ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರದಲ್ಲೂ ಬಿರುಸಾಗಿದೆ ಮಳೆ; ನೆರೆಗೆ ನೂರಾರು ಮನೆಗಳು ಜಲಾವೃತ, ಇಬ್ಬರ ಸಾವು

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿವಿಧೆಡೆ ಕೃಷಿ ಜಮೀನಿಗೆ ಹಾನಿಯಾಗಿದ್ದು, ಮಳೆಯಿಂದಾಗಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಹೊನ್ನಾವರ ತಾಲ್ಲೂಕಿನ ಗುಂಡಬಾಳಾ, ಬಡಗಣಿ ನದಿಗಳು ಹಾಗೂ ಭಾಸ್ಕೇರಿ ಹಳ್ಳದ ದಂಡೆಗಳ ಪ್ರದೇಶಗಳಲ್ಲಿ ನೆರೆ ನೀರು ನುಗ್ಗಿ ನೂರಾರು ಮನೆಗಳು ಜಲಾವೃತವಾಗಿರುವ ಜೊತೆಗೆ ಸಾವಿರಾರು ಜನರು ಸಂತ್ರಸ್ತರಾಗಿದ್ದಾರೆ. ಇದೇ ವೇಳೆ ಮಳೆ ಗಾಳಿಗೆ ಮರಬಿದ್ದು ಜೆಂದೆಬೆಟ್ಟದ ನಿವಾಸಿ ವಿಠ್ಠಲ ಶೆಟ್ಟಿ (48) ಎಂಬುವವರು ಸಾಲಕೋಡು ಸಮೀಪ ಬೈಕ್ ‌ನಲ್ಲಿ ಹೋಗುವಾಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ ಮರ; ವಾಹನ ಸಂಚಾರ ಬಂದ್ ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ ಮರ; ವಾಹನ ಸಂಚಾರ ಬಂದ್

ಕುಮಟಾ ತಾಲ್ಲೂಕಿನ ಚಂಡಿಕಾ ಹೊಳೆ ಉಕ್ಕಿ ಹರಿಯುತ್ತಿರುವ ಪರಿಣಾಮ ಶಿರಸಿ- ಕುಮಟಾ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಶಿರಗುಂಜಿಯಿಂದ ಕುಮಟಾಕ್ಕೆ ಚಿಕಿತ್ಸೆಗೆಂದು ಹೋಗುತ್ತಿದ್ದ ಅಂಗನವಾಡಿ ಸಹಾಯಕಿ ಮಂಗಲಾ ಅಂಬಿಗ (40) ಹೃದಯಾಘಾತವಾಗಿ ರಸ್ತೆ ಬದಿಯಲ್ಲೇ ಮೃತಪಟ್ಟರು. ರಸ್ತೆಯ ಮತ್ತೊಂದು ಬದಿಗೆ ಹೋಗಲು ಸೂಕ್ತ ಸಮಯಕ್ಕೆ ದೋಣಿ ವ್ಯವಸ್ಥೆ ಆಗದ ಕಾರಣವೇ ದುರ್ಘಟನೆ ನಡೆಯಿತು ಎಂದು ಸಂಬಂಧಿಕರು ಪ್ರತಿಭಟನೆ ನಡೆಸಿದರು. ಇದೇ ವೇಳೆ, ಸ್ಥಳದಲ್ಲಿ ಎರಡು ದೋಣಿಗಳ ವ್ಯವಸ್ಥೆ ಮಾಡಲಾಯಿತು.

Homes Merge In Deluge And Two Death By Heavy Rain In Karwar

ಕಾರವಾರ, ಅಂಕೋಲಾ ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜಲಾವೃತ ಪ್ರದೇಶಗಳಿಂದ ಒಟ್ಟು 1,688 ಜನರನ್ನು ಸ್ಥಳಾಂತರಿಸಲಾಗಿದೆ. ಮಳೆಯಿಂದ ತೊಂದರೆಗೆ ಒಳಗಾಗಿರುವ ಕಾರವಾರದಲ್ಲಿ 16, ಹೊನ್ನಾವರ ತಾಲ್ಲೂಕಿನಲ್ಲಿ 15, ಅಂಕೋಲಾದಲ್ಲಿ 12, ಕುಮಟಾದಲ್ಲಿ ಮೂರು, ಮುಂಡಗೋಡದಲ್ಲಿ ಎರಡು, ಹಳಿಯಾಳದಲ್ಲಿ ಮತ್ತು ಯಲ್ಲಾಪುರದಲ್ಲಿ ತಲಾ ಒಂದು ಒಟ್ಟು 50 ತಾತ್ಕಾಲಿಕ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ದಕ್ಷಿಣ ಕನ್ನಡದಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ, ಎರಡು ದಿನ ರೆಡ್ ಅಲರ್ಟ್ದಕ್ಷಿಣ ಕನ್ನಡದಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ, ಎರಡು ದಿನ ರೆಡ್ ಅಲರ್ಟ್

ಜಿಲ್ಲೆಯಲ್ಲಿ ಒಟ್ಟು 5,396 ಎಕರೆ ಜಮೀನಿನಲ್ಲಿ ಮಾಡಲಾಗಿದ್ದ ಕೃಷಿ ನಷ್ಟವಾಗಿದೆ. ಅದರಲ್ಲಿ 4,666 ಎಕರೆ ಭತ್ತ, 575 ಎಕರೆ ಮೆಕ್ಕೆ ಜೋಳ, 155 ಎಕರೆ ಕಬ್ಬು ಸೇರಿವೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

Homes Merge In Deluge And Two Death By Heavy Rain In Karwar

ಕಾರವಾರದಲ್ಲಿ 700 ಎಕರೆ, ಅಂಕೋಲಾದಲ್ಲಿ 1,260 ಎಕರೆ, ಕುಮಟಾದಲ್ಲಿ 1,300 ಎಕರೆ, ಹೊನ್ನಾವರದಲ್ಲಿ 230 ಎಕರೆ, ಭಟ್ಕಳದಲ್ಲಿ 20 ಎಕರೆ, ಶಿರಸಿಯಲ್ಲಿ 152 ಎಕರೆ, ಸಿದ್ದಾಪುರದಲ್ಲಿ 344 ಎಕರೆ, ಮುಂಡಗೋಡದಲ್ಲಿ 235 ಎಕರೆ, ಹಳಿಯಾಳದಲ್ಲಿ 185 ಎಕರೆ, ಜೊಯಿಡಾದಲ್ಲಿ 240 ಎಕರೆ ಕೃಷಿ ಪ್ರದೇಶ ಮಳೆಯಿಂದಾಗಿ ಹಾನಿಯಾಗಿದೆ.

ಕಾರವಾರ ಮತ್ತು ಅಂಕೋಲಾದಲ್ಲಿ ನೆರೆಯಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ಸ್ಥಳೀಯ ಪೊಲೀಸರು, ಕರಾವಳಿ ಭದ್ರತಾ ಪಡೆ ಮತ್ತು ನೌಕಾದಳದ ಸಹಕಾರವನ್ನು ಜಿಲ್ಲಾಡಳಿತ ಪಡೆದುಕೊಂಡಿದೆ.

ಕೊಡಗಿನಲ್ಲಿ ಆಶ್ಲೇಷ ಮಳೆ ಅಬ್ಬರಕ್ಕೆ ಭಾಗಮಂಡಲ ಜಲಾವೃತಕೊಡಗಿನಲ್ಲಿ ಆಶ್ಲೇಷ ಮಳೆ ಅಬ್ಬರಕ್ಕೆ ಭಾಗಮಂಡಲ ಜಲಾವೃತ

ಇನ್ನೂ ಮೂರು ದಿನ ಇದೇ ರೀತಿ ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಕಾರಣ ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಕೇಂದ್ರಸ್ಥಾನದಲ್ಲಿದ್ದು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಂತೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ತಿಳಿಸಿದ್ದಾರೆ.

Homes Merge In Deluge And Two Death By Heavy Rain In Karwar

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಅವರು ಕುಮಟಾ, ಹೊನ್ನಾವರ, ಅಂಕೋಲಾ ತಾಲ್ಲೂಕುಗಳಲ್ಲಿ ಮಳೆಯಿಂದ ಹಾನಿಗೊಳಗಾದ ಕೆಲವು ಸ್ಥಳಗಳನ್ನು ಮಂಗಳವಾರ ಪರಿಶೀಲಿಸಿದರು. ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಪ್ರವಾಹ ಪೀಡಿತ
ಕದ್ರಾದಲ್ಲಿ ಮಂಗಳವಾರ ಮೊಕ್ಕಾಂ ಹೂಡಿದ್ದಾರೆ.

ಕಾಳಿ ನದಿಯ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವ ಪರಿಣಾಮ ಬೊಮ್ಮನಹಳ್ಳಿ, ಕೊಡಸಳ್ಳಿ ಹಾಗೂ ಕದ್ರಾ ಅಣೆಕಟ್ಟೆಗಳಿಗೆ ಭಾರಿ ಒಳಹರಿವು ಬರುತ್ತಿದೆ. ಹೀಗಾಗಿ ಕದ್ರಾ ಅಣೆಕಟ್ಟೆಯ 10 ಗೇಟ್‌ಗಳಿಂದ ಮಂಗಳವಾರ ಸಂಜೆ 1.4 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು.

ಸೋಮವಾರವೂ 1 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿತ್ತು. ಇದರಿಂದಾಗಿ ಕೈಗಾ- ಕಾರವಾರ ರಸ್ತೆ, ಕೈಗಾ ಟೌನ್‌ಶಿಪ್, ಮಲ್ಲಾಪುರ, ವಿರ್ಜೆ ಗ್ರಾಮಗಳು, ಖಾರ್ಗೆಜೂಗ, ಉಂಬಳಿಜೂಗ ನಡುಗಡ್ಡೆಗಳಲ್ಲಿ ಆಳೆತ್ತರಕ್ಕೆ ನೀರು ಸಂಗ್ರಹವಾಯಿತು. ನೂರಾರು ಮನೆಗಳು ಜಲಾವೃತವಾಗಿದ್ದು, ನಿವಾಸಿಗಳನ್ನು ಸಮೀಪದ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

English summary
It is raining in Karwar. The entire area is disrupted by heavy rains in the district. The farm has been damaged in manylaces and two people have lost their lives due to the rains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X