ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಸದೃಢ ಹಾಗೂ ಪ್ರಗತಿಪರ ಸರ್ಕಾರ: ಡಿಸಿಎಂ ಅಶ್ವತ್ಥ ನಾರಾಯಣ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಫೆಬ್ರವರಿ 12: ರಾಜ್ಯದಲ್ಲಿ ಸದೃಢ ಹಾಗೂ ಪ್ರಗತಿಪರ ಆಡಳಿತವನ್ನು ನೀಡುವ ಕಾರ್ಯ ಬಿಜೆಪಿ ಸರ್ಕಾರ ಮಾಡಲಿದೆ. ಮುಂದಿನ 3 ವರ್ಷ, ಮೂರು ತಿಂಗಳು ಯಾವುದೇ ಅಡ್ಡಿ ಇಲ್ಲದೇ ಸರ್ಕಾರ ಸೂಸುತ್ರವಾಗಿ ಮುನ್ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ಹೊನ್ನಾವರ ತಾಲೂಕಿನ ಕೆಳಗಿನೂರು ಒಕ್ಕಲಿಗ ಸಭಾಭವನ ಉದ್ಘಾಟನೆ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರ, ಪ್ರತಿ ಜಿಲ್ಲೆಗೆ ಆಯಾ ಜಿಲ್ಲೆಯವರೇ ಉಸ್ತುವಾರಿ ಸಚಿವರ ನೇಮಕವಾಗಲಿದೆ. ಈಗಾಗಲೇ ಸಚಿವ ಸಂಪುಟ ವಿಸ್ತರಣೆಯಾಗಿದ್ದು ಕೆಲ ಖಾತೆ ಹಂಚಿಕೆಯಲ್ಲಿ ಅಸಮಧಾನವಿದೆ ಎಂದರು.

ಅಗ್ಗದ ಪ್ರಚಾರಕ್ಕೆ ಅನಂತಕುಮಾರ್ ಹೆಗಡೆ ಹೇಳಿಕೆ; ದೇಶಪಾಂಡೆಅಗ್ಗದ ಪ್ರಚಾರಕ್ಕೆ ಅನಂತಕುಮಾರ್ ಹೆಗಡೆ ಹೇಳಿಕೆ; ದೇಶಪಾಂಡೆ

ಆದರೆ ಅದನ್ನು ಚರ್ಚಿಸಿ ಖಾತೆ ಬದಲಾವಣೆ ಅಥವಾ ಪುನರ್ ರಚನೆ ಮಾಡುವ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಬಿಜೆಪಿ ಸರ್ಕಾರ ರಚನೆಯಾದ ನಂತರವೂ ಖಾತೆ ಸರ್ಕಸ್ ಮುಂದುವರೆದಿದೆ ಎನ್ನುವ ವಿರೋಧ ಪಕ್ಷದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು.

DCM Ashwath Narayana Said Strong And Progressive Government In The State

2018 ರ ವಿಧಾನ ಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಕಾರಣ ಮೈತ್ರಿ ಸರ್ಕಾರ ರಚನೆಯಾಯಿತು. ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯಲ್ಲಿ ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತೆನೋ ಗೊತ್ತಿಲ್ಲ. ಅವರ ಕೃಪೆ, ಇವರ ಕೃಪೆ ಅಂತ ಹೇಳಿ ಅವರು ಅಧಿಕಾರ ನಡೆಸಿದರೇ ಹೊರತು ಜನಪರ ಆಡಳಿತ ನಡೆಸಲು ವಿಫಲವಾದರು ಎಂದು ಟೀಕಿಸಿದರು.

 ಅನಂತಕುಮಾರ್ ವಿವಾದಾತ್ಮಕ ಹೇಳಿಕೆಯೇ ಸರಿ ಎಂದ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಅನಂತಕುಮಾರ್ ವಿವಾದಾತ್ಮಕ ಹೇಳಿಕೆಯೇ ಸರಿ ಎಂದ ಜಿಲ್ಲಾ ಬಿಜೆಪಿ ಕಾರ್ಯಕರ್ತರು

ಇದರ ಪರಿಣಾಮದಿಂದಾಗಿ ಆ ಪಕ್ಷದಿಂದ ರಾಜೀನಾಮೆ ಹಲವು ಶಾಸಕರು ನೀಡಿ ಬಂದರು. ನಮ್ಮ ಮುಂದಿರುವ ಗುರಿ ಜನಪರ ಆಡಳಿತ ನೀಡುವುದು, ಒಂದೇ ಆಗಿದೆ ಅದನ್ನು ನಾವು ನೀಡಲಿದ್ದೇವೆ ಎಂಬ ಭರವಸೆ ಇದೆ ಎಂದರು.

ದೆಹಲಿ ಫಲಿತಾಂಶ ಬಿಜೆಪಿ ಹಿನ್ನಡೆಯಲ್ಲವೇ ಎಂದು ಪ್ರಶ್ನಿಸಿದಾಗ, ಒಂದು ರಾಜ್ಯದ ಫಲಿತಾಂಶ ಪಕ್ಷಕ್ಕೆ ಹಿನ್ನಡೆಯಲ್ಲ, ಕಳೆದ ಬಾರಿಗಿಂತ ನಾವು ಹೆಚ್ಚು ಸ್ಥಾನ ಗೆಲುವು ಸಾಧಿಸಿದ್ದೇವೆ. ಅಲ್ಲದೇ ಬೆಂಗಳೂರಿನ ಮಹಾನಗರ ಪಾಲಿಕೆಯಷ್ಟು ಚಿಕ್ಕದಾದ ಒಂದು ರಾಜ್ಯದ ಚುನಾವಣೆ ಇಡೀ ರಾಷ್ಟ್ರದ ರಾಜಕಾರಣದಲ್ಲಿ ಪರಿಣಾಮ ಬೀರುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ಸುನೀಲ ನಾಯ್ಕ, ದಿನಕರ ಶೆಟ್ಟಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

English summary
The Government will Move smoothly next three years without any hindrance said the Deputy Chief Minister Ashwath Narayana in honnavara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X