• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾರವಾರಕ್ಕೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್ 24; ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆಯಾಗಿರುವ ಕಾರವಾರದ ಐಎನ್‌ಎಸ್ ಕದಂಬಕ್ಕೆ ಗುರುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡುತ್ತಿದ್ದಾರೆ. ಮಧ್ಯಾಹ್ನ ಗೋವಾದಿಂದ ಹೆಲಿಕಾಪ್ಟರ್ ಮೂಲಕ ಅವರು ನೌಕಾನೆಲೆಗೆ ಬಂದಿಳಿಯಲಿದ್ದಾರೆ.

ಕದಂಬ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಾಮಗಾರಿಗಳ ವೀಕ್ಷಣೆಗೆ ರಾಜನಾಥ್ ಸಿಂಗ್ ಆಗಮಿಸುತ್ತಿದ್ದಾರೆ. ಇದೇ ವೇಳೆ ನೌಕಾನೆಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಜಟ್ಟಿಯೊಂದನ್ನು ಉದ್ಘಾಟಿಸಲಿದ್ದಾರೆ.

 ಬೃಹತ್ ನೌಕಾಪಡೆ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ಬೃಹತ್ ನೌಕಾಪಡೆ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ

ಮಧ್ಯಾಹ್ನ ದೆಹಲಿಯಿಂದ ಗೋವಾಕ್ಕೆ ರಾಜನಾಥ್ ಸಿಂಗ್ ಆಗಮಿಸಲಿದ್ದು, ಅಲ್ಲಿಂದ 1.30ಕ್ಕೆ ಹೆಲಿಕಾಪ್ಟರ್ ಮೂಲಕ ನೌಕಾನೆಲೆಗೆ ಆಗಮಿಸಲಿದ್ದಾರೆ. ಮೊದಲು ಜಟ್ಟಿ ಕಾಮಗಾರಿಯ ಉದ್ಘಾಟನೆ ನಡೆಸಿ ನಂತರ ಎರಡನೇ ಹಂತದ ವಿಸ್ತರಣೆ ಕಾಮಗಾರಿಗಳನ್ನ ವೀಕ್ಷಿಸಿ, ಅಧಿಕಾರಿಗಳ ಜೊತೆ ಈ ಸಂಬಂಧ ಚರ್ಚೆ ನಡೆಸಲಿದ್ದಾರೆ.

ಕೋವಿಡ್: ಕಾರವಾರ ನೌಕಾನೆಲೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ ಕೋವಿಡ್: ಕಾರವಾರ ನೌಕಾನೆಲೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ

ರಕ್ಷಣಾ ಸಚಿವರಾದ ನಂತರ ಈ ಹಿಂದೆ ಒಮ್ಮೆ ನೌಕಾನೆಲೆಗೆ ರಾಜನಾಥ್ ಸಿಂಗ್ ಭೇಟಿ ನೀಡಿದ್ದರು. ಗೋವಾದಿಂದ ನೇರವಾಗಿ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯ ಮೇಲೆ ಇಳಿದು ಅಲ್ಲಿಯೇ ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಿದ್ದರು.

 ನೌಕಾನೆಲೆ ನೋಡಲು ಬಂದರು ಸಾವಿರಾರು ಜನರು ನೌಕಾನೆಲೆ ನೋಡಲು ಬಂದರು ಸಾವಿರಾರು ಜನರು

ಬಿಗಿ ಬಂದೋಬಸ್ತ್; ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮನದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ನೌಕಾನೆಲೆಯ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಿದೆ.

ರಾಜನಾಥ್ ಸಿಂಗ್ ಗೋವಾಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಕಾರವಾರಕ್ಕೆ ಆಗಮಿಸಲಿದ್ದಾರೆ. ಆದರೆ ಒಂದುವೇಳೆ ಹವಾಮಾನ ವೈಪರೀತ್ಯ ಉಂಟಾಗಿ ರಸ್ತೆ ಮಾರ್ಗವಾಗಿ ಬಂದರೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಬುಧವಾರ ಸಂಜೆ ವೇಳೆ ಬಂದೋಬಸ್ತ್ ಕುರಿತು ಅಣಕು ಪ್ರದರ್ಶನವನ್ನು ಕೂಡ ಜಿಲ್ಲಾ ಪೊಲೀಸರು ನಡೆಸಿದ್ದಾರೆ.

ರಸ್ತೆ ಮಾರ್ಗದಲ್ಲಿ ಸಚಿವರು ಬಂದರೆ ಭದ್ರತೆ ಹಾಗೂ ಬೆಂಗಾವಲು ನೀಡುವ ಬಗ್ಗೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಸಚಿವರು ಬಂದು ಹೋಗುವವರೆಗೂ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತನ್ನು ಮಾಡಿಕೊಂಡಿದ್ದಾರೆ.

   ನಮಗೆ ವಿಷ ಕೊಡಿ ಎಂದು ಭಾರತದ ಬಳಿ ಮನವಿ ಮಾಡಿದ Australia | Oneindia Kannada

   English summary
   Defence Minister of India Rrajnath Singh will be visiting Karwar on June 24. He will review the ongoing infrastructure development at Karwar through project seabird.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X