ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೇಣು ಹಾಕಲು ಭ್ರಷ್ಟ ಅಧಿಕಾರಿಗಳು ಬೇಕು: ಅನಂತಕುಮಾರ್ ಹೆಗಡೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 04; "ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನೇರವಾಗಿ ನೀಡುತ್ತಿರುವ ವಿಶೇಷ ಅನುದಾನದ ಬಳಕೆ ಬಗ್ಗೆ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಅಧಿಕಾರಿಗಳು ತಪ್ಪು ಮಾಡಲೆಂದೇ ಸರ್ಕಾರ ಕಾಯುತ್ತಿದೆ. ನೇಣು ಹಾಕಲು ನಮಗೆ ಭ್ರಷ್ಟ ಅಧಿಕಾರಿಗಳು ಬೇಕು. ಕೆಲಸ ಮಾಡದವರಿಗೆ ಅಧಿಕಾರಿಗಳಿಗೆ ಕೇಂದ್ರದಿಂದ ಹೇಗೆ ಬಲವಂತವಾಗಿ ರಾಜೀನಾಮೆ ಕೊಡಿಸುತ್ತಿದ್ದಾರೆಯೋ, ಅದೇ ಪರಿಸ್ಥಿತಿ ಎಲ್ಲರಿಗೂ ಬರಬಹುದು, ಗಮನಕ್ಕಿರಲಿ" ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್‌ ಸಭಾಭವನದಲ್ಲಿ ಶನಿವಾರ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆಯನ್ನು ಸಂಸದರು ವಹಿಸಿದ್ದರು. ಜಲಜೀವನ್ ಮಿಷನ್ (ಜೆಜೆಎಂ) ಪ್ರಗತಿ ಕುರಿತು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದರು.

ರಾಜಕೀಯ ನಿವೃತ್ತಿ ಪಡೆಯಲಿದ್ದಾರಾ ಸಂಸದ ಅನಂತಕುಮಾರ ಹೆಗಡೆ? ರಾಜಕೀಯ ನಿವೃತ್ತಿ ಪಡೆಯಲಿದ್ದಾರಾ ಸಂಸದ ಅನಂತಕುಮಾರ ಹೆಗಡೆ?

ಈ ವೇಳೆ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, "ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಅಂತಹ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕೋಟ್ಯಾಂತರ ರೂಪಾಯಿ ವಿಶೇಷ ಅನುದಾನ ನೀಡುತ್ತಿದೆ. ಆದರೆ ಜಲಜೀವನ ಮಿಷನ್‌ನಡಿ ಜಿಲ್ಲೆಯಾದ್ಯಂತ ಕೈಗೊಂಡಿರುವ ಕಾಮಗಾರಿಯ ಬಗ್ಗೆ ಶಾಸಕರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳಿಗೂ ಮಾಹಿತಿಯೇ ಇಲ್ಲ" ಎಂದರು.

 BSNLನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ: ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಅಭಿಮನ್ಯು ತಿರುಗೇಟು BSNLನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ: ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಅಭಿಮನ್ಯು ತಿರುಗೇಟು

"ಜನಪ್ರತಿನಿಧಿಗಳಿಗೆ ತಿಳಿಸದೇ ಅಧಿಕಾರಿಗಳು ನೇರವಾಗಿ ತಮಗೆ ತಿಳಿದಂತೆ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಅಧಿಕಾರಿಗಳ ಈ ನಡವಳಿಕೆಯಿಂದ ಮುಂಬರುವ ದಿನಗಳಲ್ಲಿ ಯೋಜನೆ ವಿಫಲವಾಗುವ ಸಾಧ್ಯತೆಯಿದೆ" ಎಂದು ತಿಳಿಸಿದರು.

ಅನಂತಕುಮಾರ ಹೆಗಡೆಗೆ ಸ್ವಪಕ್ಷದಲ್ಲೇ ವಿರೋಧವಿದೆ: ಆನಂದ್ ಅಸ್ನೋಟಿಕರ್ ಅನಂತಕುಮಾರ ಹೆಗಡೆಗೆ ಸ್ವಪಕ್ಷದಲ್ಲೇ ವಿರೋಧವಿದೆ: ಆನಂದ್ ಅಸ್ನೋಟಿಕರ್

ಮನೆ ಮನೆಗೆ ನೀರು ಒದಗಿಸಬೇಕು

ಮನೆ ಮನೆಗೆ ನೀರು ಒದಗಿಸಬೇಕು

ಸಭೆಯಲ್ಲಿ ಮಾತನಾಡಿದ ಸಂಸದರು, "ಶಾಸಕರು ಹೇಳುವುದು ಸತ್ಯವಾಗಿದೆ. ಮನೆ ಮನೆಗೆ ನೀರನ್ನು ಒದಗಿಸಬೇಕು. ಜನರ ದಾಹವನ್ನು ತಣಿಸಬೇಕು ಎಂಬು ಉದ್ದೇಶದಿಂದ ಕೇಂದ್ರ ಸರಕಾರ ಜಲಜೀವನ ಮಿಷನ್ ಜಾರಿಗೆ ತಂದಿದೆ. ಇಂತಹ ಮಹತ್ವಾಕಾಂಕ್ಷೆ ಯೋಜನೆಯನ್ನು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ತರಬೇಕು. ಆಗ ಯೋಜನೆಯ ಬಗ್ಗೆ ಜನರಿಗೆ ತಿಳಿಯುವುದರ ಜೊತೆಗೆ ಹೆಚ್ಚಿನ ಪ್ರಚಾರವೂ ಸಿಗುತ್ತದೆ" ಎಂದರು.

ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ

ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ

"ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಸರಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತರದೇ ನೇರವಾಗಿ ಅಧಿಕಾರ ಚಲಾಯಿಸಲು ಯಾವುದೇ ಅವಕಾಶವಿಲ್ಲ. ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು. ಇಂತಹ ಘಟನೆಗೆಳು ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ" ಎಂದು ಸಂಸದರು ಎಚ್ಚರಿಸಿದರು.

"ಜೆಜೆಎಂ ಕುರಿತು ಕೇಂದ್ರ ಸರ್ಕಾರವೇ ಎಲ್ಲವನ್ನೂ ಮಾಡಿಕೊಟ್ಟಿದೆ. ಅಧಿಕಾರಿಗಳಿಗೆ ಇದರಲ್ಲಿ ಇರುವ ಕೆಲಸವೇ ಕಡಿಮೆ. ಆದರೂ ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿಲ್ಲ. ಜನರ ಒಳಿತಿಗಾಗಿ ತಂದಿರುವ ಯೋಜನೆಯ ಬಗ್ಗೆ ಶಾಸಕರು ಸೇರಿದಂತೆ ಸಂಬಂಧಿಸಿದ ಎಲ್ಲ ಜನಪ್ರತಿನಿಧಿಗಳಿಗೆ ತಿಳಿಸಬೇಕು. ನಂತರ ಅವರ ಸಹಭಾಗಿತ್ವದಲ್ಲಿ ಕಾಮಗಾರಿ ಕೈಗೊಂಡು ಜನಪ್ರತಿನಿಧಿಗಳಿಂದ ಉದ್ಘಾಟನೆ ಮಾಡಿಸಬೇಕು" ಎಂದರು.

ಸೂಕ್ತ ರೀತಿಯಲ್ಲಿ ತನಿಖೆ ಮಾಡಿಸಲಾಗುತ್ತದೆ

ಸೂಕ್ತ ರೀತಿಯಲ್ಲಿ ತನಿಖೆ ಮಾಡಿಸಲಾಗುತ್ತದೆ

"ಜನಪರ ಯೋಜನೆಗಳಿಗೆ ವಿಶೇಷ ಅನುದಾನ ನೀಡುತ್ತಿರುವ ಕೇಂದ್ರ ಸರಕಾರ ಆ ಅನುದಾನದ ಬಳಕೆ ಹೇಗೆಲ್ಲ ಆಗುತ್ತಿದೆ ಎಂಬುವುದನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಇದು ಅಧಿಕಾರಿಗಳ ವರ್ಗದ ಗಮನಕ್ಕಿರಬೇಕು. ಒಂದುವೇಳೆ ಅನುದಾನ ಬಳಕೆಯಲ್ಲಿ ಅಕ್ರಮವೇನಾದರೂ ನಡೆದರೆ ಅದನ್ನು ಸೂಕ್ತ ರೀತಿಯಲ್ಲಿ ತನಿಖೆಗೆ ಒಳಪಡಿಸಿ ಸಂಬಂಧಿಸಿದ ಅಧಿಕಾರಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮುಂದೆ ಅಂತವರಿಗೆ ನಿವೃತ್ತಿ ವೇತನವೂ ಸಿಗದಂತ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಅಧಿಕಾರಿ ವರ್ಗದವರು ತುಂಬಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಿದೆ" ಎಂದು ಅನಂತಕುಮಾರ್ ಹೆಗಡೆ ಹೇಳಿದರು.

Recommended Video

ಮಂಗಳಮುಖಿಯರ ಕಷ್ಟಗಳು ಹೇಗೆಲ್ಲಾ ಇರುತ್ತೇ ಗೊತ್ತಾ | Oneindia Kannada
ಜೇನು ಕೃಷಿಗೆ ಉತ್ತಮ ಅವಕಾಶ

ಜೇನು ಕೃಷಿಗೆ ಉತ್ತಮ ಅವಕಾಶ

"ಜಿಲ್ಲೆಯಲ್ಲಿ ಜೇನು ಕೃಷಿಗೆ ಉತ್ತಮ ಅವಕಾಶಗಳಿದ್ದು, ಜೇನು ಅತೀ ಹೆಚ್ಚು ಗೂಡು ಕಟ್ಟುವಂಥ ಮರಗಳನ್ನು ಪಟ್ಟಿ ಮಾಡಿ ವರದಿ ನೀಡುವಂತೆ ತೋಟಗಾರಿಕೆ ಇಲಾಖೆಗೆಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಅದರಂತೆ ಇಲಾಖೆ ಅಧಿಕಾರಿಗಳು ಜೇನು ಕೃಷಿಗೆ ಪೂರಕವಾಗುವಂತ ಸುಮಾರು 10 ತಳಿಯ ಮರಗಳ ಪಟ್ಟಿಯನ್ನು ಮಾಡಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಮರಗಳ ಸಸಿಗಳನ್ನು ಬೆಳಸಿ ಅರಣ್ಯ ಪ್ರದೇಶದಲ್ಲಿ ಅವಗಳನ್ನು ನೆಡುವಂತ ಕಾರ್ಯವಾಗಬೇಕು. ಇದರಿಂದ ಪರಿಸರ ವೃದ್ಧಿ ಜೊತೆಗೆ ಜೇನು ಕೃಷಿಕರಿಗೆ ಸಹಕಾರಿಯಾಗಲಿದೆ" ಎಂದು ಸಂಸದರು ಹೇಳಿದರು.

English summary
Uttara Kannada MP Anant Kumar Hegde warned officials and direct them to implementation of union government projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X