ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಸಳೆ ಬಂತು ಮೊಸಳೆ... ಗ್ರಾಮದಲ್ಲಿ ಏಕಾಏಕಿ ಪ್ರತ್ಯಕ್ಷ!

|
Google Oneindia Kannada News

ಕಾರವಾರ, ಜುಲೈ 1: ಬೃಹತ್ ಗಾತ್ರದ ಮೊಸಳೆಯೊಂದು ಜನವಸತಿ ಪ್ರದೇಶದಲ್ಲಿ ಪ್ರತ್ಯಕ್ಷವಾದ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ತಾಲ್ಲೂಕಿನ ಕೋಗಿಲಬನ ಗ್ರಾಮದಲ್ಲಿ ನಡೆದಿದೆ.

Recommended Video

ಹಳ್ಳಿಯ ರಸ್ತೆಯಲ್ಲಿ ವಾಕಿಂಗ್ ಮಾಡಿದ ಮೊಸಳೆ | oneindia kannada

ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಗ್ರಾಮದಲ್ಲಿ ಮೊಸಳೆ ರಾಜಾರೋಷವಾಗಿ ತಿರುಗಾಡಿದ್ದು, ಅದೃಷ್ಟವಶಾತ್ ಯಾರ ಮೇಲೂ ದಾಳಿ ನಡೆಸಿಲ್ಲ. ಕೋಗಿಲಬನ ಗ್ರಾಮದಲ್ಲಿ ಮೊಸಳೆ ತಿರುಗಾಡಿದ್ದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಮೊಸಳೆಯೊಂದು ಈ ರೀತಿ ಗ್ರಾಮಕ್ಕೆ ಆಗಮಿಸಿರುವುದು ಸ್ಥಳೀಯರಲ್ಲಿ ಅಚ್ಚರಿಗೂ ಕಾರಣವಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಪರಿಚಯ: ಮಹಿಳೆಯಿಂದ ಪುರೋಹಿತನಿಗೆ 4.90 ಲಕ್ಷ ರೂ. ಪಂಗನಾಮಇನ್‌ಸ್ಟಾಗ್ರಾಂನಲ್ಲಿ ಪರಿಚಯ: ಮಹಿಳೆಯಿಂದ ಪುರೋಹಿತನಿಗೆ 4.90 ಲಕ್ಷ ರೂ. ಪಂಗನಾಮ

ಗ್ರಾಮದ ಸಮೀಪಲ್ಲಿರುವ ಕಾಳಿ ನದಿಯಿಂದ ಮೊಸಳೆ ಗ್ರಾಮಕ್ಕೆ ಆಗಮಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಬಳಿಕ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸಿಬ್ಬಂದಿ ಆಗಮಿಸಿ ಮೊಸಳೆಯನ್ನು ಸುರಕ್ಷಿತವಾಗಿ ಮತ್ತೆ ಕಾಳಿ ನದಿಗೆ ಸೇರಿಸಿದ್ದಾರೆ.

 Karwar: Crocodile Enters Dandelis Kogilabana Village From Kaali River

ಈ ಹಿಂದೆ ಕಾಲಿ ನದಿ ಭಾಗದಲ್ಲಿ ಮೊಸಳೆಗಳು ಮನುಷ್ಯನ ಮೇಲೆ ಎರಗಿ ಸಾವುಗಳಾದ ಘಟನೆ ಸಹ ನಡೆದಿದೆ. ದಾಂಡೇಲಿಯ ಕಾಗದ ಕಾರ್ಖಾನೆ ಬಳಿ ನದಿ ತಡದಲ್ಲಿ ಅತೀ ಹೆಚ್ಚು ಮೊಸಳೆಗಳು ವಾಸಿಸುತ್ತಿವೆ.

ಕಾರ್ಖಾನೆಯ ತ್ಯಾಜ್ಯಗಳೇ ಇವುಗಳಿಗೆ ಆಹಾರವಾಗಿದ್ದು, ಲಾಕ್‌ಡೌನ್‌ನಿಂದ ಜನರ ಓಡಾಟ ಸಹ ಈ ಪ್ರದೇಶಗಳಲ್ಲಿ ಇಳಿಮುಖವಾಗಿತ್ತು. ಹೀಗಾಗಿ ಆಹಾರ ಅರಸಿ ಮೊಸಳೆಗಳು ನದಿ ದಡದಿಂದ ಸುತ್ತಮುತ್ತ ಓಡಾಟ ನಡೆಸುತಿದ್ದು, ಇಂದು ಗ್ರಾಮಕ್ಕೆ ಮೊಸಳೆ ನುಗ್ಗಿದ್ದರಿಂದ ಇದೀಗ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

English summary
A huge Crocodile enters to the Kogilabana village of Dandeli Taluk in Uttara Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X