ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡ; 32ನೇ ವರ್ಷಗಳಿಂದ ಅರಣ್ಯ ಭೂಮಿ ಹಕ್ಕು ಹೋರಾಟ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಸೆಪ್ಟೆಂಬರ್‌, 11: ರಾಜ್ಯದಲ್ಲಿಯೇ ಅರಣ್ಯವಾಸಿಗಳ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟ 32ನೇ ವರ್ಷಕ್ಕೆ ಕಾಲಿಟ್ಟಿದೆ. ಆದರೆ ಸರ್ಕಾರದ ಕಡೆಯಿಂದ ಸ್ಪಂದನೆ ಸಿಗದ ಕಾರಣ ಅರಣ್ಯ ಅತಿಕ್ರಮಣದಾರರು ಒಕ್ಕಲೆಬ್ಬಿಸುವ ಭೀತಿಯಲ್ಲಿ ದಿನಗಳನ್ನು ಕಳೆಯುವಂತ ಪರಿಸ್ಥಿತಿ ನಿರ್ಮಾಣ ಆಗಿದೆ.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆ ಒಳಗೊಂಡ 16 ಜಿಲ್ಲೆಗಳಲ್ಲಿ ನಿರಂತರವಾಗಿ ಅರಣ್ಯ ಭೂಮಿ ಹಕ್ಕು ಹೋರಾಟವನ್ನು ಮಾಡುತ್ತಲೇ ಇದ್ದಾರೆ. ಆಂದೋಲನ ರೂಪು ಗೊಂಡಿದ್ದರೂ ಸಮಸ್ಯೆ ಇನ್ನು ಬಗೆಹರಿದಿಲ್ಲ.

ಬೆಂಗಳೂರು: ಒತ್ತುವರಿ ತೆರವಿಗೆ ಶಾಸಕರ ರಿಯಲ್ ಎಸ್ಟೇಟ್‌ ಸಹಭಾಗಿತ್ವವೇ ಅಡ್ಡಿಬೆಂಗಳೂರು: ಒತ್ತುವರಿ ತೆರವಿಗೆ ಶಾಸಕರ ರಿಯಲ್ ಎಸ್ಟೇಟ್‌ ಸಹಭಾಗಿತ್ವವೇ ಅಡ್ಡಿ

ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ 10,571 ಚದರ ಕಿಲೋ ಮೀಟರ್‌ನಲ್ಲಿ 8,500 ಚದರ ಕಿಲೋ ಮೀಟರ್‌ ಅರಣ್ಯದಿಂದ ಆವೃತ್ತವಾಗಿದೆ. ಜಿಲ್ಲೆಯು ಭೌಗೋಳಿಕ ಹಿನ್ನೆಲೆಯಲ್ಲಿ ಅರಣ್ಯ ಭೂಮಿಯಲ್ಲಿ ಸುಮಾರು 85,000 ಕುಟುಂಬಗಳು ವಾಸಿಸುತ್ತಿವೆ.

Forest land rights struggle in Uttara Kannada for 32 years

ಅಲ್ಲಿನ ಜನರು ಜೀವನಕ್ಕಾಗಿ ಅರಣ್ಯ ಭೂಮಿಯಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗೆ ಅವಲಂಭಿತರಾಗಿದ್ದಾರೆ. ಅರಣ್ಯ ಭೂಮಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದವರಲ್ಲಿ 2,852 ಅರ್ಜಿಗಳಿಗೆ ಮಾತ್ರ ಅನುಮತಿ ಸಿಕ್ಕಿದೆ. ಅವುಗಳಲ್ಲಿ ಪಾರಂಪರಿಕ ಅರಣ್ಯವಾಸಿಗಳು 394, ಪರಿಶಿಷ್ಟ ಪಂಗಡ 1,331 ಹಾಗೂ ಸಮುದಾಯ ಉದ್ದೇಶಕ್ಕೆ 1,127 ಅರ್ಜಿಗಳು ಒಳಗೊಂಡಿದೆ.

Breaking: ಮೂಡಿಗೆರೆ: ಕಾಡಾನೆಗೆ ಕಾರ್ಮಿಕ ಬಲಿ, ಅರಣ್ಯ ಇಲಾಖೆ ವಿರುದ್ದ ಆಕ್ರೋಶBreaking: ಮೂಡಿಗೆರೆ: ಕಾಡಾನೆಗೆ ಕಾರ್ಮಿಕ ಬಲಿ, ಅರಣ್ಯ ಇಲಾಖೆ ವಿರುದ್ದ ಆಕ್ರೋಶ

ಹಕ್ಕುಪತ್ರ ಪಡೆಯಲು ನಿರಂತರ ಹೋರಾಟ; ಅರಣ್ಯ ಹಕ್ಕು ಕಾಯ್ದೆಯಡಿ, ಸಾಗುವಳಿ ಭೂಮಿಯ ಹಕ್ಕುಪತ್ರ ಪಡೆಯಲು ಜಿಲ್ಲೆಯಾದ್ಯಂತ ಸುಮಾರು 89 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು. ಆದರೂ ಕೂಡ ಅವರಲ್ಲಿ 69 ಸಾವಿರ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ. ಉಳಿದಂತೆ 398 ಪಾರಂಪರಿಕ ಅರಣ್ಯವಾಸಿಗಳಿಗೆ, 1,126 ಸಮುದಾಯದ ಉದ್ದೇಶಕ್ಕೆ ಸೇರಿದಂತೆ ಶೇಕಡಾ 3.2ರಷ್ಟು ಮಾತ್ರ ಹಕ್ಕುಪತ್ರಗಳನ್ನು ನೀಡಲಾಗಿದೆ.

ಕಾಯ್ದೆಯನ್ನು ಸರಿಯಾಗಿ ತಿಳಿಯದೆ ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳ ವಿರುದ್ಧ ಅರಣ್ಯ ಭೂಮಿ ಹಕ್ಕುಪತ್ರ ಹೋರಾಟಗಾರರ ವೇದಿಕೆ ಸದಸ್ಯರು ಕಳೆದ ಕೆಲ ತಿಂಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. 500ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಹೋರಾಟ ಮಾಡುವ ಮೂಲಕ, ಇದೀಗ ಜಾಗೃತಿ ಜಾತಾವನ್ನು ಕೈಗೊಂಡಿದ್ದಾರೆ.

Forest land rights struggle in Uttara Kannada for 32 years

ಜನಪ್ರತಿನಿಧಿಗಳ ವಿರುದ್ಧ ರವೀಂದ್ರ ನಾಯ್ಕ ಕಿಡಿ; ಅರಣ್ಯ ಅತಿಕ್ರಮಣದಾರರ ಹೋರಾಟಕ್ಕೆ ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನ, ನಿವೃತ್ತ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್‌. ಎನ್. ನಾಗಮೋಹನ್‌ದಾಸ್ ಅವರ ಕಾನೂನಾತ್ಮಕ ಬೆಂಬಲವು ಪ್ರಮುಖ ಪಾತ್ರ ವಹಿಸಿತ್ತು ಹಾಗೂ ಸಂಘಟನಾತ್ಮಕ ಹೋರಾಟದ ಗಟ್ಟಿತನಕ್ಕೆ ಇದು ಪ್ರಮುಖ ಶಕ್ತಿ ಆಗಿತ್ತು.

ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಅರಣ್ಯವಾಸಿಗಳ ಪರವಾಗಿ ಸಮರ್ಥ ಕಾನೂನು ಹೋರಾಟವನ್ನು ಮಾಡಲಾಗಿತ್ತು. ಹಳ್ಳಿಯಿಂದ ದೆಹಲಿಯವರೆಗೂ 31 ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. 3 ದಶಕದಲ್ಲಿ 5,000ಕ್ಕಿಂತ ಹೆಚ್ಚು ಸಂಘಟನಾತ್ಮಕ ಮತ್ತು ಕಾನೂನಾತ್ಮಕ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಇಷ್ಟಾದರೂ ಕೂಡ ಈವರೆಗೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಅರಣ್ಯ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ರೋಶ ಹೊರಹಾಕಿದರು.

ಜನಪ್ರತಿನಿಧಿಗಳಲ್ಲಿ ಇಚ್ಚಾಶಕ್ತಿ ಕೊರತೆ; ಜಿಲ್ಲೆಯಲ್ಲಿ ಸತತ 30 ವರ್ಷಗಳಿಂದ ಅರಣ್ಯ ವಾಸಿಗಳು, ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ರಾಜಕೀಯ ಇಚ್ಛಾಶಕ್ತಿ, ಜನಪ್ರತಿನಿಧಿಗಳಿಗೆ ಕಾನೂನು ಜ್ಞಾನದ ಕೊರತೆಯಿಂದ ಅರಣ್ಯ ಭೂಮಿ ಮಂಜೂರಿಯಲ್ಲಿ ಹಿನ್ನೆಡೆ ಆಗಿದೆ. ಇದರಿಂದ ಜನಪ್ರತಿನಿಧಿಗಳು ಈ ಬಗ್ಗೆ ಲಕ್ಷ್ಯವಹಿಸುತ್ತಿಲ್ಲ.‌

ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ಬಳಿಕ ತೀರ್ಪು ಏನು ಬರುತ್ತದೆ ಅನ್ನುವುದನ್ನು ಕಾದುನೋಡಬೇಕಿದೆ. ಒಂದು ವೇಳೆ ತೀರ್ಪು ಬಂದರೆ ಅತಿಕ್ರಮಣ ಮಾಡಿಕೊಂಡಿರುವ ಅರಣ್ಯವಾಸಿಗಳು ತಮ್ಮ ನೆಲೆಯನ್ನು ‌ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ರವೀಂದ್ರ ನಾಯ್ಕ ಅವರು ಆತಂಕ ವ್ಯಕ್ತಪಡಿಸಿದರು.

English summary
Legal battle for forest land rights protest in Uttara Kannada district entered 32nd year. no response from government. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X