ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೌಕಾಪಡೆ ಮಾಹಿತಿ ಸೋರಿಕೆ; ಬಟ್ಟೆ ವ್ಯಾಪಾರಿ ವಿರುದ್ಧ ಚಾರ್ಜ್‌ಶೀಟ್!

By ದೇವರಾಜ್ ನಾಯ್ಕ್
|
Google Oneindia Kannada News

ಕಾರವಾರ, ಮಾರ್ಚ್ 14; ನೌಕಾನೆಲೆಯಲ್ಲಿ 2019ರಲ್ಲಿ ನಡೆದಿದ್ದ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಗೋಧ್ರಾ ಮೂಲದ ಬಟ್ಟೆ ವ್ಯಾಪಾರಿಯ ವಿರುದ್ಧ ಎನ್‌ಐಎ ವಿಜಯವಾಡದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.

ಗುಜರಾತ್‌ನ ಪಂಚಮಹಲ್‌ನ ಗೋಧ್ರಾ ನಿವಾಸಿ ಇಮ್ರಾನ್ ಯಾಕುಬ್ ಗೀತೇಲಿ ಅಲಿಯಾಸ್ ಗೀತೇಲಿ ಇಮ್ರಾನ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಸೂಕ್ಷ್ಮ ಮಾಹಿತಿಗಳನ್ನು ಪೂರೈಸಿದ ನೌಕಾಪಡೆಯ ಸಿಬ್ಬಂದಿಯೊಂದಿಗೆ ಈತ ಮಧ್ಯಸ್ಥಿಕೆ ವಹಿಸಿದ್ದ ಎನ್ನುವುದು ಆರೋಪ. ಐಪಿಸಿ ಸೆಕ್ಷನ್ ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ ಹಲವಾರು ಸೆಕ್ಷನ್‌ಗಳ ಅಡಿ ದೋಷಾರೋಪಟ್ಟಿ ಸಲ್ಲಿಕೆಯಾಗಿದೆ.

ನೌಕಾನೆಲೆ ವ್ಯಾಪ್ತಿಯಲ್ಲಿ ಅಕ್ರಮ ಪ್ರವೇಶ; ಪೊಲೀಸರ ವಶಕ್ಕೆ ವಿದೇಶಿಗನೌಕಾನೆಲೆ ವ್ಯಾಪ್ತಿಯಲ್ಲಿ ಅಕ್ರಮ ಪ್ರವೇಶ; ಪೊಲೀಸರ ವಶಕ್ಕೆ ವಿದೇಶಿಗ

ಗೀತೇಲಿ ಪಾಕಿಸ್ತಾನಕ್ಕೆ ಬಟ್ಟೆ ವ್ಯಾಪಾರದ ನೆಪದಲ್ಲಿ ಆಗಾಗ ಭೇಟಿ ನೀಡುತ್ತಿದ್ದ. ಆ ಸಂದರ್ಭದಲ್ಲಿ ಐಎಸ್ಐ ಏಜೆಂಟರನ್ನು ಭೇಟಿಯಾಗುತ್ತಿದ್ದ. 38 ವರ್ಷದ ಈತ ಐಎಸ್‌ಐ ಏಜೆಂಟರ ಸೂಚನೆಯ ಮೇರೆಗೆ, ಸೂಕ್ಷ್ಮ ಮತ್ತು ನೌಕಾಪಡೆಗಳ ಕಾರ್ಯತಂತ್ರದ ಮಾಹಿತಿಯನ್ನು ರವಾನಿಸಲು ನೌಕಾ ಸಿಬ್ಬಂದಿಯ ಖಾತೆಗಳಿಗೆ ಹಣವನ್ನು ವರ್ಗಾಯಿಸುವ ಜವಾಬ್ದಾರಿಯನ್ನೂ ನಿರ್ವಹಿಸಿದ್ದ ಎಂಬುದು ಆರೋಪ. ಬಟ್ಟೆ ವ್ಯಾಪಾರದ ಹೆಸರಿನಲ್ಲಿ ಅಕ್ರಮವಾಗಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣವನ್ನು ಕೂಡ ಸಂಗ್ರಹಿಸುತ್ತಿದ್ದ. 2019ರ ಸೆಪ್ಟೆಂಬರ್‌ನಲ್ಲಿ ಈತನನ್ನು ಬಂಧಿಸಲಾಗಿತ್ತು.

ಬೆಂಗಳೂರು-ಕಾರವಾರ ರೈಲು ವೇಗ ಹೆಚ್ಚಳ, ವೇಳಾಪಟ್ಟಿ ಬೆಂಗಳೂರು-ಕಾರವಾರ ರೈಲು ವೇಗ ಹೆಚ್ಚಳ, ವೇಳಾಪಟ್ಟಿ

Espionage Case NIA Files Charge Sheet

ಸರ್ಕಾರದ ವಿರುದ್ಧ ಕ್ರಿಮಿನಲ್ ಪಿತೂರಿ ಅಥವಾ ಯುದ್ಧ ಮಾಡಲು ಪ್ರಯತ್ನಿಸುತ್ತಿರುವ ಆರೋಪದ ಮೇರೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಆಂಧ್ರಪ್ರದೇಶ ಪೊಲೀಸರ ಸಿಐ ಸೆಲ್ ವಿಭಾಗದಲ್ಲಿ ಈ ಪ್ರಕರಣ ಮೊದಲು 2019ರ ನವೆಂಬರ್ 16ರಂದು ದಾಖಲಾಗಿತ್ತು.

ಕಾರವಾರ: ಸೀಬರ್ಡ್ ಪ್ರಾಜೆಕ್ಟ್’ನ ಡಿಜಿ ಕೊರೊನಾಕ್ಕೆ ಬಲಿಕಾರವಾರ: ಸೀಬರ್ಡ್ ಪ್ರಾಜೆಕ್ಟ್’ನ ಡಿಜಿ ಕೊರೊನಾಕ್ಕೆ ಬಲಿ

ನಂತರ, ಗೂಢಚರ್ಯೆ ಪ್ರಕರಣವು ಮುಂಬೈ ನೌಕಾನೆಲೆ, ಕಾರವಾರದ ನೌಕಾನೆಲೆ ಮತ್ತು ವಿಶಾಖಪಟ್ಟಣಂ ನೌಕಾಪಡೆಗೆ ಸಂಪರ್ಕ ಹೊಂದಿದ್ದರಿಂದ ಎನ್ಐಎ 2019ರ ಡಿಸೆಂಬರ್ 29ರಂದು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತು. ಎನ್‌ಐಎ ಕೆಲವು ನಾವಿಕರು ಮತ್ತು ನಾಗರಿಕರು ಸೇರಿದಂತೆ 14 ಜನರ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದೆ.

ಡಾಲ್ಫಿನ್ ನೋಸ್ ಕಾರ್ಯಾಚರಣೆ; ವಿಜಯವಾಡದ ಕೌಂಟರ್ ಇಂಟೆಲಿಜೆನ್ಸ್ ವಿಭಾಗ, ನೌಕಾಪಡೆಯ ಗುಪ್ತಚರ ಇಲಾಖೆ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ನಡೆಸಿದ 'ಡಾಲ್ಫಿನ್ಸ್ ನೋಸ್' ಕಾರ್ಯಾಚರಣೆಯಲ್ಲಿ ನೌಕಾಪಡೆಯ 7 ನಾವಿಕರ ಚಲನವಲನಗಳನ್ನು ಹಲವು ದಿನಗಳವರೆಗೆ ಪತ್ತೆ ಹಚ್ಚಿ, ಅವರನ್ನು 2019ರಲ್ಲಿ ಬಂಧಿಸಲಾಗಿತ್ತು.

ಈ ಪ್ರಕರಣದಲ್ಲಿ 7 ನಾವಿಕರು, ಮೂವರು ನಾಗರಿಕರು ಮತ್ತು ಇತರರನ್ನು ಬಂಧಿಸಲಾಗಿದೆ. ಮಹಿಳೆಯರ ಖಾತೆಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ನಾವಿಕರಿಗೆ ಆಮಿಷವೊಡ್ಡಿ, ಪಾಕಿಸ್ತಾನದ ಹ್ಯಾಂಡ್ಲರ್ ಗಳಾಗಿದ್ದ ಸ್ವಯಂಘೋಷಿತ ಉದ್ಯಮಿಗಳಿಗೆ ನಾವಿಕರನ್ನು ಆನ್‌ಲೈನ್‌ನಲ್ಲಿ ಪರಿಚಯಿಸಲಾಗಿತ್ತು. 2017 ರಲ್ಲಿ ನೇಮಕಗೊಂಡಿದ್ದ ನಾವಿಕರು 2018ರ ಸೆಪ್ಟೆಂಬರ್‌ನಲ್ಲಿ ಹನಿಟ್ರ್ಯಾಪ್‌ಗೆ ಸಿಲುಕಿದ್ದರು.

ತಾವು ಕಾರ್ಯಾಚರಿಸುವ ಸ್ಥಳಗಳು, ಪ್ರಮುಖ ಜಲಾಂತರ್ಗಾಮಿ ನೌಕೆಗಳು, ಉನ್ನತ ಮಟ್ಟದ ಅಧಿಕಾರಿಗಳ ಹೆಸರುಗಳು ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಲು ನಾವಿಕರನ್ನು ಬಳಸಿಕೊಳ್ಳಲಾಗಿತ್ತು. ಅವರಿಗೆ ಹವಾಲಾ ಆಪರೇಟರ್‌ಗಳ ಮೂಲಕ ಹಣ ನೀಡಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಪ್ರಕರಣದಲ್ಲಿ ಪೊಲೀಸರು ಈ ಹಿಂದೆ ಜಬ್ಬರ್‌ ಎಂಬಾತನನ್ನು ಬಂಧಿಸಿದ್ದು, ತನಿಖೆ ಇನ್ನೂ ಪ್ರಗತಿಯಲ್ಲಿದೆ.

English summary
NIA filed charge sheet against Yakub Giteli one of the main accused in the espionage case had links to Mumbai naval base, Karwar naval base and the Visakapatnam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X