ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾಂಡೇಲಿಯಲ್ಲಿ ಫೆ. 2ರಿಂದ ಹಾರ್ನ್ ಬಿಲ್ ಫೆಸ್ಟಿವಲ್!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜನವರಿ 23: ಪಕ್ಷಿ ವೀಕ್ಷಣಾಕಾರರಿಗೆ ಉತ್ತರಕನ್ನಡ ಜಿಲ್ಲಾಡಳಿತ "ಹಾರ್ನ್ ಬಿಲ್ ಫೆಸ್ಟ್" ಆಯೋಜಿಸುವ ಮೂಲಕ ಕಾನನದ ನಡುವೆ ಮನೋರಂಜನೆಗೆ ಅವಕಾಶ ಕಲ್ಪಿಸುತ್ತಿದೆ.

ಫೆ.2 ರಿಂದ ಫೆ.4 ರವರೆಗೆ ದಾಂಡೇಲಿಯ ಅರಣ್ಯ ಅತಿಥಿ ಗ್ರಹದ ಆವರಣದಲ್ಲಿ ಉತ್ಸವವನ್ನು ಆಯೋಜಿಸಲಾಗಿದ್ದು, ಉತ್ಸವದಲ್ಲಿ ದೇಶದ ನಾನಾ ಭಾಗಗಳಿಂದ ಪಕ್ಷಿ ತಜ್ಞರು, ಛಾಯಾ ಚಿತ್ರ ತಜ್ಞರು ಆಗಮಿಸಿ ಉಪನ್ಯಾಸ ಹಾಗೂ ಪ್ರಾತ್ಯಕ್ಷಿತೆ ನೀಡಲಿದ್ದಾರೆ.

ಕೈಗಾದಲ್ಲಿ ಬರ್ಡ್‌ ಮ್ಯಾರಾಥಾನ್; 8 ಹೊಸ ಪಕ್ಷಿಗಳು ಪತ್ತೆಕೈಗಾದಲ್ಲಿ ಬರ್ಡ್‌ ಮ್ಯಾರಾಥಾನ್; 8 ಹೊಸ ಪಕ್ಷಿಗಳು ಪತ್ತೆ

ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಈ ಹಬ್ಬವನ್ನು ಆಯೋಜಿಸಲಾಗುತ್ತಿದ್ದು, ಎಲ್ಲ ವರ್ಗದ ಜನರಿಗೂ ಅದರಲ್ಲಿಯೂ ಯುವ ಪೀಳಿಗೆಗೆ ಹಾರ್ನ್ ಬಿಲ್ ಹಕ್ಕಿಯ ಕುರಿತು ಮಾಹಿತಿ ಹಾಗೂ ಅರಿವು ಮೂಡಿಸುವುದು ಮತ್ತು ದಾಂಡೇಲಿ ಭಾಗದಲ್ಲಿರುವ ಅಪರೂಪದ ಪಕ್ಷಿಗಳ ಸಂತತಿಯನ್ನು ಉಳಿಸಿ, ಬೆಳೆಸುವ ದೃಷ್ಟಿಯಿಂದ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ.

Hornbill fest, feast for bird lovers

ಉತ್ಸವದ ನಿಮಿತ್ತ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಹಾರ್ನ್ ಬಿಲ್ ಪಕ್ಷಿಗೆ ಸಂಬಂಧಪಟ್ಟಂತೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ, ಕ್ವಿಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜತೆಗೆ ಛಾಯಾ ಚಿತ್ರ, ಚಿತ್ರಕಲೆ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಉತ್ತಮ ಛಾಯಾ ಚಿತ್ರ ಹಾಗೂ ಚಿತ್ರಕಲೆಗೆ ಬಹುಮಾನಗಳನ್ನು ಕೂಡ ನೀಡಲಾಗುತ್ತಿದೆ.

ಫೆ.3 ರಂದು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಅರಣ್ಯ ಸಚಿವ ರಮಾನಾಥ ರೈ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಗಾಲ್ಯಾಂಡಿನ ಕಲಾ ತಂಡದವರು ವಿಶಿಷ್ಟ ನೃತ್ಯ ರೂಪಕವನ್ನು ಹಾಗೂ ಪರಿಸರದ ಕುರಿತು ವಾಸುದೇವ ಅವರು ವಾದ್ಯ ಗೋಷ್ಠಿಯನ್ನು ಮತ್ತು ವಿನಯ ಹೆಗಡೆ ಬಾನಂಗಳದಲ್ಲಿ ಚಿತ್ತಾರ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ದಾಂಡೇಲಿ ಹಾರ್ನ್ ಬಿಲ್ ಸಂರಕ್ಷಿತ ಪ್ರದೇಶ : ದಾಂಡೇಲಿಯ ಅರಣ್ಯ ಪ್ರದೇಶದ ಭಾಗವನ್ನು ಹಾರ್ನ್ ಬಿಲ್ ಸಂರಕ್ಷಿತ ಪ್ರದೇಶ ಎಂದು ಕರೆಯಲಾಗುತ್ತದೆ. ಹಾರ್ನ್ ಬಿಲ್ ಗೆ ಕನ್ನಡದಲ್ಲಿ ಮುಂಗಟ್ಟೆ ಎಂದು ಕರೆಯಲಾಗುತ್ತದೆ.

Hornbill fest, feast for bird lovers

ಸ್ಥಳೀಯವಾಗಿ ಇದನ್ನು ಕನಾರಿ ಹಾಗೂ ವಿಮಾನ ಪಕ್ಷಿ ಎಂದು ಕೂಡ ಕರೆಯುತ್ತಾರೆ. ಭಾರತದಲ್ಲಿ ಹಾರ್ನ್ ಬಿಲ್ ಗಳ 9 ಪ್ರಭೇದಗಳಿದ್ದು, ಅವುಗಳಲ್ಲಿ 4 ಬಗೆಯ ಹಾರ್ನ್ ಬಿಲ್ ಗಳು ದಾಂಡೇಲಿಯ ಸುತ್ತಮುತ್ತಲಲ್ಲೇ ಕಂಡು ಬರುತ್ತವೆ. ಮಲಬಾರ ಗ್ರೇ ಹಾರ್ನ್ ಬಿಲ್, ಇಂಡಿಯನ್ ಗ್ರೇ ಹಾರ್ನ್ ಬಿಲ್, ಮಲಬಾರ್ ಪೈಡ್ ಹಾರ್ನಬಿಲ್ ಹಾಗೂ ಗ್ರೇಟ್ ಇಂಡಿಯನ್ ಹಾರ್ನಬಿಲ್ ಇಲ್ಲಿ ಕಂಡುಬರುತ್ತವೆ‌.

English summary
North Canara district administration has decided to organise Hornbill fest in Dandeli reserve forest on Feb 2nd to Feb 4. Event will be in front of Dandeli Forest guest house. Bird lovers, renowned Photographers and experts will be taking part in the festival. This is first time the fest is being organised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X