ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಲ್ಲಿ 20 ರೂ.ಗೆ ಒಂದು ಬಿಯರ್... ಆದ್ರೂ ಕೊಳ್ಳೋರೇ ಇಲ್ಲ!

|
Google Oneindia Kannada News

ಕಾರವಾರ, ಆಗಸ್ಟ್ 27: ಕೊರೊನಾ ಸೋಂಕು ಎಲ್ಲಾ ಕ್ಷೇತ್ರವನ್ನೂ ಹಾಳುಗೆಡವಿಬಿಟ್ಟಿದೆ. ವ್ಯಾಪಾರ- ವಹಿವಾಟುಗಳಿಲ್ಲದೇ ವ್ಯಾಪಾರಿ, ಉದ್ಯಮಿಗಳು ಕಂಗೆಟ್ಟಿದ್ದಾರೆ. ಈ ನಡುವೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ನೆರೆ ರಾಜ್ಯ ಗೋವಾದಲ್ಲಿ ವಿಧಿಸಿದ್ದ ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರು ಬರದೇ ಮದ್ಯದ ವ್ಯಾಪಾರ ಪಾತಾಳಕ್ಕೆ ಇಳಿದಿದೆ.

Recommended Video

Srinagar ಗೌಪ್ಯ ರಸ್ತೆಯಲ್ಲಿ ಸಂಚಾರ ಬಂದ್ ! | Oneindia Kannada

ಹೀಗಾಗಿ ಸದ್ಯ ಗೋವಾದಲ್ಲಿ 100 ರೂ.ಗೆ ಮೂರು- ನಾಲ್ಕರಂತೆ ಬಿಯರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ರೀತಿ ಅಗ್ಗದಲ್ಲಿ ಬಿಯರ್ ಮಾರಾಟವಾಗುತ್ತಿದ್ದರೂ ನೆರೆ ರಾಜ್ಯದವರಿಗೆ ಮಾತ್ರ ಇದು 'ಏಣಿಗೆ ನಿಲುಕದ ನಕ್ಷತ್ರ'ದಂತಾಗಿದೆ.

ಗೋವಾ ಪ್ರಯಾಣದ ಮೇಲಿದ್ದ ನಿರ್ಬಂಧ ಸಡಿಲ; ಆದರೆ ಷರತ್ತು ದುಬಾರಿ!ಗೋವಾ ಪ್ರಯಾಣದ ಮೇಲಿದ್ದ ನಿರ್ಬಂಧ ಸಡಿಲ; ಆದರೆ ಷರತ್ತು ದುಬಾರಿ!

ಹೌದು. ಮಾರ್ಚ್ ತಿಂಗಳಿನಿಂದ ದೇಶದಲ್ಲಿ ಶುರುವಾದ ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್‌ಡೌನ್‌ ಪ್ರವಾಸೋದ್ಯಮದ ಮೇಲೆ ಭಾರೀ ಪೆಟ್ಟು ನೀಡಿದೆ. ದೇಶದಲ್ಲಿದ್ದ ವಿದೇಶಿ ಪ್ರವಾಸಿಗರು ಕೂಡ ಸಿಕ್ಕ ಸಿಕ್ಕ ವಿಮಾನ ಏರಿ ತವರು ರಾಷ್ಟ್ರಕ್ಕೆ ವಾಪಸ್ಸಾಗಿದ್ದು, ರಾಜ್ಯದ ಪ್ರವಾಸಿಗರೂ ಅನ್ಯ ರಾಜ್ಯಗಳ ಪ್ರವಾಸಕ್ಕೆ ತೆರಳಲು ಭಯ ಪಡುತ್ತಿದ್ದಾರೆ.

 ಪಾತಾಳಕ್ಕೆ ಇಳಿದ ಮದ್ಯ ಮಾರಾಟ

ಪಾತಾಳಕ್ಕೆ ಇಳಿದ ಮದ್ಯ ಮಾರಾಟ

ಇದರಿಂದಾಗಿ ಭಾರೀ ನಷ್ಟಕ್ಕೆ ತುತ್ತಾಗಿರುವುದು ನೆರೆ ರಾಜ್ಯ ಗೋವಾ! ಅತಿ ಚಿಕ್ಕ ರಾಜ್ಯವಾಗಿರುವ ಗೋವಾ, ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದೆ. ಇಲ್ಲಿ ಪ್ರವಾಸಿಗರಿದ್ದರೆ ಮಾತ್ರ ಕಾರುಬಾರು. ಇಲ್ಲದಿದ್ದರೆ ಈ ರಾಜ್ಯದಲ್ಲಿ ಏನೂ ಇಲ್ಲ ಎಂಬಂತಿದೆ. ಗೋವಾ ಹೇಳಿಕೇಳಿ ಮದ್ಯಕ್ಕೆ ಫೇಮಸ್ಸು. ರಾಜ್ಯದ ಆರ್ಥಿಕತೆಯೂ ಹೆಚ್ಚಾಗಿ ನಿಂತಿರುವುದೇ ಪ್ರವಾಸೋದ್ಯಮದ ಮೇಲೆ. ಅರ್ಥಾತ್ ಮದ್ಯದ ವಹಿವಾಟಿನ ಮೇಲೆ. ಯುರೋಪ್ ಸೇರಿದಂತೆ ಬಹುತೇಕ ರಾಷ್ಟ್ರಗಳಿಂದ ಇಲ್ಲಿಗೆ ಚಳಿಗಾಲದಲ್ಲಿ ವಿದೇಶಿ ಪ್ರವಾಸಿಗರು ಬಂದು ಸೇರಿಕೊಂಡರೆ, ಬೇಸಿಗೆ- ಮಳೆಗಾಲದಲ್ಲಿ ಭಾರತೀಯ ಪ್ರವಾಸಿಗರ ಆಗಮನವಾಗುತ್ತಿತ್ತು.

ಏಪ್ರಿಲ್- ಮೇ ತಿಂಗಳಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರು ತಂಪಾದ ಬಿಯರ್ ಹೀರುತ್ತಾ ರಜಾ ಅವಧಿಯ ಮಜಾ ಸವಿಯುತ್ತಿದ್ದರು. ಅಲ್ಲದೇ, ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಮದ್ಯದ ದರ ಕೂಡ ಕಡಿಮೆಯಾಗಿರುವುದರಿಂದ ಇಲ್ಲಿ ಬಿಯರ್ ಸೇವನೆಗಾಗಿಯೇ ಬರುವವರು ಹೆಚ್ಚಾಗಿದ್ದರು. ಆದರೆ, ಕಳೆದ ನಾಲ್ಕೈದು ತಿಂಗಳಿನಿಂದ ಪ್ರವಾಸಿಗರು ಬರದೇ ಪ್ರವಾಸೋದ್ಯಮ ನಷ್ಟದಲ್ಲಿದ್ದು, ಮದ್ಯ ಮಾರಾಟ ಪಾತಾಳಕ್ಕೆ ಇಳಿದಿದೆ.

 ಬಿಯರ್ ಕೊಳ್ಳುವವರೇ ಇಲ್ಲ

ಬಿಯರ್ ಕೊಳ್ಳುವವರೇ ಇಲ್ಲ

ಗೋವಾದಲ್ಲಿ ಸ್ಥಳೀಯರು ಹೆಚ್ಚಾಗಿ ವೈನ್‌ಗಳ ಸೇವನೆ ಮಾಡುತ್ತಾರೆ. ಬಿಯರ್ ಕೂಡ ಅಷ್ಟೇ ಪ್ರಮಾಣದಲ್ಲಿ ಖರೀದಿಸುತ್ತಾರಾದರೂ, ಇದರ ಮಾರಾಟ ಪ್ರವಾಸಿಗರ ಮೇಲೆ ಅವಲಂಬಿತವಾಗಿತ್ತು. ಅದರಲ್ಲೂ ಏಪ್ರಿಲ್- ಮೇ ತಿಂಗಳು ಬಿಯರ್ ಮಾರಾಟ ಒಂದು ರೀತಿಯ ಜಾತ್ರೆಯಂತೆ ನಡೆಯುತ್ತಿತ್ತು. ಪ್ರತಿವರ್ಷ ಬೇಸಿಗೆಯಲ್ಲಿ ಗೋವಾದಲ್ಲಿ ಅತಿಹೆಚ್ಚು ಬಿಯರ್ ಮಾರಾಟವಾಗುತ್ತಿತ್ತು. ಇದೇ ಕಾರಣಕ್ಕಾಗಿ ಪ್ರತಿವರ್ಷದಂತೆ ಈ ವರ್ಷವೂ ಮದ್ಯದ ಕಂಪೆನಿಗಳು ಸಾಕಷ್ಟು ಪ್ರಮಾಣದಲ್ಲಿ ಬಿಯರ್ ತಯಾರಿಸಿದ್ದವು. ಅನೇಕ ಮದ್ಯ ಮಾರಾಟ ಮಳಿಗೆಗಳು ಕೂಡ ಮೊದಲೇ ಬಿಯರ್ ಖರೀದಿಸಿ ದಾಸ್ತಾನು ಕೂಡ ಮಾಡಿಟ್ಟುಕೊಂಡಿದ್ದವು. ಆದರೆ, ಮಾರ್ಚ್ ತಿಂಗಳಲ್ಲಿ ಅನಿರೀಕ್ಷಿತವಾಗಿ ವಿಧಿಸಿದ ಲಾಕ್‌ಡೌನ್‌ನಿಂದಾಗಿ ಮದ್ಯದ ವಹಿವಾಟು ಅಸ್ತವ್ಯಸ್ತಗೊಂಡಿತು.

ಗೋವಾ; ಪ್ರಯಾಣಿಕರಿಗೆ ಕ್ವಾರಂಟೈನ್ ಕುರಿತ ಮಾಹಿತಿಗೋವಾ; ಪ್ರಯಾಣಿಕರಿಗೆ ಕ್ವಾರಂಟೈನ್ ಕುರಿತ ಮಾಹಿತಿ

 ತೆರೆಯದ ಬಾಗಿಲು

ತೆರೆಯದ ಬಾಗಿಲು

ಲಾಕ್‌ಡೌನ್‌ನ ಕಾರಣ ಹೋಟೆಲ್, ಬಾರ್, ರೆಸ್ಟೋರೆಂಟ್, ವೈನ್ ಶಾಪ್ ಸೇರಿದಂತೆ ಎಲ್ಲ ಅಂಗಡಿ- ಮಳಿಗೆಗಳು ಗೋವಾದಲ್ಲಿ ಬಾಗಿಲು ಮುಚ್ಚಿದವು. ನಂತರದ ದಿನಗಳಲ್ಲಿ ಸರ್ಕಾರ ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸಿ, ಕಟ್ಟುನಿಟ್ಟಿನ ಮಾರ್ಗಸೂಚಿಗಳ ಪ್ರಕಾರ ವೈನ್ ಶಾಪ್ ಗಳಲ್ಲಿ ಮಾರಾಟಕ್ಕೆ ಅನುಮತಿ ನೀಡಿತು. ಆದರೆ, ಹೋಟೆಲ್, ಬಾರ್‌ಗಳು ತೆರೆಯಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಒಂದೆಡೆ ಮುಚ್ಚಿದ ಮದ್ಯದಂಗಡಿಗಳಲ್ಲೇ ದಾಸ್ತಾನಿಟ್ಟಿದ್ದ ಮದ್ಯಗಳು ಉಳಿದುಬಿಟ್ಟವು. ಇನ್ನೊಂದೆಡೆ ಮದ್ಯ ಕಂಪೆನಿಗಳು ಮೊದಲೇ ತಯಾರಿಸಿಟ್ಟಿದ್ದ ಮದ್ಯ ಮಾರಾಟವಾಗದೇ ಉಳಿಯುವಂತಾಯಿತು.

 20 ರೂ.ಗೆ ಒಂದು, 100 ರೂ.ಗೆ 3- 4 ಬಿಯರ್!

20 ರೂ.ಗೆ ಒಂದು, 100 ರೂ.ಗೆ 3- 4 ಬಿಯರ್!

ಇತರ ಮದ್ಯಗಳು ದಿನ ಕಳೆದಂತೆ ಗುಣಮಟ್ಟ ವೃದ್ಧಿಸಿಕೊಳ್ಳುತ್ತಾ ಹೋದರೆ, ಬಿಯರ್ ಹಾಗಲ್ಲ. ಇದು ಕೇವಲ ಆರು ತಿಂಗಳ ಬಾಳಿಕೆ ಅಥವಾ ಸೇವನೆಗೆ ಯೋಗ್ಯ. ಅದರ ನಂತರ ಬಿಯರ್ ಗುಣಮಟ್ಟ ಕಳೆದುಕೊಂಡು, ಸೇವನೆಗೆ ಬಾರದಂತಾಗುತ್ತದೆ. ಸೇವನೆಗೆ ಗೊತ್ತುಪಡಿಸಿದ ಅವಧಿಯೂ ಮುಗಿಯುತ್ತಿರುವ ಕಾರಣ ಶೀಘ್ರವೇ ಅವುಗಳನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ಕಂಪೆನಿಗಳಿಗೆ ಹಾಗೂ ಮದ್ಯದಂಗಡಿಗಳಿಗೆ ಒದಗಿ ಬಂದಿದೆ.

ಹೇಗಾದರೂ ಮಾಡಿ ದಾಸ್ತಾನಿಟ್ಟುಕೊಂಡಿರುವ ಬಿಯರ್‌ಗಳನ್ನು ಮಾರಾಟ ಮಾಡಬೇಕು ಎಂದು ಪೈಪೋಟಿ ನಡೆಸುತ್ತಿರುವ ಮದ್ಯ ಕಂಪೆನಿಗಳು, ಹೊಸ ಸ್ಕೀಮ್‌ಗಳನ್ನು ಹಾಕಿಕೊಂಡಿದೆ. ಅದರಂತೆ, 100 ರೂ.ಗೆ 3- 4ರಂತೆ ಬಿಯರ್ ನೀಡುತ್ತಿದೆ. ಕಾರವಾರದ ಗಡಿಗೆ ತಾಗಿಕೊಂಡಿರುವ ಪೊಳೆಮ್ ‌ನಲ್ಲಿ 100 ರೂ.ಗೆ 3ರಂತೆ ಕಿಂಗ್ ಫಿಶರ್, 4ರಂತೆ ಟ್ಯೂಬರ್ಗ್ ಬಿಯರ್ ದೊರೆಯುತ್ತಿದ್ದರೆ, ಸ್ವಲ್ಪ ದೂರದ ಮಡ್ಗಾಂವ್ ‌ನಲ್ಲಿ 100 ರೂ.ಗೆ 4- 5ರಂತೆ ದೊರೆಯುತ್ತಿದೆ. ಆದರೂ ಖರೀದಿಸಲು ಸ್ಥಳೀಯರನ್ನು ಬಿಟ್ಟರೆ ಬೇರಾರೂ ಇಲ್ಲವಾಗಿದ್ದು, ಬೆಲೆ ಕಡಿಮೆ ಮಾಡಿದರೂ ವ್ಯಾಪಾರ ಇಲ್ಲದಂತಾಗಿದೆ.
 ಪಕ್ಕದಲ್ಲೇ ಇದ್ದರೂ ಖರೀದಿಸಲಾಗದ ಪರಿಸ್ಥಿತಿ

ಪಕ್ಕದಲ್ಲೇ ಇದ್ದರೂ ಖರೀದಿಸಲಾಗದ ಪರಿಸ್ಥಿತಿ

ಕರ್ನಾಟಕದಲ್ಲಿ ಬಿಯರ್‌ಗೆ 100- 180ರೂ.ವರೆಗೆ ಮಾರಾಟ ಮಾಡಲಾಗುತ್ತದೆ. ಹೀಗಿರುವಾಗ ಕಾರವಾರದಿಂದ ಕೇವಲ 15- 20 ಕಿ.ಮೀ. ದೂರದ ಗೋವಾದಲ್ಲಿ ಅತಿ ಕಡಿಮೆಯಲ್ಲಿ ದೊರೆಯುತ್ತಿದ್ದರೂ ಅದನ್ನು ಖರೀದಿಸಲಾಗದ ಪರಿಸ್ಥಿತಿ ಬಂದೊದಗಿದೆ. ಗೋವಾ ತನ್ನ ಗಡಿಯನ್ನು ಸಾರ್ವಜನಿಕರಿಗಾಗಿ ಷರತ್ತುಬದ್ಧವಾಗಿ ತೆರವುಗೊಳಿಸಿದೆ. ಆದರೆ, ಗೋವಾಕ್ಕೆ ಬರಲಿಚ್ಛಿಸುವವರು 48 ಗಂಟೆಗಳ ಒಳಗೆ ಪಡೆದ ಕೋವಿಡ್- 19 ನೆಗೆಟಿವ್ ವರದಿಯನ್ನು ಹೊಂದಿರಬೇಕು. ಇಲ್ಲದಿದ್ದಲ್ಲಿ 14 ದಿನಗಳ ಹೋಮ್ ಕ್ವಾರಂಟೈನ್ ಗೆ ಒಳಪಡಬೇಕು. ಇವೆರಡೂ ಆಗದಿದ್ದಲ್ಲಿ 2,000 ಹಣ ಪಾವತಿಸಿ ಕೋವಿಡ್ ಪರೀಕ್ಷೆಗೆ ಒಳಪಡಬೇಕು ಎಂಬ ಗೋವಾ ಸರ್ಕಾರದ ಹೊಸ ಸುತ್ತೋಲೆ ಕರ್ನಾಟಕ ಸೇರಿದಂತೆ ಗೋವಾದ ನೆರೆ ರಾಜ್ಯಗಳ ಜನರಿಗೆ ‘ನಿಲುಕದ ನಕ್ಷತ್ರ'ವೇ ಸರಿ.

English summary
Goa companies are selling Beer for lowest prices. But no good response due to lack of tourists in goa,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X