ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರ್ನಾಕುಲಂ ಜಂಕ್ಷನ್-ಓಖಾ ವಿಶೇಷ ರೈಲು; ವೇಳಾಪಟ್ಟಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಡಿಸೆಂಬರ್ 10: ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಸಮನ್ವಯದಲ್ಲಿ ಎರ್ನಾಕುಲಂ ಜಂಕ್ಷನ್-ಓಖಾ-ಎರ್ನಾಕುಲಂ ಜಂಕ್ಷನ್ ನಡುವೆ ವಿಶೇಷ ಹಬ್ಬದ ರೈಲನ್ನು ಓಡಿಸಲಾಗುತ್ತಿದೆ. ವಾರದಲ್ಲಿ ಎರಡು ಬಾರಿ ಈ ರೈಲು ಸಂಚಾರ ನಡೆಸಲಿದೆ.

ಎರ್ನಾಕುಲಂ ಜಂಕ್ಷನ್-ಓಖಾ-ಎರ್ನಾಕುಲಂ ಜಂಕ್ಷನ್ ನಡುವೆ ರೈಲು ಸಂಖ್ಯೆ 06338/ 06337 ಸಂಚಾರ ನಡೆಸಲಿದೆ. ಸಂಪೂರ್ಣವಾಗಿ ಕಾಯ್ದಿರಿಸಿದ ಆಸನಗಳೊಂದಿಗೆ ಈ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕ್ವಾರಂಟೈನ್‌ ಕೇಂದ್ರವಾಗಿದ್ದ ರೈಲು ಬೋಗಿಯಲ್ಲಿ ತರಕಾರಿ ಸಾಗಣೆ! ಕ್ವಾರಂಟೈನ್‌ ಕೇಂದ್ರವಾಗಿದ್ದ ರೈಲು ಬೋಗಿಯಲ್ಲಿ ತರಕಾರಿ ಸಾಗಣೆ!

ರೈಲು ಸಂಖ್ಯೆ 06338 ಎರ್ನಾಕುಲಂ ಜಂಕ್ಷನ್‌ನಿಂದ ಡಿಸೆಂಬರ್ 11ರಿಂದ 30 ರವರೆಗೆ ಪ್ರತಿ ಬುಧವಾರ ಮತ್ತು ಶುಕ್ರವಾರ ಸಂಚಾರ ನಡೆಸಲಿದೆ. ರಾತ್ರಿ 8.25ಕ್ಕೆ ರೈಲು ಹೊರಡಲಿದ್ದು, ಮೂರನೇ ದಿನ ಸಂಜೆ 4.40ಕ್ಕೆ ಓಖಾ ತಲುಪಲಿದೆ.

ಹುಬ್ಬಳ್ಳಿಯಿಂದ 10 ವಿಶೇಷ ರೈಲುಗಳ ಸಂಚಾರ; ವೇಳಾಪಟ್ಟಿ ಹುಬ್ಬಳ್ಳಿಯಿಂದ 10 ವಿಶೇಷ ರೈಲುಗಳ ಸಂಚಾರ; ವೇಳಾಪಟ್ಟಿ

Ernakulam Junction And Okha Festival Special Train Schedule

ಈ ರೈಲು ಅಲುವಾ, ತ್ರಿಶೂರ್, ಶೋರನೂರ್ ಜಂಕ್ಷನ್, ಪಟ್ಟಂಬಿ, ಕುಟ್ಟಿಪುರಂ, ತಿರೂರ್, ಪರಪ್ಪನಾನಡಿ, ಕಾಸರಗೋಡು, ಮಂಗಳೂರು ಜಂಕ್ಷನ್, ಸುರತ್ಕಲ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರಸ್ತೆ ಬೈಂದೂರು, ಭಟ್ಕಳ, ಹೊನ್ನಾವರ, ಕಾರವಾರ, ಮಡ್ಗಾಂವ್ ಜಂಕ್ಷನ್, ರತ್ನಾಗಿರಿ, ಸೂರತ್, ಅಂಕಲೇಶ್ವರ, ವಡೋದರಾ ಜಂಕ್ಷನ್, ಅಹಮದಾಬಾದ್ ಜಂಕ್ಷನ್ ಮೂಲಕ ಸಂಚಾರ ನಡೆಸಲಿದೆ.

ಬೆಂಗಳೂರಿಗೆ ಬರಲು ಹೊಸ 12 ರೈಲು; ವೇಳಾಪಟ್ಟಿ ಬೆಂಗಳೂರಿಗೆ ಬರಲು ಹೊಸ 12 ರೈಲು; ವೇಳಾಪಟ್ಟಿ

ಓಖಾ-ಎರ್ನಾಕುಲಂ ಜಂಕ್ಷನ್ ನಡುವೆ ರೈಲು ಸಂಖ್ಯೆ 06337 ಡಿಸೆಂಬರ್ 14ರಿಂದ 2 ಜನವರಿ 2021ರ ತನಕ ಸಂಚಾರ ನಡೆಸಲಿದೆ. ಪ್ರತಿ ಸೋಮವಾರ ಮತ್ತು ಶನಿವಾರ ಈ ರೈಲು ಓಡಲಿದೆ. 6.45ಕ್ಕೆ ರೈಲು ಹೊರಡಲಿದ್ದು, ಎರಡನೇ ದಿನ ರಾತ್ರಿ 11.55ಕ್ಕೆ ಎರ್ನಾಕುಲಂ ಜಂಕ್ಷನ್ ತಲುಪಲಿದೆ.

ಈ ರೈಲು ದ್ವಾರಕಾ, ಖಂಭಲಿಯ, ಜಾಮ್‌ನಗರ್, ಹಾಪಾ, ರಾಜ್‌ಕೋಟ್ ಜಂಕ್ಷನ್, ಸುರೇಂದ್ರನಗರ್, ವಿರಮ್‌ಗಂ ಜಂಕ್ಷನ್, ಅಹಮದಾಬಾದ್ ಜಂಕ್ಷನ್, ಮಡ್ಗಾಂವ್ ಜಂಕ್ಷನ್, ಕಾರವಾರ, ಹೊನ್ನಾವರ, ಭಟ್ಕಳ, ಕುಂದಾಪುರ, ಉಡುಪಿ, ಸುರತ್ಕಲ್, ಮಂಗಳೂರು ಜಂಕ್ಷನ್, ಕಾಸರಗೋಡು ಮೂಲಕ ಸಂಚಾರ ನಡೆಸಲಿದೆ.

ಈ ರೈಲಿನಲ್ಲಿ ಒಟ್ಟು 18 ಬೋಗಿಗಳಿವೆ. 2 ಟೈಯರ್ ಎಸಿಯ ಒಂದು ಕೋಚ್, 3 ಟೈಯರ್ ಎಸಿಯ 2 ಕೋಚ್‌ಗಳು, ಸ್ಲೀಪರ್ 10 ಕೋಚ್‌ಗಳು, ಸೆಕೆಂಡ್ ಕ್ಲಾಸ್ 3 ಕೋಚ್‌ಗಳು, ಜನರೇಟರ್ ಕಾರು 2 ಕೋಚ್‌ಗಳನ್ನು ಹೊಂದಿರಲಿದೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ಪ್ರಯಾಣಿಕರು ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್- 19ಗೆ ಸಂಬAಧಿಸಿದAತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೈರ್ಮಲ್ಯೀಕರಣ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಇತರ ಮಾನದಂಡಗಳನ್ನು ಅನುಸರಿಸಬೇಕು ಎಂದೂ ರೈಲ್ವೆ ತಿಳಿಸಿದೆ.

English summary
Konkan railway will run festival special train between Ernakulam Junction and Okha. Here are the train route and schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X