ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುರೋಪ್ ಪ್ರವಾಸಕ್ಕೆ ಕನ್ನಡಿಗ ಐಎಫ್ಎಸ್ ಅಧಿಕಾರಿ ಎ.ಟಿ.ದಾಮೋದರ್ ಆಯ್ಕೆ

By ಡಿಪಿ ನಾಯ್ಕ
|
Google Oneindia Kannada News

ಕಾರವಾರ, ಜೂನ್.18: ಲಕ್ಷದ್ವೀಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ಐಎಫ್ಎಸ್ ಅಧಿಕಾರಿ ಎ.ಟಿ ದಾಮೋದರ ನಾಯ್ಕ ಅವರು ಪ್ರಧಾನಿ ನರೇಂದ್ರ ಮೋದಿಯವರು ಆಯ್ಕೆ ಮಾಡಿದ ಮೂವರು ಕೇಂದ್ರ ಸಂಪುಟ ಸಚಿವರು ಹಾಗೂ ದೇಶದ ಹಿರಿಯ ಅಧಿಕಾರಿಗಳನ್ನೊಳಗೊಂಡ 16 ಜನ ಸದಸ್ಯರ ತಂಡದಲ್ಲಿ ಆಯ್ಕೆಯಾಗಿ ಜೂನ್ 28 ರಿಂದ ಜಲೈ 9 ರವರೆಗೆ ಯೂರೋಪ್ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ತಂಡವು ದೇಶದ ರೈತರ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರದಲ್ಲಿ ಪಾಶ್ಚಿಮಾತ್ಯ ದೇಶಗಳ ಆಧುನಿಕ ತಂತ್ರಜ್ಞಾನ ಹಾಗೂ ನೀರಾವರಿ ವಿಧಾನಗಳನ್ನು ಅಳವಡಿಸಿಕೊಂಡು ದೇಶದ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಹಾಗೂ ಆಸ್ಟ್ರೇಲಿಯಾದ ದೇಶದ ವಿಯೆಟ್ನಾಂನಲ್ಲಿ ಜುಲೈ 1 ರಂದು ಆಯೋಜನೆಗೊಂಡ ಅಂತರಾಷ್ಟ್ರೀಯ ಕೃಷಿ ಆಣೆಕಟ್ಟು ಸಮಾವೇಶ ಮತ್ತು ವಿವಿಧ ದೇಶಗಳೊಂದಿಗೆ ಆಯೋಜನೆಗೊಂಡ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಗವಹಿಸಲಿದ್ದಾರೆ.

ಕನ್ನಡಿಗ ಎಂ.ಕೆ.ಸೂರಪ್ಪ ತ.ನಾಡಿನ ಅಣ್ಣಾ ವಿ.ವಿ. ಉಪಕುಲಪತಿಯಾಗಿ ನೇಮಕಕನ್ನಡಿಗ ಎಂ.ಕೆ.ಸೂರಪ್ಪ ತ.ನಾಡಿನ ಅಣ್ಣಾ ವಿ.ವಿ. ಉಪಕುಲಪತಿಯಾಗಿ ನೇಮಕ

ನಂತರ ದೇಶದ ಪ್ರವಾಸೋದ್ಯಮ ಅಭಿದ್ಧಿಯ ಸಲುವಾಗಿ ಆಯೋಜನೆಗೊಂಡ ವಿವಿಧ ಕಾರ್ಯಾಗಾರದಲ್ಲಿ ಭಾಗವಹಿಸಿ, ಯೂರೋಪ್ ನ ವಿವಿಧ ಸ್ಥಳ ಪ್ರಾತ್ಯಕ್ಷಿಕೆಯನ್ನು ಭೇಟಿ ನೀಡಲಿದ್ದಾರೆ.

IFS officer, Kannadiga AT Damodar has been selected for a trip to Europe

ದಾಮೋದರ ಅವರು ಪ್ರಸ್ತುತ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದಲ್ಲಿ ದೇಶದ ಅತಿ ಕಿರಿಯ ವಯಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ ಕೃಷಿ, ಹಣಕಾಸು, ಆರೋಗ್ಯ ಮೀನುಗಾರಿಕೆ, ಲೋಕೋಪಯೋಗಿ, ಪರಿಸರ, ಪಶುಸಂಗೋಪನೆ, ಆಹಾರ ಮತ್ತು ನಾಗರಿಕ ಸರಬರಾಜು, ಸಹಕಾರ, ಪ್ರವಾಸೋದ್ಯಮ, ಕಾರ್ಮಿಕ, ಅರಣ್ಯ, ಉದ್ಯೊಗ ಮತ್ತು ತರಭೇತಿ, ಮಾಹಿತಿ ತಂತ್ರಜ್ಞಾನ, ಕಾನೂನು ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

ಮೂಲತಃ ಕೃಷಿ ಕುಟುಂಬದವರಾಗಿ, ಕೃಷಿಯಲ್ಲಿ ಸ್ನಾತಕೋತ್ತರ ಪದವೀಧರರಾದ ದಾಮೋದರ ಅವರಿಗೆ ಕೃಷಿಯಲ್ಲಿ ಅಪಾರ ಆಸಕ್ತಿ. ದೇಶದ ರೈತವರ್ಗದವರ ಕುರಿತು ವಿಶೇಷ ಕಾಳಜಿಯನ್ನೂ ಅವರು ಹೊಂದಿದ್ದಾರೆ.

ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷದ್ವೀಪದಲ್ಲಿ ಈಗಾಗಲೇ ಸಾವಯವ ಕೃಷಿ ಮತ್ತು ಇಸ್ರೇಲ್ ದೇಶದ ಆಧುನಿಕ ಹೈಡ್ರೋಪಾನಿಕ್ಸ್ (ಪೋಶಕಾಂಶಯುಕ್ತ ನೀರಿನಲ್ಲಿ ನೇರ ಕೃಷಿ) ವಿಧಾನಗಳನ್ನು ಅಭಿವೃದ್ದಿಪಡಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ.

IFS officer, Kannadiga AT Damodar has been selected for a trip to Europe

ದಾಮೋದರ ಅವರು ಸಿದ್ಧಪಡಿಸಿದ ಕವರತ್ತಿ ಸ್ಮಾರ್ಟ್ ಸಿಟಿ ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ಮಾರ್ಟ್ ಸಿಟಿ ಯೋಜನೆಯ ಹೆಚ್ಚಿನ ತರಬೇತಿಯ ಸಂಬಂಧ ಜುಲೈ 16 ರಿಂದ ಆಗಸ್ಟ್ 2 ರ ತನಕ ಜಪಾನ್ ದೇಶದ ಪ್ರವಾಸವನ್ನು ಕೂಡ ದಾಮೋದರ ಅವರು ಕೈಗೊಳ್ಳಲಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪ ಭೇಟಿ ನೀಡಿದ್ದ ಸಂದರ್ಭದಲ್ಲಿ ಎ.ಟಿ ದಾಮೋದರ ನಾಯ್ಕ ಅವರು ಪ್ರಸ್ತುತ ಪಡಿಸಿದ್ದ ಪ್ರವಾಸೋದ್ಯಮ ಯೋಜನೆಯ ಕುರಿತಾಗಿ ಮೋದಿಯವರ ಪ್ರಶಂಸೆಗೆ ಪಾತ್ರರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
IFS officer, Kannadiga AT Damodar has been selected for a trip to Europe. He is one of the 16 members of Prime Minister Narendra Modi who has been selected by three central cabinet ministers and senior officials of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X