ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆ; ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

By ಉತ್ತರ ಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 05: ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ಮಂಗಳವಾರ ರಜೆ ಘೋಷಣೆ ಮಾಡಿದೆ.

ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಜುಲೈ 5ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮುಂತಾದ ಶೈಕ್ಷಣಿಕ ಸಂಸ್ಥೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸ ಹೊರಡಿಸಿದ್ದಾರೆ.

Breaking: ಚಿಕಾಗೋದಲ್ಲಿ ಗುಂಡಿನ ದಾಳಿಗೆ 6 ಸಾವು, 24 ಮಂದಿಗೆ ಗಾಯBreaking: ಚಿಕಾಗೋದಲ್ಲಿ ಗುಂಡಿನ ದಾಳಿಗೆ 6 ಸಾವು, 24 ಮಂದಿಗೆ ಗಾಯ

ಜಿಲ್ಲೆಯಲ್ಲಿಸೋಮವಾರ ದಿನವಿಡಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಹೊನ್ನಾವರದಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ 6 ಮಂದಿ ಗಾಯಗೊಂಡಿದ್ದು, ಗೋವಾ-ಅನಮೋಡ ರಾಷ್ಟ್ರೀಯ ಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಸಂಪರ್ಕ ಕಡಿತಗೊಂಡಿದೆ.

Heavy Rain in Uttara Kannada DC Announces Holiday Across the District

ಕಾನಸೂರು- ಮಾದ್ನಕಳ್ ರಸ್ತೆ ಸಂಪರ್ಕ ಬಂದ್; ಸಿದ್ದಾಪುರ ತಾಲ್ಲೂಕಿನ ಕಾನಸೂರು- ಮಾದ್ನಕಳ್ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಹೊಸ ಸೇತುವೆ ಕೆಲಸ ಮುಗಿಯದ ಕಾರಣ ಬದಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ವ್ಯಾಪಕ ಮಳೆಯಿಂದಾಗಿ ಕಾನಸೂರು ಹೊಳೆ ತುಂಬಿ ಹರಿಯುತ್ತಿದ್ದು, ಮಾದ್ನಕಳ್, ಶ್ರೀನಗರ, ಅಮ್ಮಚ್ಚಿ, ದೇವಿಸರ, ಅರೆಹಳ್ಳ, ಕೊಪ್ಪ, ಗಟ್ಟಿಕೈ ಸೇರದಿದಂತೆ ಇನ್ನಿತರ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ಭಾಗದ ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗಕ್ಕೆ ತೆರಳುವವರು ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕನ್ನಡ; ಮಳೆ, ಹೆದ್ದಾರಿಗಳಲ್ಲಿ ಗುಡ್ಡ ಕುಸಿತದ ಭೀತಿ ಉತ್ತರ ಕನ್ನಡ; ಮಳೆ, ಹೆದ್ದಾರಿಗಳಲ್ಲಿ ಗುಡ್ಡ ಕುಸಿತದ ಭೀತಿ

Heavy Rain in Uttara Kannada DC Announces Holiday Across the District

ಗೋವಾ-ಅನಮೋಡ ಹೆದ್ದಾರಿಯಲ್ಲಿ ಗುಡ್ಡ ಕುಸಿತ; ಗೋವಾ-ಅನಮೋಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾದ ಕಾರಣ ಈ ಮಾರ್ಗದ ಸಂಚಾರ ಸಂಪೂರ್ಣ ಕಡಿತಗೊಂಡಿದೆ. ಗೋವಾ ಗಡಿಯಲ್ಲಿ ಗುಡ್ಡಕುಸಿತವಾಗಿದ್ದು, ಜೆಸಿಬಿ ಮೂಲಕ ಕುಸಿದ ಮಣ್ಣು ಹಾಗೂ ಕಲ್ಲುಗಳನ್ನು ತೆರವು ಮಾಡುವ ಕಾರ್ಯಾಚರಣೆ ಸಂಜೆವರೆಗೂ ನಡೆದಿದೆ. ಈ ಮಾರ್ಗದ ಮೂಲಕ ಸಂಚಾರ ಮಾಡುತ್ತಿದ್ದ ವಾಹನಗಳ ಸಂಚಾರ ಸಂಜೆವರೆಗೂ ಅಸ್ತವ್ಯಸ್ತವಾಗಿತ್ತು.

Recommended Video

Zameer Ahmed ಅವರಿಗೆ ಸಂಬಂಧಿಸಿದ 5 ಜಾಗಗಳ ಮೇಲೆ ACB ದಾಳಿ | *Politics | OneIndia Kannada

English summary
Heavy rain to continues in Uttara Kannada district. DC Mullai Mugilan announced leave across the District on Tuseday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X