ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ಸ್ಯಬೇಟೆ ಮೇಲೆ ಕಣ್ಣು; ಬೇಟೆಗೆ ಕಾನೂನಾತ್ಮಕ ಗಾತ್ರ ನಿಗದಿ

|
Google Oneindia Kannada News

ಕಾರವಾರ, ಡಿಸೆಂಬರ್ 14: ಕಾರವಾರದಲ್ಲಿ ಕೆಲ ಮತ್ಸ್ಯ ಸಂತತಿಯನ್ನು ಉಳಿಸುವ ಉದ್ದೇಶದಿಂದ ಇದೀಗ ಮತ್ಸ್ಯಬೇಟೆ ಮೇಲೂ ಕಣ್ಣಿಡಲಾಗಿದೆ. ಮತ್ಸ್ಯ ಬೇಟೆಗಾಗಿ ಕಾನೂನಾತ್ಮಕ ಗಾತ್ರವನ್ನು ನಿಗದಿಪಡಿಸಲಾಗಿದೆ.

ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯು (ಸಿಎಮ್ ‌ಎಫ್‌ಆರ್‌ಐ) ರಾಜ್ಯದ ಕರಾವಳಿಯಲ್ಲಿ ಹೆಚ್ಚಾಗಿ ಸಿಗುವ 19 ಜಾತಿಯ ಮೀನುಗಳನ್ನು ಗುರುತಿಸಿ, ಅವುಗಳ ಬೇಟೆಗೆ ನಿಗದಿಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ಕನಿಷ್ಠ ಕಾನೂನಾತ್ಮಕ ಬೇಟೆಯ ಸಾಮಗ್ರಿ (ಜಾಲರಿ) ಗಾತ್ರವನ್ನು ಪಶುಸಂಗೋಪನೆ ಹಾಗೂ ಮೀನುಗಾರಿಕಾ ಇಲಾಖೆಯು ಜಾರಿಗೊಳಿಸಿದೆ.

 ಮರು ಜಾರಿಯಾಯ್ತು ಮೀನುಗಾರರಿಗೆ ಹೆಚ್ಚುವರಿ ಪರಿಹಾರಧನ ನೀಡುವ ಆದೇಶ ಮರು ಜಾರಿಯಾಯ್ತು ಮೀನುಗಾರರಿಗೆ ಹೆಚ್ಚುವರಿ ಪರಿಹಾರಧನ ನೀಡುವ ಆದೇಶ

ಪ್ರಸ್ತುತ, ಮೀನು ಹಿಡಿಯಲು ಟ್ರಾಲರ್ ಬೋಟುಗಳು 35 ಮಿ.ಮೀ. ಗಾತ್ರದ ಜಾಲರಿಯನ್ನು (ಮೆಶ್) ಬಳಸುತ್ತವೆ. ಪರ್ಸಿನ್ ದೋಣಿಗಳಲ್ಲಿ ಈ ಜಾಲರಿಗಳ ಗಾತ್ರ 20 ಮಿ.ಮೀ. ಇರುತ್ತದೆ. ಆದರೆ, ಕೆಲವು 'ಹಪಾಹಪಿ ಮತ್ಸೋದ್ಯಮಿ'ಗಳು, 20 ಮಿ.ಮೀ.ಗಿಂತಲೂ ಕಡಿಮೆ ಗಾತ್ರದ ಜಾಲರಿಯನ್ನು ಬಳಸಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಮರಿ ಮೀನುಗಳು ಕೂಡ ಬಲೆಯಲ್ಲಿ ಬೀಳುತ್ತಿದ್ದು, ಇದು ಮತ್ಸ್ಯ ಸಂಕುಲ ನಾಶಕ್ಕೆ ಕಾರಣವಾಗಿದೆ. ಈ ರೀತಿ ಸಣ್ಣ ಗಾತ್ರದ ಮೀನುಗಳನ್ನು ಹಿಡಿಯುವುದರಿಂದ ಭವಿಷ್ಯದಲ್ಲಿ ಮೀನುಗಳ ಸಂತತಿ ನಾಶವಾಗುವ ಬಗ್ಗೆ ಅರಿತು, ಈ ನಿಯಮವನ್ನು ಜಾರಿಗೆ ತರಲಾಗಿದೆ.

Department of Animal Husbandry and Fisheries Enforced Legal Size For Fish Hunting

ಹೆಚ್ಚು ಬೇಡಿಕೆಯುಳ್ಳ ಪಾಂಫ್ರೆಟ್, ನುಚ್ಕೆ, ಟ್ಯೂನ ಸೇರಿದಂತೆ ಇನ್ನು ಕೆಲವು ಜಾತಿಯ ಮೀನುಗಳನ್ನು ಬೇಟೆಯಾಡಲು ಜಾಲರಿಗೆ ನಿರ್ದಿಷ್ಟ ಗಾತ್ರವನ್ನು ನಿಗದಿಗೊಳಿಸಲಾಗಿದೆ. ಭವಿಷ್ಯದಲ್ಲಿ ಮತ್ಸ್ಯಕ್ಷಾಮ ಎದುರಾಗಬಾರದು, ಮೀನಿನ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚಾಗಬೇಕು ಎಂಬ ದೃಷ್ಟಿಯಿಂದ ಈ ನಿಯಮ ಜಾರಿಗೊಳಿಸಲಾಗಿದೆ. ಕರ್ನಾಟಕ ಸಾಗರ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ 1986 ಸೆಕ್ಷನ್ 3, ಅನುಚ್ಛೇದ 2ರ ಅಡಿಯಲ್ಲಿ ಈ ಆದೇಶವನ್ನು ಅಂಗೀಕರಿಸಲಾಗಿದೆ.

 'ಚೌರಿ’ ಹಾಕಿ ಕಪ್ಪೆ ಬೊಂಡಾಸ್ ಅವ್ಯಾಹತ ಬೇಟೆ; ಮಾಯವಾಗುತ್ತಿದೆ ಕಡಲ ತೀರ 'ಚೌರಿ’ ಹಾಕಿ ಕಪ್ಪೆ ಬೊಂಡಾಸ್ ಅವ್ಯಾಹತ ಬೇಟೆ; ಮಾಯವಾಗುತ್ತಿದೆ ಕಡಲ ತೀರ

ಈ ಆದೇಶವನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲು ಮೀನುಗಾರಿಕಾ ಇಲಾಖೆಗೆ ಸೂಚಿಸಲಾಗಿದ್ದರೂ ಯಾವುದೇ ದಂಡ ವಿಧಿಸುವ ಬಗ್ಗೆ ನಿಖರವಾಗಿ ತಿಳಿಸಿಲ್ಲ. ಈ ಒಂದು ಕ್ರಮ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

English summary
Department of Animal Husbandry and Fisheries in karwar enforced the Legal Size For Fish Hunting which was set by Central Marine Fisheries Research Institute,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X