• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಕನ್ನಡ ‌ಜಿ.ಪಂ ಅಭಿಲೇಖಾಲಯ ಕಟ್ಟಡಕ್ಕೆ ಬೆಂಕಿ: ಕೆ-ಸ್ವಾನ್ ಕೊಠಡಿ ಭಸ್ಮ

|
Google Oneindia Kannada News

ಕಾರವಾರ, ಜೂನ್ 5: ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿನ ಅಭಿಲೇಖಾಲಯ ಕಚೇರಿ ಕಟ್ಟಡದೊಳಗೆ ಶನಿವಾರ ಬೆಳಿಗ್ಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ‌ ಅವಘಡ ಸಂಭವಿಸಿದೆ.

ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ಇದ್ದಕ್ಕಿದ್ದಂತೆ ಕಟ್ಟಡದೊಳಗೆ ಬೆಂಕಿ ಕಾಣಿಸಿಕೊಂಡಿದ್ದು,‌ ಕ್ಷಣಾರ್ಧದಲ್ಲಿ ಎರಡು ಅಂತಸ್ತಿನವರೆಗೂ ವ್ಯಾಪಿಸಿತು. ತಕ್ಷಣವೇ ಸ್ಥಳೀಯರ‌ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಪಟ್ಟರು. ಒಂದು ವಾಹನದ ಟ್ಯಾಂಕ್ ನೀರು ಖಾಲಿಯಾದರೂ ಬೆಂಕಿ ಮಾತ್ರ ನಂದಿರಲಿಲ್ಲ. ಮತ್ತಿನ್ನೊಂದು ವಾಹನವನ್ನು ಸ್ಥಳಕ್ಕೆ ಕರೆಯಿಸಿ ನಂದಿಸುವ ಕಾರ್ಯ ಮಾಡಲಾಗಿದೆ.

ಕಟ್ಟಡದ ನೆಲ ಅಂತಸ್ತಿನಲ್ಲಿ (ಗ್ರೌಂಡ್ ಫ್ಲೋರ್) ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್ ಹಾಲ್ ಇದ್ದು, ಈ ಸಭಾಂಗಣ ಸಂಪೂರ್ಣ ಫ್ಲೈವುಡ್‌ನಿಂದ ಕೂಡಿದ್ದಾಗಿದೆ. ಈ ಕಾರಣದಿಂದಾಗಿ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಹೊತ್ತಿಕೊಂಡಿದೆ.

ಮೊದಲ ಅಂತಸ್ತಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಚೇರಿ ಹಾಗೂ ಅಕ್ಷರ ದಾಸೋಹ ಕಚೇರಿ ಇದ್ದು, ಮೂರನೇ ಅಂತಸ್ತಿನಲ್ಲಿ ದಾಖಲೆಗಳ ಕೊಠಡಿ ಇದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೂರು ಅಂತಸ್ತಿಗೂ ಬೆಂಕಿಯ ಜ್ವಾಲೆ ಆವರಿಸಿದೆಯಾದರೂ ರೆಕಾರ್ಡ್ಸ್ ರೂಮಿಗೆ ಬೆಂಕಿ ತಗುಲಿಲ್ಲ ಎನ್ನಲಾಗಿದೆ.

   Amazon ಆನ್ಲೈನ್ ಕಂಪನಿಯಿಂದ ಕನ್ನಡಕ್ಕೆ ಭಾರಿ ಅವಮಾನ:ಸಿಡಿದೆದ್ದ ಕರವೇ | Oneindia Kannada

   ಸುಮಾರು ಮೂರು ವರ್ಷಗಳ ಹಿಂದೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಕೊಠಡಿಯಲ್ಲೂ ಬೆಂಕಿ ಅವಘಡ ಸಂಭವಿಸಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಭೇಟಿ ನೀಡಿ ಪರಿಶೀಲಿಸಿದ್ದಾರೆ.

   English summary
   The fire broke out on Saturday morning due to short circuit inside the office building of the Uttara Kannada zilla panchayat.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X