ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ ಕೋವಿಡ್ ಆಸ್ಪತ್ರೆಗೆ ಬಂತು 'ಕೇರ್ ನೇಶನ್ ಟೆಲಿ ಐಸಿಯು ಕಾರ್ಟ್': ಏನಿದರ ಬಳಕೆ?

|
Google Oneindia Kannada News

ಕಾರವಾರ, ಅಕ್ಟೋಬರ್ 13: ಕೋವಿಡ್ ಸೋಂಕಿತರೊಂದಿಗೆ ತಜ್ಞ ವೈದ್ಯರು ಸಮಾಲೋಚನೆ ನಡೆಸಲು ಸಹಕಾರಿಯಾಗುವ "ಕೇರ್ ನೇಶನ್ ಟೆಲಿ ಐಸಿಯು ಕಾರ್ಟ್' ಅನ್ನು ಸಿದ್ಧಪಡಿಸಿರುವ ಟೆಸ್ಲಾನ್ ಕಂಪೆನಿಯು, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್ ಆಸ್ಪತ್ರೆಗೆ ಇದನ್ನು ಕೊಡುಗೆಯಾಗಿ ನೀಡಿದೆ. ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಯನ್ನುಂಟು ಮಾಡುವ ಉದ್ದೇಶದಿಂದ 2015 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಟೆಸ್ಲಾನ್ ಟೆಕ್ನಾಲಜಿಯಲ್ಲಿ ಕುಮಟಾ ಮೂಲದ ಹರ್ಷ ಮೂರೂರು ಅವರು ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಜಿಲ್ಲೆಗೆ ಏನಾದರೂ ಕೊಡುಗೆಯಾಗಿ ನೀಡಬೇಕು ಎಂಬ ಉದ್ದೇಶ ಹೊಂದಿರುವ ಹರ್ಷ, ತಮ್ಮ ಕಂಪನಿಯಲ್ಲೇ ತಯಾರಾದ ಅಂದಾಜು 16 ಲಕ್ಷ ರೂ. ಮೊತ್ತದ "ಕೇರ್ ನೇಶನ್ ಟೆಲಿ ಐಸಿಯು ಕಾರ್ಟ್' ಅನ್ನು ಕ್ರಿಮ್ಸ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ. ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರ ಮೂಲಕ ಕಾರ್ಟ್ ಅನ್ನು ಕ್ರಿಮ್ಸ್ ಆಸ್ಪತ್ರೆಗೆ ಸೋಮವಾರ ಹಸ್ತಾಂತರಿಸಿದರು.

ಏನಿದು ಕೋವಿಡ್ ಕಾರ್ಟ್?

ಏನಿದು ಕೋವಿಡ್ ಕಾರ್ಟ್?

"ಕೇರ್ ನೇಶನ್ ಟೆಲಿ ಐಸಿಯು ಕಾರ್ಟ್' ಟೆಸ್ಲಾನ್ ಕಂಪನಿಯ ಪ್ರಾಥಮಿಕ ಉತ್ಪನ್ನವಾಗಿದೆ. ಈ ಕಾರ್ಟ್ ಮೂಲಕ ತಜ್ಞರ ಸಮಾಲೋಚನೆ, ರೋಗಿಗಳ ಮೇಲ್ವಿಚಾರಣೆ ಮತ್ತು ಶಿಕ್ಷಣದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಹೆಚ್ಚು ಪ್ರಯೋಜನಕಾರಿ ಟೆಲಿ-ಹೆಲ್ತ್ ಉತ್ಪನ್ನವಾಗಿದೆ. ಸದ್ಯ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಕೇರ್ ನೇಷನ್ ಟೆಲಿ-ಐಸಿಯು ಕಾರ್ಟ್ ಸಹಕಾರಿಯಾಗಿದೆ.

ಕಾರವಾರ: ಇಕೋ ಬೀಚ್ ಗೆ 'ಬ್ಲ್ಯೂ ಫ್ಲಾಗ್' ಅಂತರಾಷ್ಟ್ರೀಯ ಮಾನ್ಯತೆಕಾರವಾರ: ಇಕೋ ಬೀಚ್ ಗೆ 'ಬ್ಲ್ಯೂ ಫ್ಲಾಗ್' ಅಂತರಾಷ್ಟ್ರೀಯ ಮಾನ್ಯತೆ

ಟೆಲಿ ಪ್ಯಾಥಾಲಜಿ ಸೇರಿದಂತೆ ಸಾಕಷ್ಟು ಸೌಲಭ್ಯ

ಟೆಲಿ ಪ್ಯಾಥಾಲಜಿ ಸೇರಿದಂತೆ ಸಾಕಷ್ಟು ಸೌಲಭ್ಯ

ಟೆಲಿ-ಕನ್ಸಲ್ಟೇಶನ್ಸ್ ಮತ್ತು ಜೀವಕೋಶಗಳ ಟ್ರ್ಯಾಕಿಂಗ್ ಮೂಲಕ ಕ್ವಾರಂಟೈನ್, ಐಸೋಲೇಶನ್ ನಲ್ಲಿರುವ ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ಈ ಯಂತ್ರ ಸಹಕಾರಿಯಾಗಿದೆ. ಈ ಯಂತ್ರದ ಮೂಲಕ ತಜ್ಞರಿಂದ ಸಮಾಲೋಚನೆ, ರೋಗಿಗಳ ಮೇಲ್ವಿಚಾರಣೆ, ವಿಡಿಯೋ ಸಂವಾದ, ಸಂದೇಶ ಕಳುಹಿಸುವುದು, ಇಎಂಆರ್ ಮತ್ತು ಇತರ ಎಚ್ಐಎಸ್ ಸಂಯೋಜನೆಗಳು, ವಿಡಿಯೋ ಮತ್ತು ಆಡಿಯೋ ಸ್ಕೋಪ್ಸ್ ಸ್ಟ್ರೀಮಿಂಗ್, ಜೀವಕೋಶಗಳ ಡಾಟಾ ಟೆಲಿಮೆಟ್ರಿ, ವರದಿಗಳು ಮತ್ತು ಇತರ ಫೈಲ್‌ಶೇರ್, ಸ್ಟ್ರೀಮ್ ಸ್ನ್ಯಾಪ್ ಶಾಟ್ ಗಳು, ರಿಯಲ್ ಟೈಮ್ ಪೀಠಿಕೆ, ಡೇಟಾ ಅನಾಲಿಟಿಕ್ಸ್, ಇಸಿಜಿ ವೀಕ್ಷಣೆ, ಸ್ಟ್ರೀಮ್ ರೆಕಾರ್ಡಿಂಗ್, ಟೆಲಿ ಪ್ಯಾಥಾಲಜಿ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗಿದೆ.

ಇತರೆ ಸಮಸ್ಯೆಯಿಂದ ಬಳಲುತ್ತಿದ್ದವರ ಬಗ್ಗೆ ಕಾಳಜಿ

ಇತರೆ ಸಮಸ್ಯೆಯಿಂದ ಬಳಲುತ್ತಿದ್ದವರ ಬಗ್ಗೆ ಕಾಳಜಿ

ಮಹಾಮಾರಿ ಕೊರೊನಾ ವೈರಸ್ ಬಂದ ಬಳಿಕ ಸಾಮಾಜಿಕ ಅಂತರ ಅನಿವಾರ್ಯವಾಗಿದ್ದು, ಅದರಲ್ಲೂ ವಯಸ್ಸಾದವರು, ಇತರೆ ಸಮಸ್ಯೆಯಿಂದ ಬಳಲುತ್ತಿದ್ದವರ ಬಗ್ಗೆ ಕಾಳಜಿ ಕೂಡ ಅಷ್ಟೆ ಅಗತ್ಯವಾಗಿದೆ. ಆದರೆ ಎಲ್ಲ ಸಮಯದಲ್ಲಿಯೂ ವೈದ್ಯರು ಸೋಂಕಿತರನ್ನು ಭೇಟಿ ಮಾಡಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಈ ಕಾರಣದಿಂದ ಅಂಥವರಿಗೆ ತಜ್ಞ ವೈದ್ಯರೊಂದಿಗೆ ಯಂತ್ರದ ಮೂಲಕ ಸಂವಹನ ನಡೆಸಲು ಈ ಯಂತ್ರ ಸಹಕಾರಿಯಾಗಲಿದೆ.

ಸಲಹೆ ನೀಡಲು ಸಹಕಾರಿ

ಸಲಹೆ ನೀಡಲು ಸಹಕಾರಿ

""ಆಸ್ಪತ್ರೆಗಳ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ಸ್ಥಳಾಂತರಿಸಲು, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಮತ್ತು ಮೊಬೈಲ್ ಸಾಧನಗಳ ಮೂಲಕವೂ ಈ ಯಂತ್ರಗಳನ್ನು ಆಪರೇಟ್ ಮಾಡಬಹುದಾಗಿದೆ‌. ಕರ್ತವ್ಯದಲ್ಲಿರುವ ವೈದ್ಯರು ಅಥವಾ ನರ್ಸ್ ಗಳು ಸೋಂಕಿತರ ಬಳಿ ಯಂತ್ರ ಕೊಂಡೊಯ್ದರೆ ತಜ್ಞ ವೈದ್ಯರು ಸಂವಹನ ನಡೆಸಿ ಸಲಹೆ ನೀಡಲು ಸಹಕಾರಿಯಾಗಿದೆ'' ಎನ್ನುತ್ತಾರೆ ಹರ್ಷ ಮುರೂರು.

Recommended Video

Chinaದು ಯಾಕೋ ಅತಿ ಆಯ್ತು ಎಂದ Rajnath singh | Oneindia Kannada

English summary
Teslan Company, which has prepared the "Care Nation Tele ICU Cart', Gifted it to the Karwar Medical Sciences Institute on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X