ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಂಧಿ ಜಯಂತಿ ವಿಶೇಷ: ಅಂಕೋಲೆಯ ಗೌಡರಿಂದ ಔಷಧೋಪಚಾರ ಪಡೆದಿದ್ದ ಗಾಂಧೀಜಿ

|
Google Oneindia Kannada News

ಕಾರವಾರ, ಅಕ್ಟೋಬರ್ 2: ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದ ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಗೆ ರಾಷ್ಟ್ರಪಿತ ಗಾಂಧೀಜಿಯಂತಹ ಮಹಾತ್ಮರಿಗೂ ಔಷಧೋಪಚಾರವನ್ನು ಮಾಡಿದ ಕೀರ್ತಿ ಸಲ್ಲುತ್ತದೆ.

1927ರ ಸಮಯವದು. ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಮುಕ್ತಗೊಳಿಸಲು ಎದ್ದ ಸ್ವಾತಂತ್ರ್ಯದ ಕಾವು. ಆ ಸಮಯದಲ್ಲಿ ಮಹಾತ್ಮ ಗಾಂಧೀಜಿಯವರು ದೇಶ ಸಂಚಾರ ಕೈಗೊಂಡಿದ್ದರು. ಅದೇ ಸಮಯಕ್ಕೆ ನಿಪ್ಪಾಣಿಯಲ್ಲಿ ಗಾಂಧೀಜಿಯವರು ಪಕ್ಷವಾತಕ್ಕೆ ತುತ್ತಾದರು.

ಗಾಂಧಿ ಜಯಂತಿ ವಿಶೇಷ: ಗಾಂಧಿಯ ಖಾದಿ ಕರೆಗೆ ಓಗೊಟ್ಟ ಬದನವಾಳು ಗ್ರಾಮ!ಗಾಂಧಿ ಜಯಂತಿ ವಿಶೇಷ: ಗಾಂಧಿಯ ಖಾದಿ ಕರೆಗೆ ಓಗೊಟ್ಟ ಬದನವಾಳು ಗ್ರಾಮ!

ಗಾಂಧೀಜಿಯವರಿಗೆ ಯಾವುದೇ ಔಷಧವೂ ಫಲಿಸದೇ ಇದ್ದ ಸಮಯದಲ್ಲಿ ಡಾ. ಹರ್ಡೀಕರ್ ಮತ್ತು ಕರ್ನಾಟಕದ ಕೆಲವು ನಾಯಕರುಗಳ ಸಲಹೆಯಂತೆ ಬೆಂಗಳೂರಿನ ನಂದಿ ಬೆಟ್ಟದ ವಿಶ್ರಾಂತಿ ಧಾಮಕ್ಕೆ ಬಂದಾಗ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಬೆಳಂಬಾರದ ನಾಟಿ ವೈದ್ಯ ಶಿವು ಗೌಡರನ್ನು ಮೇ 15, 1927ರಂದು ಬೆಂಗಳೂರಿಗೆ ಕರೆಸಿಕೊಂಡರು.

Gandhi Jayanti Special: Shiva Gowda From Ankola Gave Medicine To Mahatma Gandhiji In 1927

ಗಾಂಧೀಜಿಗೆ ಶಿವು ಗೌಡರು 21 ದಿನಗಳವರೆಗೆ ತೈಲ ಹಚ್ಚಿ ಮಸಾಜ್ ಮಾಡಿದರು, ಕುಡಿಯಲು ಸೊಪ್ಪಿನ ಔಷಧ ನೀಡಿದರು. ನಂತರ ಗಾಂಧೀಜಿಯವರು ಗುಣಮುಖರಾಗಿ ಮತ್ತೆ ಚೈತನ್ಯಶೀಲರಾದರು.

ಗಾಂಧೀಜಿಯವರಲ್ಲಿ ಮತ್ತೆ ಹೋರಾಟದ ಕಿಚ್ಚು ಇಮ್ಮಡಿಸಿತು. ಸಂಪೂರ್ಣ ಗುಣಮುಖರಾದ ಅವರು ತಮ್ಮ ದೇಶ ಸಂಚಾರಕ್ಕೆ ಮರು ಚಾಲನೆ ನೀಡಿದರು. ಹೀಗೆ ಅಂಕೋಲಾದ ನಾಟಿ ಔಷಧವು ಗಾಂಧೀಜಿಯಂತಹ ಮಹಾತ್ಮರವರೆಗೂ ತಲುಪಿದೆ.

ಗಾಂಧೀಜಿಯವರ ನಂತರ ಲಂಡನ್, ಜರ್ಮನಿ, ಜಪಾನ್, ಸಿಲೋನ್, ಅಮೇರಿಕಾ, ಗಲ್ಫ್, ನೇಪಾಳ, ಟಿಬೆಟ್ ಹಾಗೂ ಇನ್ನಿತರ ದೇಶಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷವಾತಕ್ಕೆ ಸಿಲುಕಿದವರು ಬೆಳಂಬಾರಕ್ಕೆ ಬಂದು ಗುಣಮುಖರಾಗಿ ಹೋಗಿದ್ದಾರೆ.

"ಮಹಾತ್ಮರಿಗೆ ನನ್ನ ಅಜ್ಜ ಶಿವು ಗೌಡರು ನಾಟಿ ಔಷಧ ನೀಡಿ ಗುಣಮುಖರನ್ನಾಗಿಸಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆಯ ಸಂಗತಿ. ಈ ಪರಂಪರೆಯನ್ನು ನಾವು ಮುಂದುವರೆಸಿಕೊಂಡು ಬಂದಿದ್ದು, ರಾಜ್ಯ, ದೇಶ, ವಿದೇಶಗಳಿಂದಲೂ ಪ್ರತಿಷ್ಠಿತ ವ್ಯಕ್ತಿಗಳೂ ಕೂಡ ಪಾರ್ಶ್ವವಾಯುವಿಗೆ ತುತ್ತಾದವರು ಇಲ್ಲಿಗೆ ಆಗಮಿಸುತ್ತಾರೆ,'' ಎನ್ನುತ್ತಾರೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಹನುಮಂತ ಗೌಡ.

ಗಾಂಧೀಜಿಯವರನ್ನೇ ತನ್ನತ್ತ ಸೆಳೆದ ಬದನವಾಳು ಖಾದಿ
ರಾಷ್ಟ್ರೀಕರಣ, ಹೆಚ್ಚಿದ ತಂತ್ರಜ್ಞಾನಗಳು, ಬದಲಾಗುವ ಫ್ಯಾಷನ್‌ಗಳು ಹೀಗೆ ಹತ್ತು ಹಲವು ಕಾರಣಗಳಿಂದ ಖಾದಿ ಬಟ್ಟೆ ನೇಪಥ್ಯಕ್ಕೆ ಸರಿಯುತ್ತದೆ ಎಂದು ಹೇಳುತ್ತಾ ಬರಲಾಗುತ್ತಿದ್ದರೂ, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿಮ ಬದನವಾಳು ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ತರಬೇತಿ ಕೇಂದ್ರ 90 ವರ್ಷ ಪೂರೈಸುವುದರೊಂದಿಗೆ ಅಸ್ತಿತ್ವ ಉಳಿಸಿಕೊಂಡು ಮುನ್ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ನಾವೆಲ್ಲರೂ ಹೆಮ್ಮೆ ಪಡುವ ವಿಷಯವೇನೆಂದರೆ, ಸ್ವಾತಂತ್ರ್ಯ ಪೂರ್ವದಲ್ಲೇ ಪುಟ್ಟ ಗ್ರಾಮ ಬದನವಾಳು ಖಾದಿ ಬಟ್ಟೆ ತಯಾರಿಸುವ ಮೂಲಕ ಗಾಂಧಿಯವರನ್ನೇ ತನ್ನತ್ತ ಸೆಳೆದಿತ್ತು ಮತ್ತು ಅವರು ಇಲ್ಲಿಗೆ ಭೇಟಿ ನೀಡಿದ್ದರು ಎಂಬುದಾಗಿದೆ.

ತೊಂಬತ್ತು ವರ್ಷಗಳ ಹಿಂದೆ ಬದನವಾಳು ಗ್ರಾಮದ ಜನರ ಅಗತ್ಯತೆ, ಸ್ವದೇಶಿ ವಸ್ತುಗಳ ಅಸ್ತಿತ್ವ ಉಳಿಸುವ ಮತ್ತು ಉದ್ಯೋಗ ನೀಡುವ ಸಲುವಾಗಿ ಸ್ಥಾಪಿತಗೊಂಡ ಖಾದಿ ಗ್ರಾಮೋದ್ಯೋಗ ಕೇಂದ್ರ ಸುತ್ತಮುತ್ತಲಿನ ನೂರಾರು ಮಂದಿಗೆ ಉದ್ಯೋಗ ನೀಡಿದೆ. ಬದನವಾಳಿನ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ತರಬೇತಿ ಕೇಂದ್ರದಲ್ಲಿ ಉತ್ಪನ್ನಗೊಂಡ ಸ್ವದೇಶಿ ಬಟ್ಟೆಗಳು ರಾಜ್ಯದ ಮೈಸೂರು, ಚಾಮರಾಜನಗರ, ಬೆಂಗಳೂರು, ರಾಮನಗರ ಮಾತ್ರವಲ್ಲದ ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶಗಳಿಗೂ ರವಾನೆಯಾಗುತ್ತಿದೆ.

ಬದನಾಳಿನ ಖಾದಿ ಬಟ್ಟೆಗೆ ಇನ್ನಷ್ಟು ಪ್ರಚಾರ ದೊರೆತು, ಜನಪ್ರಿಯತೆ ಉಳಿಸಿಕೊಳ್ಳಲು ರಂಗಕರ್ಮಿ ಪ್ರಸನ್ನ ಅವರು 2015ರ ಏಪ್ರಿಲ್ ಮಾಹೆಯಲ್ಲಿ ಬದನವಾಳು ಸತ್ಯಾಗ್ರಹ ಹಾಗೂ ಸುಸ್ಥಿರ ಅಭಿವೃದ್ಧಿ ರಾಷ್ಟ್ರೀಯ ಸಮಾವೇಶ ಎಂಬ ಕಾರ್ಯಕ್ರಮ ನಡೆಸಿ, ದೇಶದ ವಿವಿಧ ಗಣ್ಯರನ್ನು ಕರೆಸಿದ್ದರು. ಕಾರ್ಯಕ್ರಮ ಜನಪ್ರಿಯವಾಗುವುದರೊಂದಿಗೆ ಎಲ್ಲರ ಗಮನ ಸೆಳೆದಿತ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ಬದನವಾಳು ಗ್ರಾಮ ಗಾಂಧಿ ಕನಸಿನ ಕೂಸಾಗಿದ್ದು, ಇವತ್ತಿಗೂ ಅವರ ಸ್ಮರಣೆಯಲ್ಲಿಯೇ ಇಲ್ಲಿನ ಜನ ದಿನ ಕಳೆಯುತ್ತಿರುವುದು ಖುಷಿ ಪಡುವ ಸಂಗತಿಯಾಗಿದೆ.

English summary
Ankola in Uttara Kannada district is credited for making a cure to Mahatma Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X