ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ; ವೈದ್ಯಾಧಿಕಾರಿಗಳು ತರಾಟೆಗೆ

|
Google Oneindia Kannada News

ಕಾರವಾರ, ಜನವರಿ 25: ಕಾರವಾರ ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಕುರಿತು ಶಾಸಕಿ ರೂಪಾಲಿ ನಾಯ್ಕ ಗರಂ ಆಗಿದ್ದು, ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಸೋಮವಾರ ನಡೆದಿದೆ.

ಕಾರವಾರದ ಬಿಣಗಾ ಬಳಿ ಮೀನಿನ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದ. ಈ ವೇಳೆ ಗಾಯಗೊಂಡವರನ್ನು ಕೊಂಡೊಯ್ಯಲು ಕರೆ ಮಾಡಿದರೂ, ಸಮಯಕ್ಕೆ ಸರಿಯಾಗಿ ಅಂಬ್ಯುಲೆನ್ಸ್ ಬಂದಿಲ್ಲ.

Karwar: Disarray In District Hospital: MLA Roopali Naik Outrage Over Doctors

ಹೀಗಾಗಿ ಬದಲಿ ವ್ಯವಸ್ಥೆ ಮಾಡಿಕೊಂಡು ಜಿಲ್ಲಾಸ್ಪತ್ರೆಗೆ ಗಾಯಾಳುವನ್ನು ಕೊಂಡೊಯ್ಯಲಾಗಿದೆ. ಆದರೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರೂ ಇಲ್ಲದೆ, ಆಕ್ಸಿಜನ್ ವ್ಯವಸ್ಥೆ ಕೂಡ ಇರದ ಕಾರಣ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ವಹಿಸಿದ್ದಾರೆನ್ನಲಾಗಿದ್ದು, ಬೇರೆಡೆಗೆ ಕೊಂಡೊಯ್ಯಲು ತಿಳಿಸಿದ್ದಾರೆ.

Karwar: Disarray In District Hospital: MLA Roopali Naik Outrage Over Doctors

Recommended Video

ನಗರದ 8 ವಾರ್ಡ್ ಗಳಲ್ಲಿ ಶೂನ್ಯ ಕೊರೊನಾ ಕೇಸ್ ದಾಖಲು | Oneindia Kannada

ಈ ಬಗ್ಗೆ ಮಾಹಿತಿ ಪಡೆದು ಏಕಾಏಕಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕಿ ರೂಪಾಲಿ ನಾಯ್ಕ್, ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಕ್ಕಾಗಿ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಆದರೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಆಕ್ಸಿಜನ್, ಅಂಬುಲೆನ್ಸ್, ವೈದ್ಯರು ಸೇರಿದಂತೆ ಯಾವುದೇ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ನೀವು ಮಾಡುತ್ತಿರುವ ಕೆಲಸವಾದರೂ ಏನು ಎಂದು ಶಾಸಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
MLA Rupali Naik has expressed outrage over doctors about the disarray in the Karwar district Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X