• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋಕರ್ಣ: ಈಜಲು ಹೋದ ಇಬ್ಬರು ಬಾಲಕರು ಸಮುದ್ರ ಪಾಲಾದರು

By ಕಾರವಾರ ಪ್ರತಿನಿಧಿ
|

ಕಾರವಾರ, ಸೆಪ್ಟೆಂಬರ್ 17: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ನೀರು ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಕರಿಯಪ್ಪನ ಕಟ್ಟೆ ಕಡಲತೀರ ಪ್ರದೇಶದಲ್ಲಿ ನಡೆದಿದೆ.

ಪ್ರವಾಸಿಗರಾದ ಮೈಸೂರಿನ ಸುಹಾಸ್(17) ಹಾಗೂ ಈತನೊಂದಿಗೆ ಬಂದಿದ್ದ ಮಂಡ್ಯ ಮೂಲದ ಉಲ್ಲಾಸ್ (15) ಸಮುದ್ರದಲ್ಲಿ ಕಾಣಿಯಾದ ಬಾಲಕರಾಗಿದ್ದಾರೆ. ಒಟ್ಟು 8 ಜನರ ತಂಡ ಮೈಸೂರಿನಿಂದ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದರು.

ಇಂದಿನಿಂದ ಗೋವಾಗೆ ಮುಕ್ತ ಪ್ರವೇಶ; ಕಾರವಾರದಿಂದ ಓಡಾಟ ಶುರು

ಈ ವೇಳೆ ಖಾಸಗಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ ಇವರು, ಇಂದು ಬೆಳಿಗ್ಗೆ ಸ್ನಾನಕ್ಕೆಂದು ಸಮುದ್ರಕ್ಕಿಳಿದಿದ್ದರು. ಅಮವಾಸ್ಯೆ ದಿನವಾಗಿದ್ದರಿಂದ ಸಮುದ್ರದಲ್ಲಿ ಅಲೆಗಳ ಸೆಳೆತ ಹೆಚ್ಚಿರುತ್ತದೆ ಹೀಗಾಗಿ ಸಮುದ್ರದಲ್ಲಿ ಇಳಿಯಬೇಡಿ ಎಂದು ಬಾಲಕರಿಗೆ ಎಚ್ಚರಿಸಲಾಗಿತ್ತು.

ಸ್ಥಳೀಯರ ಮಾತಿಗೆ ಬೆಲೆ ನೀಡದೆ ಬಾಲಕರು ಸಮುದ್ರಕ್ಕಿಳಿದಿದ್ದು, ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹಾಗೂ ಸೆಳೆತ ಹೆಚ್ಚಿದ್ದರಿಂದ ಇಬ್ಬರು ಬಾಲಕರು ಸಮುದ್ರದೊಳಗೆ ಕೊಚ್ಚಿಹೋಗಿದ್ದಾರೆ.

ಇವರನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದರೂ ಯುವಕ ಸುಹಾಸ್ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಸಾವು ಕಂಡಿದ್ದಾನೆ. ಇನ್ನೋರ್ವ ಬಾಲಕ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಈತನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಈ ಘಟನೆ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
The incident took place on the beach of Gokarna Kariyappan katte, in Uttara Kannada district, when two tourist boys who had gone for a swim in the sea drowned into the water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X