ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಲ್ಲಾ ಮಟ್ಟದ ಕಚೇರಿಗಳು ಶಿರಸಿಗೆ ಶಿಫ್ಟ್; ಹೋರಾಟದ ಎಚ್ಚರಿಕೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಅಕ್ಟೋಬರ್ 17; " ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರದಲ್ಲಿರುವ ಜಿಲ್ಲಾ ಮಟ್ಟದ ಕಚೇರಿಗಳನ್ನ ಜಿಲ್ಲೆಯ ಘಟ್ಟದ ಮೇಲಿನ ಬೇರೆ ಯಾವುದೇ ತಾಲೂಕಿಗೆ ತೆಗೆದುಕೊಂಡು ಹೋದರೆ ಕಾರವಾರದವರ ಜೊತೆ ಹೋರಾಟ ಮಾಡುವುದು ಅನಿವಾರ್ಯ" ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಯಲ್ಲಾಪುರಕ್ಕೆ ವರ್ಗಾವಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಪ್ರಯತ್ನ ನಡೆಸಿದ್ದಾರೆ ಎನ್ನುವ ವಿಷಯಕ್ಕೆ ಮಾಜಿ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

ಕಾರವಾರ: ಬಾಗಿಲು ಮುಚ್ಚಿದ ಗೋವಾ ಗಡಿಯ ಮದ್ಯದಂಗಡಿಗಳು!ಕಾರವಾರ: ಬಾಗಿಲು ಮುಚ್ಚಿದ ಗೋವಾ ಗಡಿಯ ಮದ್ಯದಂಗಡಿಗಳು!

"ಘಟ್ಟದ ಮೇಲೆ ಯಾವುದೇ ಕಚೇರಿ ತೆಗೆದುಕೊಂಡು ಹೋಗುವುದಕ್ಕೆ ತನ್ನ ಅಭ್ಯಂತವಿಲ್ಲ. ಆದರೆ ಪ್ರತ್ಯೇಕ ಜಿಲ್ಲೆಯನ್ನು ಮಾಡಿಕೊಂಡು ತೆಗೆದುಕೊಂಡು ಹೋಗಲಿ. ಅದನ್ನ ಬಿಟ್ಟು ಕಾರವಾರದಲ್ಲಿರುವ ಕಚೇರಿ ತೆಗೆದುಕೊಂಡು ಹೋಗುವುದು ಖಂಡನೀಯ" ಎಂದು ತಿಳಿಸಿದ್ದಾರೆ.

ಕಾರವಾರ: ನಿರ್ವಹಣೆಯಿಲ್ಲದೆ ಸೊರಗಿದ ರಾಕ್ ಗಾರ್ಡನ್! ಕಾರವಾರ: ನಿರ್ವಹಣೆಯಿಲ್ಲದೆ ಸೊರಗಿದ ರಾಕ್ ಗಾರ್ಡನ್!

District Office Shift From Karwar Protest Warn By Anand Asnotikar

'ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ಸಾಕಷ್ಟು ದೊಡ್ಡದಿದೆ. ಜಿಲ್ಲೆಯನ್ನು ಪ್ರತ್ಯೇಕಿಸಿ ಶಿರಸಿ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವುದು ನನ್ನ ಹಿಂದಿನ ಬೇಡಿಕೆ. ತಾನು ಸಚಿವನಾಗಿದ್ದ ವೇಳೆಯಲ್ಲೂ ಇದನ್ನೇ ಹೇಳಿದ್ದೆ. ಈಗಲೂ ಶಿರಸಿ ಪ್ರತ್ಯೇಕ ಜಿಲ್ಲೆಗೆ ತನ್ನ ಬೆಂಬಲವಿದೆ. ಪ್ರತ್ಯೇಕ ಜಿಲ್ಲೆ ಮಾಡಿದರೆ ಅಲ್ಲಿ ಬೇಕಾದ ಕಚೇರಿ ಮಾಡಿಕೊಳ್ಳಲಿ" ಎಂದು ಹೇಳಿದರು.

 ಕಾರವಾರ- ಅಂಕೋಲಾ ಕ್ಷೇತ್ರ: ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ಧತೆ; ಆನಂದ್ ಅಸ್ನೋಟಿಕರ್ ಕಾರವಾರ- ಅಂಕೋಲಾ ಕ್ಷೇತ್ರ: ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ಧತೆ; ಆನಂದ್ ಅಸ್ನೋಟಿಕರ್

"ಈಗಾಗಲೇ ಜಿಲ್ಲಾ ಕೇಂದ್ರದಲ್ಲಿದ್ದ ಹಲವು ಕಚೇರಿಗಳಲ್ಲಿ ಘಟ್ಟದ ಮೇಲಿನ ತಾಲೂಕಿಗೆ ತೆಗೆದುಕೊಂಡು ಹೋಗಿದ್ದಾರೆ. ಕಾರವಾರ ಸಾಕಷ್ಟು ಬೆಳೆಯುತ್ತಿದ್ದು ಜಿಲ್ಲೆಯಲ್ಲಿ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕರಾವಳಿ ಭಾಗದಲ್ಲಿಯೇ ಹಾದು ಹೋಗಿದೆ. ಮುಂದಿನ ದಿನದಲ್ಲಿ ರಸ್ತೆ ನಿರ್ವಹಣೆ ಸೇರಿದಂತೆ ಹಲವು ಕಾರ್ಯಕ್ಕೆ ಹೆದ್ದಾರಿ ಪ್ರಾಧಿಕಾರ ಕಚೇರಿ ಕಾರವಾರದಲ್ಲೇ ಇರಬೇಕು" ಎಂದರು.

"ಕಚೇರಿಯನ್ನು ಯಲ್ಲಾಪುರಕ್ಕೆ ತೆಗೆದುಕೊಂಡು ಹೋಗುವ ಕಾರ್ಯಕ್ಕೆ ಶಿವರಾಮ್ ಹೆಬ್ಬಾರ್ ಮುಂದಾಗಬಾರದು. ಸಚಿವ ಹೆಬ್ಬಾರ್‌ಗೆ ಅಷ್ಟೋಂದು ಅಗತ್ಯವಿದ್ದರೇ ಪ್ರತ್ಯೇಕ ಜಿಲ್ಲೆ ಮಾಡಿಸಿ ಕಚೇರಿಯನ್ನು ಸ್ಥಳಾಂತರ ಮಾಡಲಿ. ಒಂದೊಮ್ಮೆ ಕಾರವಾರದಲ್ಲಿರುವ ಯಾವುದೇ ಜಿಲ್ಲಾ ಮಟ್ಟದ ಕಚೇರಿಯನ್ನ ಘಟ್ಟದ ಮೇಲಿನ ತಾಲೂಕಿಗೆ ತೆಗೆದುಕೊಂಡು ಹೋಗಲು ಮುಂದಾದರೆ ಮುಂದಿನ ದಿನದಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ" ಎಂದು ಅಸ್ನೋಟಿಕರ್ ಎಚ್ಚರಿಕೆ ನೀಡಿದರು.

ಹಣ, ರಾಜಕೀಯಕ್ಕಿಂತ ತಾಯಿ ಮುಖ್ಯ; "ತನ್ನ ತಾಯಿ ಅನಾರೋಗ್ಯದಲ್ಲಿದ್ದು ಅವರು ಸಂಪೂರ್ಣ ಚೇತರಿಸಿಕೊಳ್ಳುವವರೆಗೆ ರಾಜಕೀಯ ನಿರ್ಣಯ ತೆಗೆದುಕೊಳ್ಳುವುದಿಲ್ಲ" ಎಂದು ಆನಂದ್ ಅಸ್ನೋಟಿಕರ್ ಸ್ಪಷ್ಟಪಡಿಸಿದರು.

"ತಾಯಿ ಅನಾರೋಗ್ಯದಲ್ಲಿದ್ದಾಗ ರಾಜಕೀಯ ಮಾಡೋದು ಸರಿಯಾದುದ್ದಲ್ಲ. ಹಣವನ್ನು ಯಾವಾಗ ಬೇಕಾದರು ಸಂಪಾದಿಸಬಹುದು. ಹಾಗೇ ತನಗೆ ಇನ್ನೂ ಸಾಕಷ್ಟು ವಯಸ್ಸಿದ್ದು ರಾಜಕೀಯವನ್ನು ಸಹ ಯಾವಾಗ ಬೇಕಾದರು ಮಾಡಬಹುದು. ಆದರೆ ತಾಯಿ ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ. ಅವರನ್ನು ಆರೈಕೆ ಮಾಡುವ ಕಾರ್ಯವನ್ನು ಮಾಡುತ್ತಿದ್ದು ಅವರು ಸಂಪೂರ್ಣ ಗುಣಮುಖರಾದ ಮೇಲೆ ರಾಜಕೀಯದ ನಿರ್ಣಯ ತೆಗೆದುಕೊಳ್ಳುತ್ತೇನೆ" ಎಂದರು.

ಪಕ್ಷಾತೀತ ಹೋರಾಟ ಮಾಡಬೇಕು; "ಹಾಲಕ್ಕಿ ಸಮುದಾಯದವರನ್ನು ಪರಿಶಿಷ್ಟ ಪಂಗಡ ಸೇರಿಸಲು ಪಕ್ಷಾತೀತವಾಗಿ ಹೋರಾಟ ಮಾಡುವುದು ಅನಿವಾರ್ಯ. ಇದಕ್ಕೆ ತನ್ನ ಸಂಪೂರ್ಣ ಬೆಂಬಲವಿದೆ" ಎಂದು ಆನಂದ್ ಅಸ್ನೋಟಿಕರ್ ಹೇಳಿದರು.

"ನಾನು ಸಚಿವನಾಗಿದ್ದಾಗ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಅಂದಿನ ಸಿಎಂ ಬಿ. ಎಸ್. ಯಡಿಯೂರಪ್ಪ ಸಹಕಾರದಿಂದ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಗುವಂತೆ ಮಾಡಿದೆ. ನಂತರ ದಿನದಲ್ಲಿ ಹಾಲಕ್ಕಿ ಸಮುದಾಯದ ಮುಖಂಡರು ಆಸಕ್ತಿ ತೋರಿಸದ ಪರಿಣಾಮ ಅಲ್ಲೇ ನಿಂತಿದೆ" ಎಂದರು.

Recommended Video

ಇಂಡೋ-ಪಾಕ್ ಬದ್ಧವೈರಿಗಳ ಮಹಾಸಮರಕ್ಕೆ ಭಾರತೀಯರಿಂದ ವಿರೋಧ | Oneindia Kannada

"ಸದ್ಯ ಶಾಸಕಿ ರೂಪಾಲಿ ನಾಯ್ಕ ಗೃಹ ಸಚಿವ ಅಮಿತ್ ಶಾಗೆ ಮನವಿ ಸಲ್ಲಿಸಿದ್ದು, ಮಾಜಿ ಶಾಸಕ ಸತೀಶ್ ಸೈಲ್ ಬೆಳಗಾವಿಯಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಯಲಿ. ತಾನು ಕೊನೆಯಲ್ಲಿದ್ದರು ಬೆಂಬಲ ಕೊಡುತ್ತೇನೆ. ಹಾಲಕ್ಕಿ ಸಮುದಾಯದವರಿಗೆ ನ್ಯಾಯ ಕೊಡಿಸುವ ಕಾರ್ಯ ಎಲ್ಲ ನಾಯಕರು ಮಾಡಬೇಕು" ಎಂದರು.

English summary
Protest will launch if any district office shift from Karwar to other taluks of the Uttata Kannada district said former minister Anand Asnotikar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X