ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವುದೇ ಪಕ್ಷಕ್ಕೆ ಹೋದರೂ ಯಾವ ಜಾತಿ, ಎಷ್ಟು ದುಡ್ಡು ತರುತ್ತಿಯಾ ಎಂದು ಕೇಳುತ್ತಾರೆ: ಹೊರಟ್ಟಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್ 6: ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಜಾತಿ ಇದೆ. ಯಾವುದೇ ಪಕ್ಷಕ್ಕೆ ಹೋದರೂ ನಿಂದು ಯಾವ ಜಾತಿ, ಎಷ್ಟು ದುಡ್ಡು ತರುತ್ತಿಯಾ ಇದನ್ನೇ ಕೇಳುತ್ತಾರೆ ಎಂದು ಪಶ್ಚಿಮ ಪಧವೀದರ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಹೇಳಿದರು.

ಕಾರವಾರದಲ್ಲಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾವ ರಾಜಕೀಯ ಪಕ್ಷಗಳು ಜಾತಿ ಬಿಟ್ಟಿಲ್ಲ. ಕೆಲವೊಬ್ಬರು ಕೋಮುವಾದಿ ಪಕ್ಷ ಎಂದು ಕರೆಯುತ್ತಾರೆ. ಆದರೆ ಎಲ್ಲಾ ಪಕ್ಷಗಳು ಜಾತಿ ಮಾಡುತ್ತವೆ ಎಂದ ಅವರು, 42 ವರ್ಷಗಳಿಂದ ಏನು ಕೆಲಸ ಮಾಡಲಿಲ್ಲ. ಶಿಕ್ಷಕರಿಗೆ ಹೆದರಿದಿ ಆರಿಸಿ ಬರುತ್ತಿದ್ದಾರೆ ಎಂದು ನನ್ನ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಶಿಕ್ಷಕರನ್ನ ಯಾರಾದರೀ ಹೆದರಿಸಿ ಆರಸಿ ಬರುವುದಕ್ಕೆ ಆಗುತ್ತಾ? ಸುಮ್ಮನೆ ಟೀಕೆ ಮಾಡಬೇಕು ಎಂದು ಟೀಕೆ ಮಾಡುತ್ತಾರೆ ಅಷ್ಟೇ. ಎಥಿಕ್ಸ್ ಇಲ್ಲದೆ ಟೀಕೆ ಮಾಡುತ್ತಿದ್ದಾರೆ ಎಂದರು.

ಆರ್‌ಎಸ್‌ಎಸ್‌ ಟೀಕಿಸಿಯೇ ಹಿಂದೆ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ: ಬೊಮ್ಮಾಯಿ ಆರ್‌ಎಸ್‌ಎಸ್‌ ಟೀಕಿಸಿಯೇ ಹಿಂದೆ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ: ಬೊಮ್ಮಾಯಿ

ಬಿಜೆಪಿ ಪಕ್ಷದ ದೊಡ್ಡ ದೊಡ್ಡ ನಾಯಕರು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆದರು. ಆಕಸ್ಮಿಕವಾಗಿ ಬಿಜೆಪಿಗೆ ಬಂದೆ. ಬೆಂಬಲಿಗರು, ಯುವ ಶಿಕ್ಷಕರು ಬಿಜೆಪಿಯಿಂದ ನಿಲ್ಲಿ ಎಂದು ಒತ್ತಾಯ ಮಾಡುತ್ತಿದ್ದರು, ಹೀಗಾಗಿ ಬಂದೆ. ಜೆಡಿಎಸ್ ನಲ್ಲಿದ್ದವರನ್ನು ನಾನು ಕರ್ಕೊಂಡು ಬಿಜೆಪಿಗೆ ಹೋದರೆ ಪಕ್ಷವನ್ನ ಮುಗಿಸಿದಂತಾಗುತ್ತದೆ. ಹೀಗಾಗಿ ನಾನು ಆ ಕೆಲಸಕ್ಕೆ ಹೋಗಿಲ್ಲ. ಬರುತ್ತೇವೆ ಎಂದವರಿಗೆ ಬೇಡ ಎಂದಿದ್ದೇನೆ ಎಂದು ಕೆಲ ಜೆಡಿಎಸ್ ನಾಯಕರುಗಳ ಬಿಜೆಪಿ ಸೇರ್ಪಡೆ ವಿಚಾರದ ಸಂಬಂಧ ಸ್ಪಷ್ಟಪಡಿಸಿದರು.

ಪಠ್ಯ ಪರಿಷ್ಕರಣೆಯಲ್ಲಿ ಎಲ್ಲಾ ಪಕ್ಷಗಳಿಂದ ರಾಜಕೀಯ

ಪಠ್ಯ ಪರಿಷ್ಕರಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಮಾಡಿವೆ. ಸಮಾಜಕ್ಕೆ, ಮಕ್ಕಳಿಗೆ, ದೇಶಕ್ಕೆ ಒಳ್ಳೆಯದು ಆಗತ್ತೆ ಅನ್ನೋದಿದ್ದರೆ ಪರಿಷ್ಕರಣೆ ಮಾಡಲಿ, ಅದರಲ್ಲಿ ತಪ್ಪೇನಿದೆ. ಆದರೆ ಅದರಲ್ಲಿ ರಾಜಕೀಯ ಮಾಡಬಾರದು. ಸಾವಿತ್ರಿಬಾಯಿ ಫುಲೆ ಅವರ ಪಠ್ಯವನ್ನು ತೆಗೆದಿದ್ದು ತಪ್ಪು, ನಾನು ಇದನ್ನು ಒಪ್ಪುವುದಿಲ್ಲ. ಮಹಿಳಾ ಶಿಕ್ಷಣದಲ್ಲಿ ಅವರ ಕೊಡುಗೆ ಅಪಾರವಿದೆ. ಭಗತ್ ಸಿಂಗ್, ಸಾವಿತ್ರಿಬಾಯಿ ಫುಲೆ ಅವರ ಪಠ್ಯ ತೆಗೆದದ್ದು ತಪ್ಪು, ನಾನು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪುನರುಚ್ಚರಿಸಿದರು‌.

ಪರಿಷತ್ ಫೈಟ್; ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಜೆಡಿಎಸ್ ನಾಯಕ! ಪರಿಷತ್ ಫೈಟ್; ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಜೆಡಿಎಸ್ ನಾಯಕ!

Every Party Has Caste Politics: Basavaraj Horatti

ಹೆಡ್ಗೆವಾರ್ ಪಠ್ಯ ಸೇರಿಸಿರುವುದು ತಪ್ಪಲ್ಲ
ಹೆಡ್ಗೆವಾರ್ ಪಠ್ಯವನ್ನು ಸೇರಿಸಿರುವುದನ್ನು ನಾನು ತಪ್ಪು ಎನ್ನಲಾರೆ. ಅದರಲ್ಲಿ ತಪ್ಪೇನಿದೆ? ಒಳ್ಳೆ ಉದ್ದೇಶದಿಂದ ಮಾಡಿದ ಕೆಲಸಗಳು ಯಾವುದೇ ಕಾರಣಕ್ಕೂ ತಪ್ಪಲ್ಲ ಎಂದ ಅವರು, ಯಾವ ಅಧಿಕಾರಿಗಳೂ ಶಿಸ್ತಾಗಿ ಕ್ರಮ ಕೈಗೊಳ್ಳದಿದ್ದರಿಂದ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಬಂದಾಗ ಯಾವ ಮಂತ್ರಿ ಬರುತ್ತಾರೋ ಅವರಿಗೆ ಬೇಕಾಗಿದ್ದನ್ನ ಪಠ್ಯದಲ್ಲಿ ತರುತ್ತಾರೆ. ರಾಜಕಾರಣಿಗಳು ಇದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು.

ಪಕ್ಷದಲ್ಲಿ ನಿಮ್ಮ ಸ್ಪರ್ಧೆಗೆ ವಿರೋಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ಬಿಜೆಪಿ ಸೇರುವುದಕ್ಕೆ ನಡೆದಿರುವ ಬೆಳವಣಿಗೆಗೂ ನನಗೂ ಸಂಬಂಧವಿಲ್ಲ. ಜೊತೆಗೆ ಆ ಸಂದರ್ಭದಲ್ಲಿ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ನಾನು ಪಕ್ಷ ಸೇರಿದಾಗ, ನೀವು ಮುಂಚೆಯೇ ಬಂದಿದರೆ ಚೆನ್ನಾಗಿತ್ತು ಎಂದು ಆ ಪಕ್ಷದ ನಾಯಕರು ಸ್ವಾಗತಿಸಿದ್ದರು.

(ಒನ್ಇಂಡಿಯಾ ಸುದ್ದಿ)

English summary
BJP MLC Candidate Basavaraj Horatti has said caste politics is in every political parties. Parties' usually ask about money from the candidates he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X