದಲ್ಲಿ ಮೀನು ಮಾರುಕಟ್ಟೆ ಕಟ್ಟಡವನ್ನು ನಿರ್ಮಿಸಲಾಗಿತ್ತು. ಬುಧವಾರ ಶಾಸಕಿ ರೂಪಾಲಿ ನಾಯ್ಕ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ್ ಹೆಗಡೆ ಮೀನುಗಾರಿಕಾ ಇಲಾಖೆ ಹಮ್ಮಿಕೊಂಡಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಕಟ್ಟಡವನ್ನು ಉದ್ಘಾಟಿಸಿದ್ದರು. ಮುಂದೆ ಓದಿ...

 ಬೇರೆಯವರ ಕೆಲಸಕ್ಕೆ ಬಂದು ಟೇಪ್ ಕಟ್ ಮಾಡುವುದು ಪೌರುಷವಲ್ಲ; ಡಿ.ಕೆ.ಸುರೇಶ್ ಬೇರೆಯವರ ಕೆಲಸಕ್ಕೆ ಬಂದು ಟೇಪ್ ಕಟ್ ಮಾಡುವುದು ಪೌರುಷವಲ್ಲ; ಡಿ.ಕೆ.ಸುರೇಶ್

 ಕಟ್ಟಡ ಉದ್ಘಾಟಿಸಿದ್ದ ಶಾಸಕಿ ರೂಪಾಲಿ

ಕಟ್ಟಡ ಉದ್ಘಾಟಿಸಿದ್ದ ಶಾಸಕಿ ರೂಪಾಲಿ

ಕಟ್ಟಡ ಉದ್ಘಾಟನೆ ಮಾಡಿದ ಬೆನ್ನಲ್ಲೇ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಗುರುವಾರ ಮತ್ತೊಮ್ಮೆ ರಿಬ್ಬನ್ ಕತ್ತರಿಸಿ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಸ್ಥಳೀಯ ಮೀನುಗಾರರು, ಕೆಲ ನಗರಸಭಾ ಸದಸ್ಯರು, ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಗುರುವಾರ ಕಾರ್ಯಕ್ರಮ ಮಾಡಿ ಕಟ್ಟಡಕ್ಕೆ ಚಾಲನೆಯನ್ನ ನೀಡಲಾಗಿದ್ದು, ಒಂದೇ ಕಟ್ಟಡಕ್ಕೆ ಎರಡು ಬಾರಿ ಉದ್ಘಾಟನೆ ಮಾಡಿದಂತಾಗಿದೆ.

 ರೂಪಾಲಿ ನಾಯ್ಕ ಸತೀಶ್ ಸೈಲ್ ಮುಸುಕಿನ ಗುದ್ದಾಟ

ರೂಪಾಲಿ ನಾಯ್ಕ ಸತೀಶ್ ಸೈಲ್ ಮುಸುಕಿನ ಗುದ್ದಾಟ

ಹಾಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವೆ ಈ ಹಿಂದಿನಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ತನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಶಾಸಕಿ ಉದ್ಘಾಟಿಸುತ್ತಿದ್ದಾರೆ ಎಂದು ಈ ಹಿಂದೆಯೇ ಸೈಲ್ ಆರೋಪಿಸಿದ್ದರು. ಇವರಿಬ್ಬರ ಹಾಗೂ ಇವರ ಬೆಂಬಲಿಗರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೆ ಏರಿ, ಕೆಲ ದಿನಗಳಿಂದ ತಣ್ಣಗಾದಂತೆ ಕಂಡುಬಂದಿತ್ತು. ಇದೀಗ ಒಂದೇ ಕಾಮಗಾರಿಗೆ ಎರಡು ಬಾರಿ ಉದ್ಘಾಟನೆ ಮಾಡುವ ಮೂಲಕ ಮತ್ತೆ ಇಬ್ಬರ ನಡುವಿನ ರಾಜಕೀಯ ಗುದ್ದಾಟ ಮತ್ತೆ ಸುದ್ದಿಯಲ್ಲಿದೆ.

 ಮನವಿ ಮಾಡಿದ ಮೇರೆಗೆ ಮತ್ತೊಮ್ಮೆ ಉದ್ಘಾಟನೆ

ಮನವಿ ಮಾಡಿದ ಮೇರೆಗೆ ಮತ್ತೊಮ್ಮೆ ಉದ್ಘಾಟನೆ

ಕಟ್ಟಡ ಉದ್ಘಾಟಿಸಿ ಮಾತನಾಡಿರುವ ಸತೀಶ್ ಸೈಲ್, ನಂದನಗದ್ದಾ ಬಡವಾಣೆಯಲ್ಲಿ 1943ರಲ್ಲಿ ಮೀನು ಮಾರುಕಟ್ಟೆಯನ್ನು ಖಾಸಗಿ ಜಾಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಖಾಸಗಿ ಜಾಗದಲ್ಲಿ ಇದೆ ಎನ್ನುವ ಕಾರಣಕ್ಕೆ ಸರ್ಕಾರದಿಂದ ಕಟ್ಟಡ ಹೊಸದಾಗಿ ನಿರ್ಮಿಸಲು ಅನುದಾನ ಕೊಟ್ಟಿರಲಿಲ್ಲ. ಆದರೆ ಕಳೆದ ಬಾರಿ ನನ್ನ ಅವಧಿಯಲ್ಲಿ 27 ಲಕ್ಷ ಅನುದಾನ ಕೊಡಿಸಿದ್ದೆ. ಅಲ್ಲದೇ ಹೊಸದಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದರಿಂದ ತಾತ್ಕಾಲಿಕವಾಗಿ ಮೀನುಗಾರ ಮಹಿಳೆಯರಿಗೆ ಕೂರಲು ಅವಕಾಶ ಮಾಡಿಕೊಡಿಸಿದ್ದೆ. ಇದೀಗ ಕಟ್ಟಡ ನಿರ್ಮಾಣವಾಗಿದ್ದು, ಬುಧವಾರ ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿ ಹೋಗಿದ್ದರು. ಸ್ಥಳೀಯ ಮೀನುಗಾರರು ನನಗೆ ಮತ್ತೆ ಬಂದು ಉದ್ಘಾಟಿಸುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮತ್ತೊಮ್ಮೆ ಉದ್ಘಾಟಿಸಿದ್ದೇನೆ ಎಂದು ಹೇಳಿದ್ದಾರೆ.

Recommended Video

ಶಿವಮೊಗ್ಗದಲ್ಲಿ IGP Ravi ಅವರಿಗೆ ಚಾಕು ತೋರಿಸಿದ ಯುವಕ | Oneindia Kannada
 ಮೀನು ಮಾರುಕಟ್ಟೆ ಅಭಿವೃದ್ಧಿಗೆ ಸಾಲ

ಮೀನು ಮಾರುಕಟ್ಟೆ ಅಭಿವೃದ್ಧಿಗೆ ಸಾಲ

ಮುಂದಿನ ದಿನಗಳಲ್ಲಿ ಫೆಡರೇಶನ್ ಮೂಲಕ ಮೀನು ಮಾರುಕಟ್ಟೆ ಅಭಿವೃದ್ಧಿಗೆ ಸಾಲ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದೇನೆ. ಶಾಸಕರು ತಮ್ಮ ಅನುದಾನದಲ್ಲಿ ಮಾರುಕಟ್ಟೆ ಅಭಿವೃದ್ಧಿಗೆ ಹಣ ಕೊಡುವುದಾಗಿ ಹೇಳಿದ್ದಾರೆ. ಒಂದೊಮ್ಮೆ ಅವರು ಕೊಡದಿದ್ದರೂ ಫೆಡರೇಶನ್ ಮೂಲಕ ಕಟ್ಟಡ ನಿರ್ಮಾಣಕ್ಕೆ ಸಾಲವನ್ನು ಕೊಡಿಸಲಿದ್ದು, ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಿ ಆ ಹಣವನ್ನು ಫೆಡರೇಶನ್ ನೀಡಿದ ಸಾಲ ತೀರಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿರುವುದಾಗಿ ಸತೀಶ್ ಸೈಲ್ ಹೇಳಿದ್ದಾರೆ.

English summary
Fish market inaugurated twice by present and former MLA has caused debate in karwar district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X