ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಕರ್ಣಕ್ಕೆ ಬಂದಿಳಿದ ಥೈಲ್ಯಾಂಡ್ ಮಹಿಳೆಯರು; ಕಾರವಾರದಲ್ಲೂ ಕೊರೊನಾ ಭೀತಿ

|
Google Oneindia Kannada News

ಕಾರವಾರ, ಫೆಬ್ರವರಿ 04: ಚೀನಾದಲ್ಲಿ ಸಾಕಷ್ಟು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್ ಬಗ್ಗೆ ಎಲ್ಲೆಲ್ಲೂ ಎಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಈ ನಡುವೆ ನಿನ್ನೆಯಷ್ಟೆ ಥೈಲ್ಯಾಂಡ್ ನಿಂದ ಇಬ್ಬರು ಮಹಿಳೆಯರು ಗೋಕರ್ಣಕ್ಕೆ ಬಂದಿದ್ದಾರೆ. ಅದರಲ್ಲಿ ಚೀನಾ ದೇಶಕ್ಕೆ ಹೋಗಿ ಬಂದಿದ್ದ ಥೈಲ್ಯಾಂಡ್ ಮೂಲದ ಮಹಿಳೆಯೊಬ್ಬರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ಮಾಡಿ ಆರೋಗ್ಯ ತಪಾಸಣೆ ನಡೆಸಿದೆ.

ಥೈಲ್ಯಾಂಡ್ ಮೂಲದ ಇಬ್ಬರು ಮಹಿಳೆಯರು ಗೋವಾ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಿನ್ನೆಯೇ ಮಾಹಿತಿ ನೀಡಿದ್ದರು. ಇಬ್ಬರು ಮಹಿಳೆಯರಲ್ಲಿ ಒಬ್ಬರು ಚೀನಾಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಈ ಮಾಹಿತಿ ನೀಡಲಾಗಿತ್ತು. ಆದರೆ, ಈ ಮಹಿಳೆಯ ಪಾಸ್‌ಪೋರ್ಟ್ ಪರಿಶೀಲಿಸಿದ ಸಂದರ್ಭ ಜನವರಿ ಮೊದಲ ವಾರದಲ್ಲಿಯೇ ಚೀನಾದಿಂದ ಈ ಮಹಿಳೆ ಹೊರಟಿದ್ದು ಕಂಡು ಬಂದಿದೆ.

ಹುಬ್ಬಳ್ಳಿಗೆ ಕಾಲಿಟ್ಟ ಕೊರೊನಾ ವೈರಸ್: ಟೆಕ್ಕಿ ಆಸ್ಪತ್ರೆಗೆ ದಾಖಲುಹುಬ್ಬಳ್ಳಿಗೆ ಕಾಲಿಟ್ಟ ಕೊರೊನಾ ವೈರಸ್: ಟೆಕ್ಕಿ ಆಸ್ಪತ್ರೆಗೆ ದಾಖಲು

ಜನವರಿ 23ರ ನಂತರದಲ್ಲಿ ಚೀನಾದಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಸೋಂಕು ಹರಡುವ ಮುನ್ನವೇ ಈ ಮಹಿಳೆ ಚೀನಾದಿಂದ ಹೊರಟಿದ್ದ ಕಾರಣಕ್ಕೆ ಹಾಗೂ ಈ ಮಹಿಳೆಯಲ್ಲಿ ಯಾವುದೇ ಸೋಂಕಿನ ಲಕ್ಷಣ ಕಂಡುಬಾರದ ಹಿನ್ನೆಲೆಯಲ್ಲಿ ಗೋವಾ ವಿಮಾನ ನಿಲ್ದಾಣದಿಂದ ಸೂಕ್ತ ತಪಾಸಣೆಯ ನಂತರ ಕಳುಹಿಸಲಾಗಿದೆ.

Gokarna Health Officials Examining Thailand Tourist Health

ಈ ಕುರಿತು ಮಾಹಿತಿ ನೀಡಿದ ಅಧಿಕಾರಿಯೊಬ್ಬರು, "ಕೊರೋನಾ ಸೋಂಕಿನ ಲಕ್ಷಣಗಳಿರುವ ವ್ಯಕ್ತಿಗಳಿದ್ದರೆ, ಅವರನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಐಸೊಲೇಶನ್ ಸೆಂಟರ್‌ಗೆ ಒಯ್ಯಲಾಗುತ್ತದೆ. ಅಲ್ಲಿ 14 ದಿನಗಳವರೆಗೆ ನಿರೀಕ್ಷಣೆಯಲ್ಲಿ ಇರಿಸಲಾಗುತ್ತದೆ. ನಮ್ಮಲ್ಲಿ ಇಂತಹ ವ್ಯಕ್ತಿಗಳ ಮೇಲೆ 28 ದಿನಗಳವರೆಗೂ ನಿಗಾ ಇರಿಸಲು ನಿರ್ಧರಿಸಲಾಗಿದೆ. ಇನ್ನು 15 ದಿನಗಳ ಒಳಗೆ ಚೀನಾ ಪ್ರವಾಸ ಮಾಡಿರುವವರಿಗೆ ನಮ್ಮ ದೇಶದ ಒಳಗೆ ಪ್ರವೇಶವನ್ನೇ ನೀಡುತ್ತಿಲ್ಲ. ಇಡೀ ಜಗತ್ತಿನಲ್ಲಿ ಈ ರೀತಿಯ ಎಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಥೈಲ್ಯಾಂಡ್‌ನ ಈ ಮಹಿಳೆಯರ ಪ್ರವಾಸದ ಇತಿಹಾಸ ಪರಿಶೀಲನೆಯ ನಂತರವೇ ಇವರನ್ನು ವಿಮಾನ ನಿಲ್ದಾಣದಲ್ಲಿ ಇಳಿಸಿಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್ ; ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳಕೊರೊನಾ ವೈರಸ್ ; ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳ

ಥೈಲ್ಯಾಂಡ್‌ನ ಮಹಿಳೆ ಇನ್ನೂ 11 ದಿನಗಳ ಕಾಲ ಗೋಕರ್ಣದಲ್ಲಿ ಇರಲಿದ್ದು, ಈ ಅವಧಿಯಲ್ಲಿ ಜಿಲ್ಲೆಯ ವೈದ್ಯರ ತಂಡ ಇವರ ಆರೋಗ್ಯದ ಮೇಲೆ ಗಮನ ಇರಿಸಲಿದೆ. ಮುಂಡಗೋಡದಲ್ಲಿ ಕೂಡ ಲಾಮಾಗಳ ಸೊಸೈಟಿ ಹಾಗೂ ಪೊಲೀಸರ ಮೂಲಕ ಅಲ್ಲಿಗೆ ಬರುವವರ ಮಾಹಿತಿ ಪಡೆದು ಇಂಥವರ ಪ್ರವಾಸದ ಇತಿಹಾಸ ಪರಿಶೀಲಿಸಿ, ಆರೋಗ್ಯ ತಪಾಸಣೆ ಕೂಡ ಮಾಡಲಾಗುತ್ತಿದೆ.

English summary
A Thailand based woman who visited China january 1st week arrived in Gokarna last night. A team of health department officials checked her health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X