ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಟ್ಕಳ: ಸಮುದ್ರ ಪಾಲಾಗುತ್ತಿದ್ದ ನಾಲ್ವರು ಮೀನುಗಾರರ ರಕ್ಷಣೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಭಟ್ಕಳ, ಜುಲೈ.24:ಪಾತಿ ದೋಣಿ ಮುಳುಗಿ ನೀರು ಪಾಲಾಗುತ್ತಿದ್ದ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಿರುವ ಘಟನೆ ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಸೋಮವಾರ ನಡೆದಿದೆ.

ಭಟ್ಕಳ ತಾಲೂಕಿನ ಬೆಳ್ಳಿ ಗ್ರಾಮದ ತಿಮ್ಮಪ್ಪ ಮೊಗೇರ, ರಾಮಚಂದ್ರ ಖಾರ್ವಿ, ಗಣಪತಿ ಖಾರ್ವಿ, ಶ್ರೀನಿವಾಸ ಖಾರ್ವಿ ರಕ್ಷಣೆಗೊಳಗಾದ ಮೀನುಗಾರರು. ಎಂದಿನಂತೆ ಅರಬ್ಬಿ ಸಮುದ್ರಕ್ಕೆ 12 ಪಾತಿ ದೋಣಿಗಳ ಮೂಲಕ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಲ್ಲಿ ನಾಲ್ಕು ದೋಣಿಗಳು ಅಲೆ ಹಾಗೂ ಗಾಳಿಯ ರಭಸಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದ್ದರು.

ಉಡುಪಿ: ಕಡಲಾಮೆ ಜೀವ ಉಳಿಸಿ ಮಾನವೀಯತೆ ಮೆರೆದ ಮೀನುಗಾರಉಡುಪಿ: ಕಡಲಾಮೆ ಜೀವ ಉಳಿಸಿ ಮಾನವೀಯತೆ ಮೆರೆದ ಮೀನುಗಾರ

ತಕ್ಷಣ ಅಲ್ಲಿಯೇ ಮೀನುಗಾರಿಕೆಗೆ ತೆರಳಿದ್ದ ಮುಂಡಳ್ಳು ಮೀನುಗಾರರು ನಾಲ್ವರನ್ನು ರಕ್ಷಣೆ ಮಾಡಿದ್ದು, ಜೀವಪಾಯದಿಂದ ಪಾರಾಗಿದ್ದಾರೆ. ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Four fishermen drowning in the sea have been protected

ಬಿಡಾಡಿ ಜಾನುವಾರು ಕಳ್ಳತನದ ಆರೋಪಿ ಬಂಧನ

ಬಿಡಾಡಿ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಗೋಕರ್ಣ ಠಾಣೆಯ ಪೊಲೀಸರು ಬಂಧಿಸಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ. ಭಟ್ಕಳ ಮೂಲದ ಅಬ್ದುಲ್ ಅಬ್ಬೂಬಕರ್ ಮೊಕ್ತೇಸರ್ (೩೪),ಅಬ್ದುಲ್ ಮುತಾಲಿಕ್ ಅಬ್ದುಲ್ ಖಾದಿರ್ ಭಾಷಾ (೨೮),ಗುಪ್ರಾನ್ ತೋಪಿಕ್ (೨೮),ಮಹಮ್ಮದ್ ಮುಸ್ತಾಕ್ ಸೈಪುಲ್ಲಾ (೩೦) ಬಂಧಿತರು.

ಅಂಕೋಲಾದ ರಾಘು ಎಂಬುವವರು ಪರಾರಿಯಾದ ವ್ಯಕ್ತಿ. ಬಂಧಿತರಿಂದ ಜಾನುವಾರು ಸಾಗಾಟಕ್ಕೆ ಬಳಸುತ್ತಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Four fishermen drowning in the sea have been protected. Incident took place on Monday in the Arabian Sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X