• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ; ಕಾರವಾರದಲ್ಲಿ ಯೋಗ ಮಾಡಿದ ರಾಜನಾಥ್ ಸಿಂಗ್

|
Google Oneindia Kannada News

ಕಾರವಾರ, ಮೇ 27; ಎರಡು ದಿನಗಳ ಕಾರವಾರ ಪ್ರವಾಸದಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಗಾಭ್ಯಾಸ ಮಾಡಿದರು. ಗುರುವಾರ ಕಾರವಾರ ನೌಕಾನೆಲೆಗೆ ಆಗಮಿಸಿದ ಸಚಿವರಿಗೆ ಆತ್ಮೀಯ ಸ್ವಾಗತ ಕೋರಲಾಯಿತು.

ಶುಕ್ರವಾರ ಮುಂಜಾನೆ ಕಾರವಾರದ ನೌಕಾನೆಲೆ ಸಿಬ್ಬಂದಿಯ ಜೊತೆ ರಾಜನಾಥ್ ಸಿಂಗ್ ಯೋಗ ಮಾಡಿದರು. ಜೂನ್‌ನಲ್ಲಿ ನಡೆಯುವ ವಿಶ್ವಯೋಗ ದಿನಾಚರಣೆ ಭಾಗವಾಗಿ ಈ ಯೋಗ ತಾಲೀಮು ನಡೆಯಿತು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಹಿನ್ನಲೆಯಲ್ಲಿ ಕಾರವಾರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಗುರುವಾರ ನೌಕಾನೆಲೆಗೆ ಆಗಮಿಸಿದ್ದ ಸಚಿವರು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಶುಕ್ರವಾರ ಬೆಳಗ್ಗೆ ಯೋಗಾಭ್ಯಾಸ ಕೈಗೊಂಡರು.

ಕಾರವಾರ: ಬೈತಖೋಲ್‌ನಲ್ಲಿ ನೌಕಾನೆಲೆಯಿಂದ ರಸ್ತೆ, ಗೋಡೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧಕಾರವಾರ: ಬೈತಖೋಲ್‌ನಲ್ಲಿ ನೌಕಾನೆಲೆಯಿಂದ ರಸ್ತೆ, ಗೋಡೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕದಂಬ ನೌಕಾನೆಲೆಯಲ್ಲಿ ಅಧಿಕಾರಿಗಳು ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿದರು. ರಕ್ಷಣಾ ಸಚಿವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಕುಟುಂಬದವರು ಸಂಭ್ರಮಿಸಿದರು.

ಕದಂಬ ನೌಕಾನೆಲೆ ಸಿಬ್ಬಂದಿ ಜೊತೆ ರಕ್ಷಣಾ ಸಚಿವ ರಾಜನಾಥ್ ಆತ್ಮೀಯ ಮಾತುಕತೆಕದಂಬ ನೌಕಾನೆಲೆ ಸಿಬ್ಬಂದಿ ಜೊತೆ ರಕ್ಷಣಾ ಸಚಿವ ರಾಜನಾಥ್ ಆತ್ಮೀಯ ಮಾತುಕತೆ

ರಾಜನಾಥ್ ಸಿಂಗ್ ನೌಕಾನೆಲೆಯ 2ನೇ ಹಂತದ ವಿಸ್ತರಣೆ ಕಾರ್ಯವನ್ನು ಸಹ ವೀಕ್ಷಣೆ ಮಾಡಿದ್ದರು. ನೌಕಾಪಡೆಯ ಅಧಿಕಾರಿಗಳ ಜೊತೆ ಸಂವಾದವನ್ನು ನಡೆಸಿದ್ದರು. ಭಾರತೀಯ ನೌಕಾಪಡೆ ವಿಶ್ವದಲ್ಲಿಯೇ ಅತ್ಯುತ್ತಮ ನೌಕಾಪಡೆಯಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಚಿವ ರಾಜನಾಥ್ ಸಿಂಗ್ ಇತ್ತೀಚಿನ ಅಮೆರಿಕ ಭೇಟಿಯ ವೇಳೆ ಅಮೆರಿಕ ನೌಕಾಪಡೆ ಮುಖ್ಯಸ್ಥರ ಜೊತೆ ನಡೆದ ಮಾತುಕತೆಯ ಅಂಶಗಳನ್ನು ನೌಕಾಪಡೆ ಸಿಬ್ಬಂದಿ ಜೊತೆ ಹಂಚಿಕೊಂಡರು. ನಮ್ಮ ಪಡೆಗಳ ಮೇಲೆ ಅವರು ಇಟ್ಟಿರುವ ಗೌರವದ ಕುರಿತು ಮಾತನಾಡಿದರು.

ಶುಕ್ರವಾರವೂ ರಾಜನಾಥ್ ಸಿಂಗ್ ಕಾರವಾರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನೌಕಾಪಡೆಯ ಹಿರಿಯ ಅಧಿಕಾರಿಗಳು ಅವರ ಜೊತೆ ಇರಲಿದ್ದಾರೆ.

English summary
Defence minister Rajnath Singh in Karwar, Uttara Kannada district on two-day visit. He participate in a yoga session with Indian Navy personnel on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X