ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಲಕ್ಕಿ ಉಡುಗೆ ತೊಟ್ಟು ಸುಕ್ರಜ್ಜಿ ಜೊತೆ ಕುಣಿದ ವಿದೇಶಿಗರು

|
Google Oneindia Kannada News

ಕಾರವಾರ. ಜನವರಿ 29: ಜರ್ಮನಿಯ ಮಾಕ್ಸ್ ಮಿಲಿನ್ ಹಾಗೂ ಆಸ್ಟ್ರೇಲಿಯಾದ ವಲೆರಿ ಸ್ಟೊಬೆಲ್ ಎಂಬುವರು ಹಾಲಕ್ಕಿ ಉಡುಗೆ ತೊಟ್ಟು ಜಾನಪದ ಲೋಕದ ಗಾನಕೋಗಿಲೆ ಎಂದೇ ಹೆಸರುವಾಸಿಯಾಗಿರುವ ಸುಕ್ರಿ ಬೊಮ್ಮಗೌಡ ಅವರೊಂದಿಗೆ ಸಾಂಪ್ರದಾಯಿಕ ನೃತ್ಯ ಮಾಡಿದ್ದಾರೆ.

ಸುಕ್ರಿ ಬೊಮ್ಮಗೌಡ ಸೇರಿದಂತೆ 89 ಸಾಧಕರಿಗೆ ಪದ್ಮ ಪ್ರಶಸ್ತಿಸುಕ್ರಿ ಬೊಮ್ಮಗೌಡ ಸೇರಿದಂತೆ 89 ಸಾಧಕರಿಗೆ ಪದ್ಮ ಪ್ರಶಸ್ತಿ

ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು "ಹಾಲಕ್ಕಿ ಇಂಚರ" ಕಾರ್ಯಕ್ರಮದ ಅಡಿ ಸುಕ್ರಿ ಬೊಮ್ಮಗೌಡ ಅವರ ಅಂಕೋಲದಲ್ಲಿನ ಮನೆಗೆ ಅಧ್ಯಯನ ಪ್ರವಾಸದ ಸಲುವಾಗಿ ಬಂದಿದ್ದರು. ಈ ವೇಳೆ ಜೊತೆಯಾದ ಇಬ್ಬರು ವಿದೇಶಿ ಮಹಿಳೆಯರು ಹಾಲಕ್ಕಿ ಜನರೊಂದಿಗೆ ಬೆರೆತರು. ಹಾಲಕ್ಕಿ ಸಮುದಾಯದ ಉಡುಪು ಹಾಗೂ ಮಣಿಸರ ಧರಿಸಿದ ಇವರು ಸುಕ್ರಿ ಗೌಡ ಅವರೊಂದಿಗೆ ಹೆಜ್ಜೆ ಹಾಕಿದರು.

Foreigner Danced With Sukri Bommagowda In Karwar

ಸುಕ್ರಿ ಬೊಮ್ಮಗೌಡ, ಸಾಕ್ಷಿ ಮಲಿಕ್ ಸೇರಿ ಐವರಿಗೆ ಚುಂಚಶ್ರೀ ಪ್ರಶಸ್ತಿಸುಕ್ರಿ ಬೊಮ್ಮಗೌಡ, ಸಾಕ್ಷಿ ಮಲಿಕ್ ಸೇರಿ ಐವರಿಗೆ ಚುಂಚಶ್ರೀ ಪ್ರಶಸ್ತಿ

ಹಾಲಕ್ಕಿ ಸಂಪ್ರದಾಯದ ಥಾರ್ಲೆ ನೃತ್ಯವನ್ನು ಮಾಡಿದರು. ಸುಕ್ರಿ ಗೌಡ ಕೂಡ ಉತ್ಸಾಹದಿಂದ ಅವರನ್ನು ಬರಮಾಡಿಕೊಂಡಿದ್ದು, ವಿದೇಶಿಗರು ಎರಡು ದಿನಗಳ ಕಾಲ ಅವರ ಮನೆಯಲ್ಲಿಯೇ ಇದ್ದರು. ಈ ವೇಳೆ ಹಾಲಕ್ಕಿ ಸಮುದಾಯದ ವೇಷಭೂಷಣ, ಅವರಲ್ಲಿನ ಪ್ರೀತಿಯನ್ನು ಕೊಂಡಾಡಿದ್ದಾರೆ.

English summary
Max Milin of Germany and Valerie Stobel of Australia danced with Sukri Bommagowda in karwar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X