ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಜುದೀವ್ ದ್ವೀಪಕ್ಕೆ ಪ್ರವೇಶ ನೀಡಲು ಗೋವನ್ನರ ಒತ್ತಾಯ

|
Google Oneindia Kannada News

ಕಾರವಾರ, ಫೆಬ್ರವರಿ 3: ಕಾರವಾರದ ಸೀಬರ್ಡ್ ನೌಕಾನೆಲೆ ಸುಪರ್ದಿಯಲ್ಲಿರುವ ಕಾರವಾರ-ಗೋವಾ ಸಮೀಪದ ಅಂಜುದೀವ್ ದ್ವೀಪಕ್ಕೆ ಗೋವಾ ರಾಜ್ಯದ ಕ್ರೈಸ್ತ ಸಮುದಾಯದವರು ಪ್ರವೇಶ ನೀಡುವಂತೆ ನೌಕಾ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಹಿಂದೆ ಸ್ಥಳೀಯ ಹಿಂದೂ ಹಾಗೂ ಕ್ರಿಶ್ಚಿಯನ್ ಸಮುದಾಯದವರು ಈ ಅಂಜುದೀವ್ ದ್ವೀಪದಲ್ಲಿನ ದೇವಸ್ಥಾನ ಹಾಗೂ ಚರ್ಚ್‌ಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ನೌಕಾನೆಲೆ ನಿರ್ಮಾಣವಾದ ಬಳಿಕ ಭದ್ರತಾ ದೃಷ್ಟಿಯಿಂದ ದ್ವೀಪಕ್ಕೆ ಸಾರ್ವಜನಿಕರ ಪ್ರವೇಶವನ್ನು ನೌಕಾನೆಲೆ ನಿರ್ಬಂಧಿಸಿತ್ತು. ಆದರೆ ಇದೀಗ ಅದೇ ದ್ವೀಪಕ್ಕೆ ಭೇಟಿ ನೀಡಲು ಅವಕಾಶ ನೀಡುವಂತೆ ಕ್ರಿಶ್ಚಿಯನ್ ಸಮುದಾಯ ಬೇಡಿಕೆ ಇಟ್ಟಿದೆ.

12 ವರ್ಷದ ನಂತರ ಕಬ್ಬಿಣದ ಅದಿರು ಹರಾಜಿಗೆ ಸಿದ್ಧತೆ 12 ವರ್ಷದ ನಂತರ ಕಬ್ಬಿಣದ ಅದಿರು ಹರಾಜಿಗೆ ಸಿದ್ಧತೆ

ಆರ್ಯದುರ್ಗಾ ದೇವಿ ದೇವಸ್ಥಾನದಲ್ಲಿ ಪೂಜೆ

ಆರ್ಯದುರ್ಗಾ ದೇವಿ ದೇವಸ್ಥಾನದಲ್ಲಿ ಪೂಜೆ

ಈ ಹಿಂದೆ ಪೊರ್ಚುಗೀಸರ ಆಡಳಿತ ಇದ್ದ ಸಂದರ್ಭದಲ್ಲಿ ಕಾರವಾರ, ಗೋವಾ ಭಾಗದ ಕ್ರಿಶ್ಚಿಯನ್ನರು ಪ್ರತಿವರ್ಷ ಒಂದು ದಿನ ದ್ವೀಪಕ್ಕೆ ಆಗಮಿಸಿ ಚರ್ಚ್ ನಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ತೆರಳುತ್ತಿದ್ದರು. ಅಲ್ಲದೇ ಸ್ಥಳೀಯ ಮೀನುಗಾರರು ಹಾಗೂ ವಿವಿಧ ಸಮುದಾಯದವರು ಇಲ್ಲಿನ ಆರ್ಯದುರ್ಗಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು.

ಭದ್ರತಾ ದೃಷ್ಟಿಯಿಂದ ದ್ವೀಪಕ್ಕೆ ಸಾರ್ವಜನಿಕರಿಗೆ ನಿರ್ಬಂಧ

ಭದ್ರತಾ ದೃಷ್ಟಿಯಿಂದ ದ್ವೀಪಕ್ಕೆ ಸಾರ್ವಜನಿಕರಿಗೆ ನಿರ್ಬಂಧ

1991ರಲ್ಲಿ ಕಾರವಾರದಲ್ಲಿ ಕದಂಬ ನೌಕಾನೆಲೆ ಯೋಜನೆ ವ್ಯಾಪ್ತಿಗೆ ದ್ವೀಪ ಹಸ್ತಾಂತರವಾಗಿದ್ದು, ಕಾಮಗಾರಿ ವೇಳೆ ಸಾರ್ವಜನಿಕರಿಗೆ ದ್ವೀಪಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿತ್ತು. ಬಳಿಕ 2000ರ ನಂತರ ಕದಂಬ ನೌಕಾನೆಲೆ ಭದ್ರತಾ ದೃಷ್ಟಿಯಿಂದ ದ್ವೀಪಕ್ಕೆ ಸಾರ್ವಜನಿಕರಿಗೆ ನಿರ್ಬಂಧವನ್ನು ವಿಧಿಸಿತ್ತು.

ಉ.ಕ ಜಿಲ್ಲಾ ಪಂಚಾಯತಿ ಅಖಾಡಕ್ಕೆ ಎಂಎಲ್‌ಎ ಸಹೋದರಿ?ಉ.ಕ ಜಿಲ್ಲಾ ಪಂಚಾಯತಿ ಅಖಾಡಕ್ಕೆ ಎಂಎಲ್‌ಎ ಸಹೋದರಿ?

ಪ್ರಾರ್ಥನೆ ಸಲ್ಲಿಸಿ ತೆರಳಲು ಅವಕಾಶ ನೀಡಬೇಕು

ಪ್ರಾರ್ಥನೆ ಸಲ್ಲಿಸಿ ತೆರಳಲು ಅವಕಾಶ ನೀಡಬೇಕು

ಅದರಂತೆ ಅಲ್ಲಿನ ಚರ್ಚ್ ಹಾಗೂ ದೇವಸ್ಥಾನಗಳಿಗೂ ಸಾರ್ವಜನಿಕರು ಆಗಮಿಸದಂತೆ ನಿಷೇಧವನ್ನು ಹೇರಿದೆ. ಆದರೆ ಆ ಪ್ರದೇಶ ಧಾರ್ಮಿಕ ಭಾವನೆಯಿಂದ ಕೂಡಿದ್ದು, ವರ್ಷಕ್ಕೆ ಎರಡು ಬಾರಿಯಾದರೂ ತಮಗೆ ಪ್ರಾರ್ಥನೆ ಸಲ್ಲಿಸಿ ತೆರಳಲು ಅವಕಾಶ ನೀಡಬೇಕು ಎಂದು ಗೋವಾ ಮೂಲದ ಕ್ರಿಶ್ಚಿಯನ್ ಸಮುದಾಯದವರು ಮನವಿ ಮಾಡಿದ್ದಾರೆ.

Recommended Video

ಸಿಎಂ ವಿರುದ್ಧ ಸಿಡಿದ ಮೂಲ ಬಿಜೆಪಿಗರು-ಯಡಿಯೂರಪ್ಪ ಸರ್ಕಾರಕ್ಕೆ ಎಚ್ಚರಿಕೆ ಗಂಟೆ..! | Oneindia Kannada
ನೌಕಾ ದಿನದಂದು ನೌಕಾನೆಲೆ ವೀಕ್ಷಣೆಗೆ ಅವಕಾಶ

ನೌಕಾ ದಿನದಂದು ನೌಕಾನೆಲೆ ವೀಕ್ಷಣೆಗೆ ಅವಕಾಶ

ಇಲ್ಲಿ ಪೋರ್ಚುಗೀಸರ ಕಾಲದಲ್ಲಿ ನಿರ್ಮಾಣವಾಗಿದ್ದ ಅವರ್ ಲೇಡಿ ಆಫ್ ಬ್ರೋಥಾಸ್ ಚರ್ಚ್ ಇದ್ದು, ಪ್ರತಿವರ್ಷ ಫೆಬ್ರುವರಿ 2ರಂದು ಗೋವಾ ಕ್ರಿಶ್ಚಿಯನ್ನರು ಹಾಗೂ ಸ್ಥಳೀಯರು ಸೇರಿ ಫೆಸ್ಟ್ ಆಚರಿಸುತ್ತಿದ್ದರು. ಆದರೆ ನೌಕಾನೆಲೆ ಬಂದ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಧಾರ್ಮಿಕ ಆಚರಣೆಗೆ ಅಡ್ಡಿಯುಂಟಾದಂತಾಗಿದೆ. ವರ್ಷಕ್ಕೊಮ್ಮೆ ನೌಕಾ ದಿನದಂದು ನೌಕಾನೆಲೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ನೀಡಲಾಗುತ್ತದೆ. ಅದರಂತೆ ಫೆಸ್ಟ್ ಸಂದರ್ಭದಲ್ಲಿ ತಮಗೆ ದ್ವೀಪಕ್ಕೆ ಆಗಮಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ನೌಕಾನೆಲೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

English summary
The Christian community of Goa has urged the naval authorities to grant access to the Anjudeev island near Karwar-Goa in the Seabird Shipyard of Karwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X