ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವಾ ಪ್ರಯಾಣದ ಮೇಲಿದ್ದ ನಿರ್ಬಂಧ ಸಡಿಲ; ಆದರೆ ಷರತ್ತು ದುಬಾರಿ!

|
Google Oneindia Kannada News

ಕಾರವಾರ, ಆಗಸ್ಟ್ 26: ಪ್ರವಾಸೋದ್ಯಮದ ಮೇಲೆ ನಿಂತಿರುವ ಗೋವಾ, ತನ್ನ ರಾಜ್ಯ ಪ್ರವೇಶಿಸಲು ಕಡ್ಡಾಯಗೊಳಿಸಿದ್ದ ಪ್ರಯಾಣದ ಪರವಾನಗಿಯನ್ನು ರದ್ದುಗೊಳಿಸಿದೆ. ಆದರೆ, ಕೆಲವು ಷರತ್ತುಗಳನ್ನು ವಿಧಿಸಿದ್ದು, ಅದನ್ನು ಪಾಲಿಸಿದರೆ ಮಾತ್ರ ಪ್ರಯಾಣಿಕರು ಗೋವಾಕ್ಕೆ ಪ್ರವೇಶ ಪಡೆಯಬಹುದಾಗಿದೆ.

Recommended Video

ಕೊನೆಗೂ Africa , Polioದಿಂದ ಮುಕ್ತ | Oneindia Kannada

ಕೆಲವೇ ಪ್ರಕರಣಗಳು ದೃಢಪಟ್ಟು, ಆ ಸೋಂಕಿತರೂ ಗುಣಮುಖರಾಗಿ ಏಪ್ರಿಲ್ ನಲ್ಲಿ ಗೋವಾವನ್ನು ಕೋವಿಡ್ ಮುಕ್ತ ಎಂದು ಘೋಷಿಸಲಾಗಿತ್ತು. ಗಡಿಗಳನ್ನು ಮುಚ್ಚುವ ಮೂಲಕ ಮತ್ತು ಆರೋಗ್ಯ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ರೋಗವನ್ನು ತಡೆಗಟ್ಟುವಲ್ಲಿ ಗೋವಾ ಯಶಸ್ವಿಯಾಗಿತ್ತು. ಆದರೆ, ಗೋವಾ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದ್ದು, ಪ್ರಯಾಣದ ಮೇಲಿನ ನಿರ್ಬಂಧದಿಂದಾಗಿ ಭಾರಿ ಆರ್ಥಿಕ ನಷ್ಟ ಅನುಭವಿಸುತ್ತಿದೆ.

'4 ಲಕ್ಷದ ವೆಂಟಿಲೇಟರ್ ಖರೀದಿಗೆ 18 ಲಕ್ಷ ನೀಡಿದ ರಾಜ್ಯ ಸರ್ಕಾರ''4 ಲಕ್ಷದ ವೆಂಟಿಲೇಟರ್ ಖರೀದಿಗೆ 18 ಲಕ್ಷ ನೀಡಿದ ರಾಜ್ಯ ಸರ್ಕಾರ'

ಹೀಗಾಗಿ ಗೋವಾ ಸರ್ಕಾರ ಕೆಲವು ನಿಬಂಧನೆಗಳೊಂದಿಗೆ ರಾಜ್ಯಕ್ಕೆ ಪ್ರಯಾಣಿಸಲು ಯಾವುದೇ ಪರವಾನಗಿ ಅಗತ್ಯವಿಲ್ಲ ಎಂದಿದೆ. ಗೋವಾಕ್ಕೆ ಬರಲಿಚ್ಛಿಸುವವರು 48 ಗಂಟೆಗಳ ಒಳಗೆ ಪಡೆದ ಕೋವಿಡ್- 19 ನೆಗೆಟಿವ್ ವರದಿಯನ್ನು ಹೊಂದಿರಬೇಕು. ಇಲ್ಲದಿದ್ದಲ್ಲಿ 14 ದಿನಗಳ ಹೋಮ್ ಕ್ವಾರಂಟೈನ್ ‍ಗೆ ಒಳಪಡಬೇಕು. ಇವೆರಡೂ ಆಗದಿದ್ದಲ್ಲಿ 2,000 ಹಣ ಪಾವತಿಸಿ ಕೋವಿಡ್ ಪರೀಕ್ಷೆಗೆ ಒಳಪಡಬೇಕು ಎಂದು ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Goa Government Cancelled Travel Permit To Enter State

ಇತ್ತ, ಗೋವಾದಲ್ಲಿ ಉದ್ಯೋಗದಲ್ಲಿದ್ದು, ಗಣೇಶ ಚತುರ್ಥಿ ಆಚರಣೆಗೆ ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆಗೆ ಬಂದಿದ್ದ ನೂರಾರು ಜನರು ಹಾಗೂ ಮರಳಿ ಉದ್ಯೋಗಕ್ಕೆಂದು ಗೋವಾದತ್ತ ಮುಖ ಮಾಡಿದವರಿಗೆ ಈ ಆದೇಶ ದುಬಾರಿಯಾಗಿ ಪರಿಣಮಿಸಿದೆ. ಇದ್ದ ಒಂದಿಷ್ಟು ಹಣದಿಂದ ಊರಿಗೆ ಹಿಂತಿರುಗಿ ಸಂಪಾದನೆಗೆಂದು ಖಾಲಿ ಕೈಯಲ್ಲಿ ಹೊರಟವರಿಗೆ 2,000 ಶುಲ್ಕ ದುಬಾರಿ ಎನಿಸಿದರೆ, ಹಣ ಉಳಿಸಲು 14 ದಿನಗಳ ಹೋಮ್ ಕ್ವಾರಂಟೈನ್ ಗೆ ಒಳಗಾಗೋಣವೆಂದರೆ ಕಂಪೆನಿಯು ಉದ್ಯೋಗದಿಂದ ತೆಗೆದು ಹಾಕುವ ಭಯ ಕಾಡಿದೆ.

ಗೋವಾ; ಪ್ರಯಾಣಿಕರಿಗೆ ಕ್ವಾರಂಟೈನ್ ಕುರಿತ ಮಾಹಿತಿ ಗೋವಾ; ಪ್ರಯಾಣಿಕರಿಗೆ ಕ್ವಾರಂಟೈನ್ ಕುರಿತ ಮಾಹಿತಿ

ಹಬ್ಬ ಆಚರಿಸಿ ಹೊರಟಿದ್ದವರಿಗೆ ಗಡಿಯಲ್ಲಿ ಅಧಿಕಾರಿಗಳು ಶಾಕ್ ನೀಡಿದ್ದು, ಒಂದರ್ಧ ಗಂಟೆ ಗಡಿಯಲ್ಲಿ ನಿಂತು ಯೋಚಿಸಿದ ಯುವಕರು, ಉಪಾಯವಿಲ್ಲದೇ 2,000 ಪಾವತಿಸಿ ಕೋವಿಡ್ ಲ್ಯಾಬ್ ‍ಗಳಲ್ಲಿ ಪರೀಕ್ಷಿಸಿ ವರದಿ ಪಡೆದು ಉದ್ಯೋಗಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

English summary
Goa, which stands on tourism, has canceled a travel permit that has made it mandatory for to enter state,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X