• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; 48 ಲಕ್ಷ ವಾಚ್ ಒಡೆದ ಅಧಿಕಾರಿಗಳು!

By ಕಾರವಾರ ಪ್ರತಿನಿಧಿ
|

ಭಟ್ಕಳ, ಮಾರ್ಚ್ 07: ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಭಟ್ಕಳ ಮೂಲದ ವ್ಯಕ್ತಿಯ ಸುಮಾರು 48 ಲಕ್ಷ ರೂ. ಮೌಲ್ಯದ ವಾಚ್‌ ಅನ್ನು ಕಸ್ಟಮ್ಸ್ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಚಿನ್ನ ಸಾಗಣೆ ಶಂಕೆಯ ಮೇಲೆ ಅಧಿಕಾರಿಗಳು ವಾಚ್ ಅನ್ನು ತಮ್ಮ ವಶಕ್ಕೆ ಪಡೆದಿದ್ದರು.

ಭಟ್ಕಳ ಮೂಲದ ವ್ಯಕ್ತಿಯನ್ನು ತಪಾಸಣೆಗೆಂದು ವಶಕ್ಕೆ ಪಡೆದಿದ್ದ ಅಧಿಕಾರಿಗಳು ಆಡಿಮೂವರ್ಸ್ ಪಿಗುಯೆಟ್ ಕಂಪೆನಿಯ ಕೈಗಡಿಯಾರವನ್ನು ಅದರ ಮೌಲ್ಯವನ್ನು ಅರಿಯದೇ ಪುಡಿ ಮಾಡಿದ್ದಾರೆ. ಆದರೆ, ಯಾವುದೇ ಚಿನ್ನ ಪತ್ತೆಯಾಗಿಲ್ಲ.

ಧಾರವಾಡದ ಅಪಘಾತದಲ್ಲಿ ಮೃತಪಟ್ಟವರ ಉಂಗುರ, ವಾಚ್ ನೋಡಿ ಭಾವುಕರಾದ ಕುಟುಂಬಸ್ಥರು

ಭಟ್ಕಳದ ಕಾರಗದ್ದೆಯ ಮಹ್ಮದ್ ಇಸ್ಮೈಲ್ ವಾಚ್ ಕಳೆದುಕೊಂಡವರು. ಇವರ ಸಹೋದರ ದುಬೈನಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದು, ಇಸ್ಮೈಲ್ ವಿಸಿಟಿಂಗ್ ವೀಸಾ ಪಡೆದುಕೊಂಡು ಸಹೋದರನ ಬಳಿ ತೆರಳಿದ್ದರು.

ಭಾರತದ ಮೊಟ್ಟ ಮೊದಲ ಪೇಮೆಂಟ್ ವಾಚ್: ವೇಗವಾಗಿ, ಸುರಕ್ಷಿತವಾಗಿ ವಾಚ್‌ನಲ್ಲೇ ಬಿಲ್ ಪಾವತಿಸಿ

ಮಾರ್ಚ್ 3ರಂದು ಮಹ್ಮದ್ ಇಸ್ಮೈಲ್ ಭಾರತಕ್ಕೆ ವಾಪಸ್ ಆಗಿದ್ದು, ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆಗ ಕಸ್ಟಮ್ಸ್ ಅಧಿಕಾರಿಗಳು ಇಸ್ಮೈಲ್‍ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ಕೈಯಲ್ಲಿದ್ದ ಕೈ ಗಡಿಯಾರವನ್ನು ಪಡೆದುಕೊಂಡು ಅದನ್ನು ಒಡೆದು ಪುಡಿ ಮಾಡಿದ್ದಾರೆ.

ದುಬಾರಿ ವಾಚ್ ಎಗರಿಸಲು ಸೂಟುಬೂಟಲ್ಲಿ ಬಂದ ಹೈಟೆಕ್ ಕಳ್ಳರು

ವಾಚ್‌ನಲ್ಲಿ ಚಿನ್ನ ಇಲ್ಲದಿರುವುದನ್ನು ದೃಢಪಡಿಸಿಕೊಂಡ ಬಳಿಕ ಪುಡಿಯಾದ ವಾಚ್‌ ಅನ್ನು ಟ್ರೇನಲ್ಲಿ ಇಟ್ಟು ಇಸ್ಮೈಲ್‍ ಅವರಿಗೆ ವಾಪಸ್ ನೀಡಿದ್ದಾರೆ. ವಾಚ್ ವಾಪಸ್ ನೀಡುವಂತೆ ಇಸ್ಮೈಲ್ ಪಟ್ಟು ಹಿಡಿದಿದ್ದಾರೆ. ವಾಚ್ ಮೌಲ್ಯ ಕೇಳಿ ಅಧಿಕಾರಿಗಳು ತಬ್ಬಿಬ್ಬಾದರು. ವಾಚ್ ಒಡೆದು ಹಾಕಿದ ಅಧಿಕಾರಿಗಳ ವಿರುದ್ಧ ಇಸ್ಮೈಲ್ ಕ್ಯಾಲಿಕಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದುಬಾರಿ ಬೆಲೆಯ ಗಡಿಯಾರ; ದುಬೈನಲ್ಲಿ ದುಬಾರಿ ಬೆಲೆಯ ಕೈ ಗಡಿಯಾರ ಮಾರಾಟ ಮಳಿಗೆಯೊಂದಿದೆ. ಆ ಮಳಿಗೆಯಲ್ಲಿ ಪ್ರಖ್ಯಾತ ಆಡಿಮೂವರ್ಸ್ ಪಿಗುಯೆಟ್ ಕಂಪೆನಿಯ ಸರಿಸುಮಾರು 60 ಲಕ್ಷ ಮೌಲ್ಯದ (ಮೂಲ ಬೆಲೆ) ಬಳಸಲಾದ ಕೈಗಡಿಯಾರವನ್ನು, ಇಸ್ಮೈಲ್ ಸಹೋದರ 48 ಲಕ್ಷಕ್ಕೆ 2017ರಲ್ಲಿ ಖರೀದಿಸಿದ್ದರು.

3-4 ವರ್ಷ ತಾವೇ ಬಳಕೆ ಮಾಡುತ್ತಿದ್ದರು. ಕಳೆದ ತಿಂಗಳು ದುಬೈಗೆ ಬಂದ ತನ್ನ ಸಹೋದರನಿಗೆ ಅದನ್ನು ನೀಡಿದ್ದಾರೆ. ದುಬಾರಿ ಬೆಲೆಯ ಕೈಗಡಿಯಾರದೊಂದಿಗೆ ಇಸ್ಮೈಲ್ ಭಾರತಕ್ಕೆ ವಾಪಸ್ಸಾಗಿದ್ದು, ಗಡಿಯಾರದ ಮೌಲ್ಯ ತಿಳಿಯದ ಕಸ್ಟಮ್ಸ್ ಅಧಿಕಾರಿಗಳು ಅದನ್ನು ಒಡೆದಿದ್ದಾರೆ.

ಈ ಪುಟ್ಟ ಕೈಗಡಿಯಾರದಲ್ಲಿ ಎಷ್ಟು ಕೆಜಿ ಚಿನ್ನವನ್ನು ಸಾಗಿಸಲು ಸಾಧ್ಯ?. ಗಡಿಯಾರದ ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳುವುದು ಬೇಡವೇ? ನನಗೆ ಆಗಿರುವ ಹಾನಿಯನ್ನು ಸರಿಪಡಿಸಿಕೊಡಬೇಕು ಎಂದು ಇಸ್ಮೈಲ್ ಆಗ್ರಹಿಸಿದ್ದಾರೆ.

English summary
Customs officials of the Calicut airport destroyed Bhatkal based man 48 lakh Rs Audemars Piguet watch. Officials search for gold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X