ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಲೋಕಲ್ ಫೈಟ್'ಗೆ ಸಿದ್ಧಗೊಳ್ಳುತ್ತಿದೆ ಉತ್ತರ ಕನ್ನಡ : ಅಭ್ಯರ್ಥಿ ಆಯ್ಕೆಗೆ ತಾಲೀಮು

By ಡಿಪಿ ನಾಯ್ಕ
|
Google Oneindia Kannada News

ಕಾರವಾರ, ಆಗಸ್ಟ್.06: ವಿಧಾನಸಭಾ ಚುನಾವಣೆಯ ಬಳಿಕ ಇದೀಗ ಮತ್ತೊಂದು ಚುನಾವಣೆಗೆ ಜಿಲ್ಲೆಯಲ್ಲಿ ವೇದಿಕೆ ಸಜ್ಜಾಗಿದೆ. ಉತ್ತರ ಕನ್ನಡದ ಒಟ್ಟು 12 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಎಂಟಕ್ಕೆ ಮೊದಲ ಹಂತದಲ್ಲಿ ಆ.29ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಮೂರೂ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ನಿರತವಾಗಿವೆ.

ಜಿಲ್ಲೆಯ 3 ನಗರಸಭೆ, 3 ಪುರಸಭೆ, 2 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಆ.10ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಸಲು ಆ.17ರ ವರೆಗೆ ಅವಕಾಶ ನೀಡಲಾಗಿದೆ. ಆ.18 ರಂದು ನಾಮತ್ರಗಳ ಪರಿಶೀಲನೆ ನಡೆಯಲಿದ್ದು, ಸೆ.1ರಂದು ಅಭ್ಯರ್ಥಿಗಳ ಹಣೆಬರಹ ಪ್ರಕಟವಾಗಲಿದೆ.

ಉಡುಪಿ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜುಉಡುಪಿ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜು

ತಲಾ‌ 31 ವಾರ್ಡ್'ಗಳನ್ನು ಹೊಂದಿರುವ ಕಾರವಾರ, ಶಿರಸಿ, ದಾಂಡೇಲಿ ನಗರಸಭೆ, ತಲಾ 23 ವಾರ್ಡ್'ಗಳನ್ನು ಹೊಂದಿರುವ ಹಳಿಯಾಳ, ಕುಮಟಾ, ಅಂಕೋಲಾ ಪುರಸಭೆ, ತಲಾ 19 ವಾರ್ಡ್'ಗಳನ್ನು ಹೊಂದಿರುವ ಯಲ್ಲಾಪುರ ಹಾಗೂ ಮುಂಡಗೋಡ ಪಟ್ಟಣ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.

 ನಾಲ್ಕು ಸ್ಥಳೀಯ ಸಂಸ್ಥೆಗಳು ಹೊರಗೆ

ನಾಲ್ಕು ಸ್ಥಳೀಯ ಸಂಸ್ಥೆಗಳು ಹೊರಗೆ

ಭಟ್ಕಳ ಪುರಸಭೆ, ಹೊನ್ನಾವರ, ಸಿದ್ದಾಪುರ ಹಾಗೂ ಜಾಲಿ ಪಟ್ಟಣ ಪಂಚಾಯಿತಿಗಳ ಆಡಳಿತ ಸಮಿತಿ ಅವಧಿ ಇನ್ನೂ ಮುಕ್ತಾಯವಾಗದ ಕಾರಣ ಮೊದಲ ಹಂತದ ಚುನಾವಣೆಯಿಂದ ಈ‌ ನಾಲ್ಕು ಸ್ಥಳೀಯ ಸಂಸ್ಥೆಗಳನ್ನು ಹೊರಗಿಡಲಾಗಿದೆ.

ಕಳೆದ ಚುನಾವಣೆಯಲ್ಲಿ ಈ ಎಂಟೂ ನಗರ ಸ್ಥಳೀಯ ಸಂಸ್ಥೆಗಳು ಕಾಂಗ್ರೆಸ್ ಪಾಲಾಗಿದ್ದವು. ಆದರೆ, ಅದರಲ್ಲಿ ಶಿರಸಿ ನಗರಸಭೆಯಲ್ಲಿ ಮಾತ್ರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗೆ ಬಿಜೆಪಿ ಬೆಂಬಲಿಸಿ, ಪರೋಕ್ಷವಾಗಿ ಬಿಜೆಪಿ ಆಡಳಿತ ನಡೆಸುತ್ತಿದೆ ಎನ್ನಲಾಗಿದೆ.

 ಜಿಲ್ಲೆಯ ಮತದಾರರೆಷ್ಟು?

ಜಿಲ್ಲೆಯ ಮತದಾರರೆಷ್ಟು?

ಈ ಎಂಟೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟೂ 2,27,643 ಮತದಾರರಿದ್ದಾರೆ. ಅವರಲ್ಲಿ 1,13,088 ಪುರುಷರು ಹಾಗೂ 1,14,555 ಮಹಿಳಾ ಮತದಾರರಿದ್ದಾರೆ.

ಅದರಂತೆ, ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 52,304 ಮತದಾರರಲ್ಲಿ, 25,933 ಪುರುಷರು ಹಾಗೂ 26,371 ಮಹಿಳಾ ಮತದಾರರಾಗಿದ್ದಾರೆ. ಶಿರಸಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 48,468 ಮತದಾರರಿದ್ದಾರೆ. 24,172 ಪುರುಷರು, 24,296 ಮಹಿಳಾ ಮತದಾರರು ಇದ್ದಾರೆ.

ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟೂ 40,261 ಮತದಾರರಲ್ಲಿ 19,852 ಪುರುಷರು, 20,409 ಮಹಿಳಾ ಮತದಾರರಿದ್ದಾರೆ.

ಅಂಕೋಲಾ ಪುರಸಭೆಯಲ್ಲಿ ಒಟ್ಟೂ 18,522 ಮತದಾರರ ಪೈಕಿ 9,036 ಪುರುಷರು, 9,486 ಮಹಿಳಾ ಮತದಾರರಿದ್ದಾರೆ. ಕುಮಟಾ ಪುರಸಭೆಯಲ್ಲಿ ಒಟ್ಟೂ 22,685 ಮತದಾರರಿದ್ದು 11,412 ಪುರುಷರು, 11,273 ಮಹಿಳೆಯರು, ಹಳಿಯಾಳದ ಪುರಸಭೆಯಲ್ಲಿ ಒಟ್ಟೂ 18,119 ಮತದಾರರಲ್ಲಿ, 9,096 ಪುರುಷರು, 9,023 ಮಹಿಳಾ ಮತದಾರರಿದ್ದಾರೆ.

ಯಲ್ಲಾಪುರ ಪಟ್ಟಣ ಪಂಚಾಯತ್ ನಲ್ಲಿ ಒಟ್ಟೂ 13,732 ಮತದಾರರಿದ್ದು, 6740 ಪುರುಷರು, 6,992 ಮಹಿಳೆಯರು, ಮುಂಡಗೋಡ ಪಟ್ಟಣ ಪಂಚಾಯತ್‍ನಲ್ಲಿ ಒಟ್ಟೂ 13,552 ಮತದಾರರ ಪೈಕಿ 6,847 ಪುರುಷರು, 6,705 ಮಹಿಳಾ ಮತದಾರರಿದ್ದಾರೆ.

 ಆ.15ರ ಒಳಗೆ ಅಭ್ಯರ್ಥಿಗಳಿಗೆ 'ಬಿ' ಫಾರ್ಮ್

ಆ.15ರ ಒಳಗೆ ಅಭ್ಯರ್ಥಿಗಳಿಗೆ 'ಬಿ' ಫಾರ್ಮ್

ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಅಭ್ಯರ್ಥಿಗಳ ಆಯ್ಕೆಗೆ ಈಗಾಗಲೇ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮಿತಿ ರಚನೆ ಮಾಡಿದೆ. ಅದರಂತೆ, ಆ.15 ರೊಳಗೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧ ಮಾಡಿ 'ಬಿ' ಫಾರ್ಮ್ ವಿತರಣೆ ಮಾಡುವ ಸಾಧ್ಯತೆ ಇದೆ. ಆದರೆ, ಜೆಡಿಎಸ್​ನಲ್ಲಿ ಯಾವುದೇ ಸಂಘಟಿತ ಸಿದ್ಧತೆ ಕಂಡುಬರುತ್ತಿಲ್ಲ.

 ವಿವಿಧೆಡೆ ಬಿಜೆಪಿಯಿಂದ ಸಭೆ

ವಿವಿಧೆಡೆ ಬಿಜೆಪಿಯಿಂದ ಸಭೆ

ಬಿಜೆಪಿಯಿಂದ ಸ್ಪರ್ಧೆಗಿಳಿಯುವ ಇಚ್ಛೆ ಹೊಂದಿರುವವರ ಅರ್ಜಿ ಸ್ವೀಕರಿಸುವ ಸಲುವಾಗಿ ಆ.6 ರಂದು ಕುಮಟಾ, ಶಿರಸಿ, ಯಲ್ಲಾಪುರ, ಆ. 7 ರಂದು ಮುಂಡಗೋಡ, ಹಳಿಯಾಳ ಹಾಗೂ ದಾಂಡೇಲಿ, ಆ. 8 ರಂದು ಕಾರವಾರ ಹಾಗೂ ಅಂಕೋಲಾದಲ್ಲಿ ಬಿಜೆಪಿ ಸಭೆ ಆಯೋಜಿಸಿದೆ.

 ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಆರಂಭ

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಆರಂಭ

ಕಾಂಗ್ರೆಸ್ ಕೂಡ ಎಲ್ಲ 8 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮಿತಿಗಳನ್ನು ರಚಿಸಿ ಅಭ್ಯರ್ಥಿಗಳ ಆಯ್ಕೆಗೆ ಸಿದ್ಧತೆ ನಡೆಸಿದೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲಾ ಪ್ರವಾಸ ಕೈಗೊಂಡು ಅಲ್ಲಲ್ಲಿ ಸಭೆ ಕಾರ್ಯಕರ್ತರ ಜತೆ ಚರ್ಚಿಸಿ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ.

English summary
After the assembly elections, there is another platform for the polls in Uttara Kannada District. Election will be held on October 29 in first phase of eight urban local bodies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X