ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐದು ಬುಕ್ ಆಫ್ ರೆಕಾರ್ಡ್ಸ್ ಗಳಲ್ಲಿ ಮಿಂಚಿದ ಐದರ ಪೋರ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್ 05 : ಸ್ಕೇಟಿಂಗ್ ನಲ್ಲಿ ಮೂರು ಹೊಸ ದಾಖಲೆ ಮಾಡುವ ಮೂಲಕ ಕೈಗಾದ ಶ್ಯಾಮ್ ಹೆಬ್ಳೇಕರ್ ಎನ್ನುವ ಐದು ವರ್ಷದ ಬಾಲಕ ಐದು ಪ್ರಮುಖ ಬುಕ್ ಆಫ್ ರೆಕಾರ್ಡ್ಸ್ ಗಳಲ್ಲಿ ಮಿಂಚಿದ್ದಾನೆ.

72 ಇಂಚಿನ ಮರಕಾಲ ಮೇಲೆ ಪ್ರತಿ ಗಂಟೆಗೆ 10 ಕಿ.ಮೀ ವೇಗದಲ್ಲಿ 2 ಕಿ.ಮೀ. ಹಾಗೂ ಅದೇ ಎತ್ತರದಲ್ಲಿ 500 ಮೀಟರ್‌ವರೆಗೆ ಹಿಮ್ಮುಖವಾಗಿ ಸ್ಟಿಲ್ಟ್ ಸ್ಕೇಟಿಂಗ್ ಮಾಡಿದನು. ಬಳಿಕ, 87 ಇಂಚಿನ ಮರಕಾಲ ಮೇಲೆ 500 ಮೀಟರ್‌ವರೆಗೆ ಕ್ರಮಿಸಿ ವಿಶ್ವದಲ್ಲೇ ಹೊಸ ದಾಖಲೆ ಬರೆದನು.

10 ಗಂಟೆ ಏಣಿ ಮೇಲೆ ನಿಂತು ಬೈಕ್ ಓಡಿಸಿ ವಿಶ್ವದಾಖಲೆ10 ಗಂಟೆ ಏಣಿ ಮೇಲೆ ನಿಂತು ಬೈಕ್ ಓಡಿಸಿ ವಿಶ್ವದಾಖಲೆ

ಇದು ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ , ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ , ರೆಕಾರ್ಡ್ ಹೋಲ್ಡರ್ ರಿಪಬ್ಲಿಕ್ (ಯುನೈಟೆಡ್‌ ಕಿಂಗ್ಡಮ್), ಪರ್ಫೆಕ್ಟ್ ಬುಕ್ ಆಫ್ ವರ್ಲ್ಡ ರೆಕಾರ್ಡ್ಸ್ , ಹೈ ರೇಂಜ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಯಿತು.

Five-year-old boy has shine in five major Book of Records.

ದಾಖಲೆಗಳ ನೋಂದಾವಣೆಗೆ ಬಂದಿದ್ದ ಪರ್ಫೆಕ್ಟ್ ಬುಕ್ ಆಫ್ ವರ್ಲ್ಡ ರೆಕಾರ್ಡ್‌ನ ಕಾಮತ್ ಕಿಶೋರ್ ಜೋಶಿ, ಹೈ ರೇಂಜ್ ಬುಕ್ ಆಫ್ ರೆಕಾರ್ಡ್ಸ್ ನ ಹರ್ಷವರ್ಧನ, ರೆಕಾರ್ಡ್ ಹೋಲ್ಡರ್ ರಿಪಬ್ಲಿಕ್‌ನ (ಯುನೈಟೆಡ್‌ ಕಿಂಗ್ಡಮ್) ಪ್ರಸಾದ್ ಆರ್.ಜಿ., ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ ನ ಹರೀಶ್ ಆರ್. ಶ್ಯಾಮ್ ಗೆ ಪ್ರಮಾಣ ಪತ್ರ ಹಾಗೂ ಪದಕ ವಿತರಿಸಿದರು.

Five-year-old boy has shine in five major Book of Records.

ಸುಮಂತ್ ಹೆಬ್ಳೇಕರ್ ಹಾಗೂ ಪೂಜಾ ಹೆಬ್ಳೇಕರ್ ದಂಪತಿಯ ಪುತ್ರನಾಗಿರುವ ಈತ, ಎರಡು ವರ್ಷಗಳಿಂದ ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್‌ನ ತರಬೇತುದಾರ ದಿಲೀಪ ಹಣಬರ ಅವರ ಬಳಿ ತರಬೇತಿ ಪಡೆಯುತ್ತಿದ್ದ.

English summary
Five-year-old boy has shine in five major Book of Records. He has written three new records in skating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X