ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲ್ಲಾಪುರ: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ವಿದ್ಯಾರ್ಥಿನಿ ಬಲಿ!

By ಡಿ.ಪಿ.ನಾಯ್ಕ
|
Google Oneindia Kannada News

ಕಾರವಾರ,‌ ನವೆಂಬರ್ 4: ಸುಸಜ್ಜಿತ ಆಸ್ಪತ್ರೆಗೆ ಬೇಕಾದ ಎಲ್ಲಾ ವಸ್ತುಗಳನ್ನ ನೀಡಿರುವ ಸರ್ಕಾರ ವೈದ್ಯರು ಹಾಗೂ ಸಿಬ್ಬಂದಿ ನೇಮಿಸಿದ ಕಾರಣ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ವಿದ್ಯಾರ್ಥಿನಿಯೋರ್ವಳು ಬಲಿಯಾಗಿದ್ದಾಳೆ.

ಖಾಸಗಿ ವೈದ್ಯರ ಬಂದ್ ಎಫೆಕ್ಟ್, ರೋಗಿಗಳಲ್ಲಿ ಗೊಂದಲಖಾಸಗಿ ವೈದ್ಯರ ಬಂದ್ ಎಫೆಕ್ಟ್, ರೋಗಿಗಳಲ್ಲಿ ಗೊಂದಲ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗೋರ್ಸಗದ್ದೆ ಗ್ರಾಮದ 21 ವರ್ಷದ ರಾಜೇಶ್ವರಿ ಶ್ರೀನಿವಾಸ ನಾಯ್ಕ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಶಿವಮೊಗ್ಗದಲ್ಲಿ ಬಿಕಾಂ ದ್ವಿತೀಯ ಸೆಮಿಸ್ಟರ್ ಓದುತ್ತಿದ್ದ ರಾಜೇಶ್ವರಿ ಕ್ಷಯ ರೋಗದಿಂದ ಬಳಲುತ್ತಿದ್ದಳು.

ಕುಮಟಾದಲ್ಲಿ 'ಲೈಫ್ ಲೈನ್ ಎಕ್ಸ್‌ಪ್ರೆಸ್‌', 20 ದಿನಗಳ ಕಾಲ ಉಚಿತ ಚಿಕಿತ್ಸೆಕುಮಟಾದಲ್ಲಿ 'ಲೈಫ್ ಲೈನ್ ಎಕ್ಸ್‌ಪ್ರೆಸ್‌', 20 ದಿನಗಳ ಕಾಲ ಉಚಿತ ಚಿಕಿತ್ಸೆ

ಕಳೆದ ಎರಡು ದಿನದ ಹಿಂದೆ ತೀವ್ರ ಉಸಿರಾಟದ ಸಮಸ್ಯೆಗೆ ಎದುರಾಗಿದ್ದ ಆಕೆಯನ್ನು ತಕ್ಷಣ ಮನೆಯವರು ಆಕ್ಸಿಜನ್ ಹಾಕಿಸಲು ಸಮೀಪದ ಮಂಚಿಕೇರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆದರೆ, ಆಸ್ಪತ್ರೆಯಲ್ಲಿ ಯಾವ ಸಿಬ್ಬಂದಿಯೂ ಇಲ್ಲದೇ ಬಾಗಿಲು ಹಾಕಿದ ಪರಿಣಾಮ ಬೇರೆ ಆಸ್ಪತ್ರೆಗೆ ಹೋಗುವ ಸ್ಥಿತಿ ಉದ್ಭವಿಸಿತ್ತು. ಬೇರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ವಿದ್ಯಾರ್ಥಿನಿ ರಾಜೇಶ್ವರಿ ಸಾವನ್ನಪ್ಪಿದ್ದಾಳೆ.

2 ವರ್ಷದ ಹಿಂದೆ ಕ್ಷಯ ರೋಗಕ್ಕೆ ತುತ್ತಾಗಿದ್ದಳು

2 ವರ್ಷದ ಹಿಂದೆ ಕ್ಷಯ ರೋಗಕ್ಕೆ ತುತ್ತಾಗಿದ್ದಳು

ಓದಿನಲ್ಲಿ ಚುರುಕಾಗಿದ್ದ ರಾಜೇಶ್ವರಿ ಎರಡು ವರ್ಷದ ಹಿಂದೆ ಕ್ಷಯ ರೋಗಕ್ಕೆ ತುತ್ತಾಗಿದ್ದಳು. ಆದರೆ, ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ವರಿ ಈ ಹಿಂದೆ ಇದೇ ರೀತಿ ಉಸಿರಾಟದ ಸಮಸ್ಯೆಗೆ ತುತ್ತಾದಾದ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಕಿಸಿ ಬದುಕುಳಿದಿದ್ದಳು. ಆದರೆ ಇದೀಗ ಸರಿಯಾದ ಸಮಯಕ್ಕೆ ಆಕ್ಸಿಜನ್ ‌ಸಿಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ಆಸ್ಪತ್ರೆಯಲ್ಲಿ ಸಿಬ್ಬಂದಿಗಳೇ ಇಲ್ಲ

ಆಸ್ಪತ್ರೆಯಲ್ಲಿ ಸಿಬ್ಬಂದಿಗಳೇ ಇಲ್ಲ

ಯಲ್ಲಾಪುರ ತಾಲೂಕಿನಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಇರುವ ಭಾಗ ಮಂಚಿಕೇರಿ. ಈ ನಿಟ್ಟಿನಲ್ಲಿ ಸುಮಾರು 2 ಕೋಟಿಗೂ ಅಧಿಕ ವೆಚ್ಚಮಾಡಿ ಸುಸಜ್ಜಿತ ಆಸ್ಪತ್ರೆ ಬೇಕಾಗುವ ವೈದ್ಯಕೀಯ ಸಾಮಾಗ್ರಿಗಳನ್ನೆಲ್ಲಾ ಸರ್ಕಾರ ಒದಗಿಸಿತ್ತು. ಆದರೆ ಮುಖ್ಯವಾಗಿ ಬೇಕಾದ ಸಿಬ್ಬಂದಿಯನ್ನ ಮಾತ್ರ ನೇಮಕ ಮಾಡಿರಲಿಲ್ಲ.

ಆಸ್ಪತ್ರೆಯಲ್ಲಿ ನರ್ಸ್ ಹಾಗೂ ಜವಾನ ಮಾತ್ರ

ಆಸ್ಪತ್ರೆಯಲ್ಲಿ ನರ್ಸ್ ಹಾಗೂ ಜವಾನ ಮಾತ್ರ

ಆಸ್ಪತ್ರೆಗೆ ವೈದ್ಯರು, ನರ್ಸ್ ಗಳು, ಔಷಧಿ ಕೊಡುವವರು, ಪ್ರಯೋಗಾಲಯದ ಸಿಬ್ಬಂದಿ, ಆಕ್ಸಿಜನ್ ಹಾಕುವ ಸಿಬ್ಬಂದಿ ಯಾರೂ ಇಲ್ಲ. ವಾರದಲ್ಲಿ ಒಂದೆರಡು ದಿನ ಬೇರೆ ಆಸ್ಪತ್ರೆಯಿಂದ ವೈದ್ಯರು ಬಂದರೆ ಓರ್ವ ನರ್ಸ್ ಹಾಗೂ ಜವಾನ ಮಾತ್ರ ಆಸ್ಪತ್ರೆಯನ್ನ ನೋಡಿಕೊಳ್ಳುತ್ತಿದ್ದಾರೆ.

ರಾಜೇಶ್ವರಿ ಸ್ಥಿತಿ ಬೇರೆ ಯಾರಿಗೂ ಬರದಿರಲಿ

ರಾಜೇಶ್ವರಿ ಸ್ಥಿತಿ ಬೇರೆ ಯಾರಿಗೂ ಬರದಿರಲಿ

ರಾಜೇಶ್ಬರಿ ಸಾವಿಗೆ ನಮಗೆ ಪರಿಹಾರ ಬೇಡ. ಆದರೆ ಮಂಚಿಕೇರಿ ಆಸ್ಪತ್ರೆಗೆ ವೈದ್ಯರನ್ನ ಸಿಬ್ಬಂದಿಗಳನ್ನ ನೇಮಿಸಲಿ. ರಾಜೇಶ್ವರಿ ಸ್ಥಿತಿ ಬೇರೆ ಯಾರಿಗೂ ಬರದಿರಲಿ ಅನ್ನೋದು ಆಕೆಯ ಮನೆಯವರ ಆಗ್ರಹ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದಿಗೂ ಸಾಕಷ್ಟು ಕಡೆ ವೈದ್ಯರು ಸಿಬ್ಬಂದಿಗಳು ಇಲ್ಲ. ಸರ್ಕಾರ ಮೊದಲು ಸಿಬ್ಬಂದಿಗಳನ್ನ ವೈದ್ಯರನ್ನ ನೇಮಿಸಿ ಗ್ರಾಮೀಣ ಭಾಗದ ಜನರಿಗೆ ಸೂಕ್ತ ‌ವೈದ್ಯಕೀಯ ಸೇವೆ ಕೊಡುವಂತಾಗಲಿ.

English summary
Governmnet negligence 21 year-old girl (Rajeshwari) died in Manchikere Government hospital, Yallapur taluk Uttara kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X