• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೌಕಾನೆಲೆ ವ್ಯಾಪ್ತಿಯಲ್ಲಿ ಅಕ್ರಮ ಪ್ರವೇಶ; ಪೊಲೀಸರ ವಶಕ್ಕೆ ವಿದೇಶಿಗ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಅಕ್ಟೋಬರ್ 5: ಸೀಬರ್ಡ್ ನೌಕಾನೆಲೆ ವ್ಯಾಪ್ತಿಯ ಕಾಮತ್ ಬೀಚ್​ಗೆ ಅಕ್ರಮವಾಗಿ ಪ್ರವೇಶಿಸಿದ್ದ ಆರೋಪದ ಮೇರೆಗೆ ವಿದೇಶಿಗನನ್ನು ನೌಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸ್ವೀಡನ್​ ದೇಶದ ಸ್ವೈನ್ ಅಲೆಕ್ಸಾಂಡರ್ ಸೆಗರ್ (27) ವಶದಲ್ಲಿರುವವರು.

ಎರಡು ಕಡೆ ಎಸಿಬಿ ದಾಳಿ: ಅಕ್ರಮ ಹಣ ಪತ್ತೆ, ಮಧ್ಯವರ್ತಿಗಳ ಬಂಧನಎರಡು ಕಡೆ ಎಸಿಬಿ ದಾಳಿ: ಅಕ್ರಮ ಹಣ ಪತ್ತೆ, ಮಧ್ಯವರ್ತಿಗಳ ಬಂಧನ

ಸೆ.18ರಂದು ಭಾರತಕ್ಕೆ ಬಂದಿದ್ದ ಈತ, ದಕ್ಷಿಣ ಕರಾವಳಿಯುದ್ದಕ್ಕೂ ಕಾಲ್ನಡಿಗೆಯ ಮೂಲಕ ಸಂಚರಿಸುತ್ತಿದ್ದ. ಕಡಲತೀರಗಳಲ್ಲಿ ಯೋಗಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ಈ ನಡುವೆ ಗೋವಾದಿಂದ ಕಾರವಾರದ ಕಾಮತ್ ಕಡಲತೀರಕ್ಕೆ ನಿನ್ನೆ ಬಂದಿದ್ದ ಈತನ ಬಳಿ ಸೂಕ್ತ ದಾಖಲೆಗಳು ಇಲ್ಲದ ಕಾರಣ ನೌಕಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಾಮತ್ ಬೀಚ್, ನೌಕಾನೆಲೆಯ ವ್ಯಾಪ್ತಿಯಲ್ಲಿದೆ. ಇಲ್ಲಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧವಿದೆ. ಹೀಗಿರುವಾಗ ಅನುಮತಿ ಪಡೆಯದೇ ತೀರಕ್ಕೆ ಭೇಟಿ ನೀಡಿದ್ದರಿಂದ ವಿದೇಶಿಗನನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಅವರನ್ನು ಒಪ್ಪಿಸಲಾಗಿದೆ.

English summary
A foreigner has been taken into custody on charges of illegally entering Kamat Beach in the Seabird Shipyard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X