ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಕಾರನ್ನು ಪದೇ ಪದೇ ತಪಾಸಣೆ ಮಾಡುವುದರಿಂದ ಏನು ಸಾಬೀತು ಮಾಡ್ತಾರೆ: ಕುಮಾರಸ್ವಾಮಿ

|
Google Oneindia Kannada News

Recommended Video

Lok Sabha Elections 2019 : ಚುನಾವಣಾ ಆಯೋಗವನ್ನು ಪ್ರಶ್ನಿಸಿದ ಸಿಎಂ ಕುಮಾರಸ್ವಾಮಿ | Oneindia Kannada

ಕಾರವಾರ, ಏ.5:ನಮ್ಮ ವಾಹನವನ್ನು ಪದೇ ಪದೇ ತಪಾಸಣೆಗೆ ಒಳಪಡಿಸಿ ಏನು ಸಾಬೀತು ಮಾಡುತ್ತಾರೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ ಕಳೆದ 20 ದಿನಗಳಲ್ಲಿ ಸಿಎಂ ಕುಮಾರಸ್ವಾಮಿ ರಾಜ್ಯದ ಹಲವು ಕಡೆ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಹಲವು ಚೆಕ್ ಪೋಸ್ಟ್ ಗಳಲ್ಲಿ ಅವರ ವಾಹನವನ್ನು ತಪಾಸಣೆ ಮಾಡಲಾಗಿದೆ.

ಪದೇ ಪದೇ ಚೆಕ್‌ಪೋಸ್ಟ್‌ಗಳಲ್ಲಿ ತಮ್ಮ ವಾಹನವನ್ನು ತಪಾಸಣೆ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

HDK angree on vehicle checking during campaign

ಗುರುವಾರ ಅವರು ಕಾರವಾರಕ್ಕೆ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಕಾರನ್ನು ಗೋಕರ್ಣ ಮತ್ತು ಕಾರವಾರ ಮಧ್ಯೆ ಎರಡು ಬಾರಿ ತಪಾಸಣೆ ನಡೆಸಲಾಗಿತ್ತು. ತಮ್ಮ ವಾಹನವನ್ನು ಪದೇ ಪದೇ ಏಕೆ ತಪಾಸಣೆ ಮಾಡುತ್ತಿದ್ದಾರೆ ಎಂದು ಕೇಳಿದ್ದಕ್ಕೆ ಚುನಾವಣಾ ಆಯೋಗದಿಂದ ಅಧಿಕಾರಿಗಳಿಗೆ ವಾಹನ ತಪಾಸಣೆ ಮಾಡುವಂತೆ ಆದೇಶ ಬಂದಿರಬೇಕು ಎನ್ನುತ್ತಾರೆ ಸಿಎಂ ಕುಮಾರಸ್ವಾಮಿ.

ಗುರುವಾರ ಬೆಳಗ್ಗೆ ಉಪಾಹಾರ ಮಾಡಲೆಂದು ನಾನು ತೆರಳಿದ್ದಾಗ ಎರಡು ಬಾರಿ ತಪಾಸಣೆ ಮಾಡಲಾಗಿತ್ತು. ಅವರು ಏನು ಸಾಬೀತುಪಡಿಸಲು ಹೊರಟಿದ್ದಾರೆ. ಚುನಾವಣಾ ನೀತಿ ಸಂಹಿತೆಯ ಮಧ್ಯದಲ್ಲಿ ನಾವಿದ್ದು ಪದೇ ಪದೇ ಪ್ರಯಾಣ ಮಾಡಬೇಕಾಗುತ್ತದೆ ಎಂದರು. ಪದೇ ಪದೇ ಕಾರನ್ನು ತಪಾಸಣೆ ಮಾಡುವುದರಿಂದ ಏನು ಸಿಗುತ್ತದೆ ಎಂದು ಕೇಳಿದರು.

English summary
Chief minister HD Kumaraswamy questions election commission over repetitive checking of his vehicle. He demanded to reduce the check posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X