• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರವಾರ-ಬೆಂಗಳೂರು ರೈಲಿಗೆ ಚೆನ್ನಭೈರಾದೇವಿ ಹೆಸರು ಇಡಲು ಆಗ್ರಹ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 04; ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮನವಿಯ ಮೇರೆಗೆ ಬೆಂಗಳೂರು- ಕಾರವಾರ ರೈಲಿಗೆ 'ಪಂಚಗಂಗಾ ಎಕ್ಸ್‌ಪ್ರೆಸ್' ಎಂದು ನಾಮಕರಣ ಮಾಡಿ ಕೇಂದ್ರ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ. ಆದರೆ ಈ ಹೆಸರಿಗೆ ಉತ್ತರಕನ್ನಡದ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಸರನ್ನು ಮರು ಪರಿಶೀಲಿಸಲು ಆಗ್ರಹಿಸಿದ್ದಾರೆ.

ಕರಾವಳಿಯ ಜೀವನಾಡಿಯಾದ ಕಾರವಾರ-ಬೆಂಗಳೂರು ವಯಾ ಪಡೀಲ್ ಬೈಪಾಸ್ ಸೂಪರ್‌ಫಾಸ್ಟ್ ರೈಲಿಗೆ ಉಡುಪಿ ಜಿಲ್ಲೆಯ 5 ಪ್ರಮುಖ ಪುಣ್ಯ ನದಿಗಳು ಸಂಗಮಿಸಿ ಸೃಷ್ಟಿಯಾಗುವ ಪ್ರಾಕೃತಿಕ ಅಚ್ಚರಿ ಪಂಚಗಂಗಾವಳಿ ನದಿಯ ಹೆಸರಿನಿಂದ ಆಯ್ದ 'ಪಂಚಗಂಗಾ ಎಕ್ಸ್‌ಪ್ರೆಸ್' ಎಂಬ ಹೆಸರನ್ನು ಇಡಲಾಗಿದೆ.

ಕಾರವಾರ- ಬೆಂಗಳೂರು ಸೂಪರ್‌ಫಾಸ್ಟ್ ರೈಲು ಇನ್ನು ಪಂಚಗಂಗಾ ಎಕ್ಸ್‌ಪ್ರೆಸ್ಕಾರವಾರ- ಬೆಂಗಳೂರು ಸೂಪರ್‌ಫಾಸ್ಟ್ ರೈಲು ಇನ್ನು ಪಂಚಗಂಗಾ ಎಕ್ಸ್‌ಪ್ರೆಸ್

ಕರಾವಳಿಯ ಬಹುಮುಖ್ಯ ಪುಣ್ಯ ಕ್ಷೇತ್ರಗಳ ಮೂಲಕ ಹರಿಯುವ ಪಂಚಗಂಗಾ, ಜಿಲ್ಲೆಯ ತೀರ್ಥ ಕ್ಷೇತ್ರ, ಪ್ರವಾಸೋದ್ಯಮ, ಮೀನುಗಾರಿಕೆ, ಕೃಷಿ ಹಾಗು ಜನಜೀವನಕ್ಕೆ ಅಧಾರವಾಗಿದ್ದು, ಈ ಕಾರಣದಿಂದ ನೂತನ ಬೆಂಗಳೂರು- ಕಾರವಾರ ರೈಲಿಗೆ 'ಪಂಚಗಂಗಾ' ಎನ್ನುವ ಹೆಸರಿಡಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿಯವರಿಗೆ ಮನವಿ ಸಲ್ಲಿಸಲಾಗಿತ್ತು.

ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಶುಭ ಸುದ್ದಿ, ರೈಲು ಸೇವೆ ಪುನರಾರಂಭ ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಶುಭ ಸುದ್ದಿ, ರೈಲು ಸೇವೆ ಪುನರಾರಂಭ

ಅಸಮಾಧಾನ ಯಾಕೆ?; ಈ ರೈಲು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹೊರಟು ಜಿಲ್ಲೆಯ ಕಾರವಾರಕ್ಕೆ ತಲುಪುತ್ತದೆ. ಆದರೆ ಈಗ ಇಡಲು ನಿರ್ಧರಿಸಿರುವ ಹೆಸರು ಮಾರ್ಗಮಧ್ಯದ ಉಡುಪಿ ಜಿಲ್ಲೆಯಲ್ಲಿ ಹರಿಯುವ ಐದು ನದಿಗಳ ಸಂಗಮದಲ್ಲಿ ಹುಟ್ಟುವ ನದಿಯದ್ದಾಗಿದೆ.

ಹೊಸಪೇಟೆಯಿಂದ ಹಂಪಿ ಎಕ್ಸ್‌ಪ್ರೆಸ್ ಈಗ ಎಲೆಕ್ಟ್ರಿಕಲ್ ರೈಲುಹೊಸಪೇಟೆಯಿಂದ ಹಂಪಿ ಎಕ್ಸ್‌ಪ್ರೆಸ್ ಈಗ ಎಲೆಕ್ಟ್ರಿಕಲ್ ರೈಲು

ನದಿಯ ಹೆಸರೇ ಇಡಬೇಕೆಂದರೆ ಉತ್ತರಕನ್ನಡದ ಕರಾವಳಿಯ ರೈಲು ಓಡಾಡುವ ಮಾರ್ಗದಲ್ಲಿನ ಶರಾವತಿ, ಅಘನಾಶಿನಿ ನದಿಗಳಿವೆ. ಕಾರವಾರದಲ್ಲಿ ಕಾಳಿ, ಮಂಗಳೂರಿನ ನೇತ್ರಾವತಿ ಇದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈಗಿನ ಯುವಜನರಿಗೆ ಇತಿಹಾಸದ ಪರಿಚಯ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ, ಕರಿಮೆಣಸಿನ ರಾಣಿ ಚೆನ್ನಭೈರಾದೇವಿ ಹೆಸರನ್ನೂ ಇಡಬಹುದಾಗಿದೆ ಎಂದು ಸೂಚಿಸಿದ್ದಾರೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು, ಮುಖಂಡರುಗಳು ಇಚ್ಛಾಶಕ್ತಿ ತೋರಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಕಾರವಾರ-ಬೆಂಗಳೂರು ರೈಲಿಗೆ ಇಟ್ಟಿರುವ ಪಂಚಗಂಗಾ ಹೆಸರನ್ನು ಮರುಪರಿಶೀಲಿಸುವ ಅಗತ್ಯ ಇದೆ. ಈ ರೈಲು ಆರಂಭಿಸುವಲ್ಲಿ ಉಡುಪಿ ಜಿಲ್ಲೆಯವರ ಪ್ರಯತ್ನವೂ ಪ್ರಶಂಸನೀಯ. ಆದರೆ ಉತ್ತರಕನ್ನಡದ ನಾಯಕರುಗಳ ಇಚ್ಛಾಶಕ್ತಿಯ ವೈಫಲ್ಯ ಈ ಪರಿಸ್ಥಿತಿಗೆ ಕಾರಣವಾಗಿದೆ.

ಇದನ್ನು ರಾಣಿ ಚನ್ನಭೈರಾದೇವಿ ಮತ್ತು ಕಣ್ಣೂರು ರೈಲನ್ನು ರಾಣಿ ಅಬ್ಬಕ್ಕ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಬೇಕು. ಇತಿಹಾಸದ ದೃಷ್ಟಿಯಿಂದ ಈ ಮಹಾರಾಣಿಯರ ಯಶೋಗಾಥೆಯನ್ನು ಗುರುತಿಸುವ ಅಗತ್ಯವೂ ಇದೆ ಎನ್ನುತ್ತಾರೆ ಹೊನ್ನಾವರದ ರಾಜೇಶ್ ಶೇಟ್ ಗುಂಡಬಾಳ.

English summary
Demand to rename Bengaluru-Karwar express train as Chennabhairadevi express. Train named as Panchaganga express.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X