ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರದ ಯುದ್ಧನೌಕೆಯಲ್ಲಿ ಬೆಂಕಿ ಅವಘಡ: ಅಧಿಕಾರಿ ಸಾವು

|
Google Oneindia Kannada News

ಕಾರವಾರ, ಏಪ್ರಿಲ್ 26: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ನೌಕಾನೆಲೆಯಲ್ಲಿ ಉಂಟಾದ ಅಗ್ನಿ ಅವಘಡಕ್ಕೆ ಒಬ್ಬ ಅಧಿಕಾರಿ ಬಲಿಯಾಗಿದ್ದಾರೆ. ನೌಕಾನೆಲೆಯ ಕೆಲವು ಸಿಬ್ಬಂದಿಗೆ ಗಾಯಗಳಾಗಿವೆ. ಬೆಂಕಿಯನ್ನು ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಲಂಡನ್‌ನ ಟಾಟಾ ಸ್ಟೀಲ್ ಘಟಕದಲ್ಲಿ ಬೆಂಕಿ: ಇಬ್ಬರಿಗೆ ಗಾಯ ಲಂಡನ್‌ನ ಟಾಟಾ ಸ್ಟೀಲ್ ಘಟಕದಲ್ಲಿ ಬೆಂಕಿ: ಇಬ್ಬರಿಗೆ ಗಾಯ

ಕಾರವಾರದ ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿತ್ತು. ಲೆಫ್ಟಿನೆಂಟ್ ಜನರಲ್ ಡಿ.ಎಸ್. ಚೌವ್ಹಾಣ್ ಬೆಂಕಿಯ ಜ್ವಾಲೆಗೆ ಸಿಲುಕಿ ಸುಟ್ಟುಗಾಯಗಳಿಂದ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಏಳು ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ.

ರಿಪೇರಿ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ವೈರಲ್ ವಿಡಿಯೋ ರಿಪೇರಿ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ: ವೈರಲ್ ವಿಡಿಯೋ

ಐಎನ್‌ಎಸ್ ವಿಕ್ರಮಾದಿತ್ಯದ ಬಾಯ್ಲರ್ ಕಂಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಹೆಚ್ಚಿನ ಅನಾಹುತ ಸಂಭವಿಸದಂತೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದ ನಡೆಯಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.

ಐಎನ್‌ಎಸ್ ವಿಕ್ರಮಾದಿತ್ಯಕ್ಕೆ ಹಾನಿಯಾಗಿಲ್ಲ. ಗಾಯಾಳುಗಳನ್ನು ವಾಯುನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

fire in INS Vikramaditya in Karwar Karnataka Naval base Kadamba

ಶುಕ್ರವಾರ ಬೆಳಿಗ್ಗೆ ಬಾಯ್ಲರ್ ಕಂಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಆಕಸ್ಮಿಕದ ಈ ಘಟನೆಯ ಬಗ್ಗೆ ಸಮಿತಿ ತನಿಖೆಗೆ ನೌಕಾದಳ ಆದೇಶಿಸಿದೆ.

English summary
A fire broke out in aircraft carrier INS Vikramaditya in Karwar, Karnatak on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X