ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈಗಾ ಸುತ್ತಮುತ್ತ ಕ್ಯಾನ್ಸರ್ : ಮಾಧ್ಯಮಗಳ ವರದಿಯಲ್ಲಿ ಹುರುಳಿಲ್ಲವೆಂದ ಜಿಲ್ಲಾಧಿಕಾರಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್.24: ಕೈಗಾ ಸುತ್ತಮುತ್ತ ಕ್ಯಾನ್ಸರ್ ಹೆಚ್ಚಾಗುತ್ತಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಇತ್ತೀಚೆಗೆ ಸುದ್ದಿ ಬಿತ್ತರಿಸಲಾಗಿತ್ತು. ಇದರಿಂದ ಕೈಗಾದ ಸುತ್ತಲಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.

ಈ ಹಿನ್ನಲೆಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಶೇ. 200ರಷ್ಟು ಕ್ಯಾನ್ಸರ್ ಪ್ರಕರಣಗಳು ಕೈಗಾ ಸುತ್ತಮುತ್ತ ಹೆಚ್ಚಾಗಿವೆ ಎಂಬ ಮಾಧ್ಯಮಗಳ ವರದಿಯಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸತತ 766 ದಿನ ವಿದ್ಯುತ್ ಉತ್ಪಾದಿಸಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಕೈಗಾ ಸತತ 766 ದಿನ ವಿದ್ಯುತ್ ಉತ್ಪಾದಿಸಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಕೈಗಾ

ಮುಂಬೈನ ಟಾಟಾ ಮೆಮೋರಿಯಲ್ ಸಂಸ್ಥೆ ಸಿದ್ಧಪಡಿಸಿರುವ 'ಕಾರವಾರ ಕ್ಯಾನ್ಸರ್ ರಿಜಿಸ್ಟ್ರಿ 2010-13'ರ ವರದಿಯನ್ನು ತಪ್ಪಾಗಿ ಗ್ರಹಿಸಿ ವರದಿ ಮಾಡಿದ್ದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ.

Deputy Commissioner said there is no truth in media report

ಟಾಟಾ ಮೆಮೊರಿಯಲ್ ಸಂಸ್ಥೆಯ ಮುಖ್ಯಸ್ಥ ಡಾ.ಗಣೇಶ್ ಬಿ. ಅವರು ತಮ್ಮ ಸಂಸ್ಥೆಯ ಅಧ್ಯಯನ ವರದಿಯಲ್ಲಿ ಎಲ್ಲಿಯೂ ಶೇ 200ರಷ್ಟು ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿವೆ ಎಂದಾಗಲಿ, ಅಥವಾ ಕೈಗಾ ಸುತ್ತಮುತ್ತ ಗ್ರಾಮಗಳಲ್ಲೇ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿವೆ ಎಂದಾಗಲಿ ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟಾಟಾ ಮೆಮೊರಿಯಲ್ ಸೆಂಟರ್ 2010ರಿಂದ 2013ರವರೆಗೆ ಮೊದಲ ಹಂತದಲ್ಲಿ ಕಾರವಾರ ತಾಲೂಕಿನಲ್ಲಿ ಕ್ಯಾನ್ಸರ್ ಪ್ರಕರಣಗಳ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿತ್ತು.

Deputy Commissioner said there is no truth in media report

ಇದು ಕ್ಯಾನ್ಸರ್ ಪ್ರಕರಣ ಪತ್ತೆಯಾದ ಆಸ್ಪತ್ರೆ ಮತ್ತು ರೋಗದ ಲಕ್ಷಣ ಇರುವ ರೋಗಿಗಳ ಆಯ್ದ ಪ್ರಕರಣಗಳಿಂದ ಸಂಗ್ರಹಿಸಿದ ಪ್ರಾಥಮಿಕ ಹಂತದ ಮಾಹಿತಿಯಾಗಿರುತ್ತದೆ. ಈ ಅಧ್ಯಯನ ವರದಿಯಲ್ಲಿ 316 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಇದೇ ಸಂಸ್ಥೆ ಎರಡನೇ ಹಂತದಲ್ಲಿ ಅಂಕೋಲಾ, ಯಲ್ಲಾಪುರ, ಜೊಯಿಡಾ ಹಾಗೂ ಕಾರವಾರ ತಾಲೂಕಿನಲ್ಲಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದು, ಆ ವರದಿ ನಂತರವೇ ಈ ಹಿಂದಿಗಿಂತ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿವೆಯೇ ಅಥವಾ ಕಡಿಮೆಯಾಗಿವೆ ಅಥವಾ ಯಾವ ಕಾರಣಕ್ಕೆ ಕ್ಯಾನ್ಸರ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಎಂಬ ಅಧ್ಯಯನ ವರದಿ ನೀಡಲಿದೆ.

Deputy Commissioner said there is no truth in media report

ಅಲ್ಲದೆ ಕೈಗಾದಿಂದ ಹೊರ ಸೂಸುವ ವಿಕಿರಣಗಳಿಂದಾಗಿ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುವ ಬಗ್ಗೆಯೂ ಅಧ್ಯಯನ ವರದಿ ಹೇಳಿಲ್ಲ. ಈ ಸಂಬಂಧ ವರದಿಯೇ ಹೇಳಿರುವಂತೆ ವಿವಿಧ ರಾಜ್ಯ ಮತ್ತು ದೇಶಗಳಲ್ಲಿ ಕ್ಯಾನ್ಸರ್ ಪ್ರಕರಣ ಪ್ರಮಾಣವನ್ನು ಹೋಲಿಸಿದಾಗ ಕಾರವಾರ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಅತ್ಯಂತ ಕಡಿಮೆ ಪ್ರಕರಣಗಳು ಇಲ್ಲಿವೆ ಎಂಬುದು ಸ್ಪಷ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟಾಟಾ ಮೆಮೋರಿಯಲ್ ಸೆಂಟರ್ ವೈದ್ಯಕೀಯ ಪ್ರತಿನಿಧಿ ಡಾ.ಚೇತನ ಮತ್ತಿತರರು ಇದ್ದರು.

English summary
Recently reported in some media cancer is growing in Kaiga. But Uttara Kannada Deputy Commissioner said there is no truth in that report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X