• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್: ಕಾರವಾರ ನೌಕಾನೆಲೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ

By ದೇವರಾಜ್ ನಾಯ್ಕ್
|

ಕಾರವಾರ, ಏಪ್ರಿಲ್ 29; ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಈಗಾಗಲೇ ಕೆಲವೆಡೆ ಬೆಡ್‌ಗಳು ಸಿಗದೇ ಸೋಂಕಿತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಕಾರಣದಿಂದಾಗಿ ವೆಸ್ಟರ್ನ್ ನೇವಲ್ ಕಮಾಂಡ್ ಕೆಲವು ಆಕ್ಸಿಜನ್ ಸಹಿತ ಬೆಡ್‌ಗಳನ್ನು ಸಿದ್ಧವಾಗಿರಿಸಿದೆ.

ವೆಸ್ಟರ್ನ್ ನೇವಲ್ ಕಮಾಂಡ್‌ಗೆ ಒಳಪಡುವ ಗೋವಾದ ಭಾರತೀಯ ನೌಕಾ ಆಸ್ಪತ್ರೆ ಸೇವೆ (ಐಎನ್‌ಎಚ್‌ಎಸ್) ಜೀವಂತಿ, ಕರ್ನಾಟಕ ಕಾರವಾರದ ಐಎನ್‌ಎಚ್‌ಎಸ್ ಪತಂಜಲಿ ಮತ್ತು ಮುಂಬೈನ ಐಎನ್‌ಎಚ್‌ಎಸ್ ಸಂಧಾನಿಯಲ್ಲಿ ನಾಗರಿಕ ಆಡಳಿತವು ಬಳಸಿಕೊಳ್ಳಲು ಈಗಾಗಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿರುವುದಾಗಿ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ವಿಡಿಯೋ; ಶಿರಸಿ ಆಸ್ಪತ್ರೆಯಲ್ಲಿ ವೃದ್ಧನ ತಲೆಗೆ ವೈದ್ಯರು ಹೊಡೆದಿದ್ದು ನಿಜವೇ? ವಿಡಿಯೋ; ಶಿರಸಿ ಆಸ್ಪತ್ರೆಯಲ್ಲಿ ವೃದ್ಧನ ತಲೆಗೆ ವೈದ್ಯರು ಹೊಡೆದಿದ್ದು ನಿಜವೇ?

ಮುಂಬೈನಲ್ಲಿ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳುವುದನ್ನು ತಡೆಯಲು ನೌಕಾನೆಲೆಯ ಆವರಣದೊಳಗೆ ಮೂಲಭೂತ ಸೌಕರ್ಯಗಳನ್ನು, ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ. ನೌಕಾ ಅಧಿಕಾರಿಗಳು ಸಹ ನಾಗರಿಕ ಆಡಳಿತದೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದು, ಅವರು ವಿನಂತಿಸಿದರೆ ಯಾವುದೇ ಕೋವಿಡ್‌ಗೆ ಸಂಬಂಧಿಸಿದ ತುರ್ತು ಸಹಾಯವನ್ನು ನೀಡಲು ಎಲ್ಲಾ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೊರೊನಾ 'ಹಾಟ್‌ಸ್ಪಾಟ್’ ಆಗುತ್ತಿದೆ ಕಾರವಾರ!ಕೊರೊನಾ 'ಹಾಟ್‌ಸ್ಪಾಟ್’ ಆಗುತ್ತಿದೆ ಕಾರವಾರ!

ಕಾರವಾರದಲ್ಲಿನ ನೌಕಾ ಅಧಿಕಾರಿಗಳು ಕೂಡ ಇದೇ ರೀತಿ ಸುಮಾರು 1500 ವಲಸೆ ಕಾರ್ಮಿಕರಿಗಾಗುವಷ್ಟು ಅಗತ್ಯ ವಸ್ತುಗಳು, ಪಡಿತರ ಮತ್ತು ಮೂಲ ಆರೋಗ್ಯ ಸೇವೆಗಳನ್ನು ಒದಗಿಸಲು ವ್ಯವಸ್ಥೆಗಳನ್ನು ಮಾಡಿದ್ದಾರೆ.

ಕೊರೊನಾ ಹೆಸರಿನಲ್ಲಿ 420 ಕೆಲಸ ಮಾಡಿದ ಅಪೋಲೊ ಆಸ್ಪತ್ರೆ ವಿರುದ್ಧ ಎಫ್ಐಆರ್ ! ಕೊರೊನಾ ಹೆಸರಿನಲ್ಲಿ 420 ಕೆಲಸ ಮಾಡಿದ ಅಪೋಲೊ ಆಸ್ಪತ್ರೆ ವಿರುದ್ಧ ಎಫ್ಐಆರ್ !

ಸಶಸ್ತ್ರ ಪಡೆಗಳ ಆಸ್ಪತ್ರೆಗಳಲ್ಲೇ ಮೊದಲು ಎಂಬಂತೆ ಕಳೆದ ವರ್ಷ ಇಲ್ಲಿನ ಐಎನ್‌ಎಚ್‌ಎಸ್ ಪತಂಜಲಿಯಲ್ಲಿ ನಾಗರಿಕ ಕೋವಿಡ್- 19 ಸೋಂಕಿತ ರೋಗಿಗಳಿಗೆ (ಈ ಆಸ್ಪತ್ರೆ ನೌಕಾ ಅಧಿಕಾರಿ, ಸಿಬ್ಬಂದಿಗೆ ಮಾತ್ರ ಸೀಮಿತಿವಾಗಿದೆ) ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆದಿತ್ತು. ಈ ಬಾರಿ ಕೂಡ ಅವಶ್ಯಕತೆ ಇದ್ದರೆ ನಾಗರಿಕ ಕೋವಿಡ್ ರೋಗಿಗಳನ್ನು ಸ್ವೀಕರಿಸಲು ಆಸ್ಪತ್ರೆ ಸಿದ್ಧವಾಗಿದೆ.

ಗೋವಾದ ನೌಕಾ ತಂಡಗಳು ಕೋವಿಡ್-19 ಮೊದಲ ಅಲೆಯಲ್ಲಿ ಸಮುದಾಯ ಅಡುಗೆಮನೆಗಳನ್ನು ತೆರೆದು ಸಹಕಾರ ನೀಡಿತ್ತು. ಈ ಬಾರಿ ಕೂಡ ಅಗತ್ಯವಿದ್ದರೆ ಅದೇ ರೀತಿಯ ಸಹಾಯವನ್ನು ನೀಡಲು ಸಿದ್ಧವಾಗಿವೆ. ಐಎನ್‌ಎಚ್‌ಎಸ್ ಜೀವಂತಿಯಲ್ಲಿ ನಾಗರಿಕರಿಗಾಗಿ ಕೆಲವು ಆಕ್ಸಿಜನ್ ಸಹಿತ ಬೆಡ್‌ಗಳನ್ನು ಮೀಸಲಿಟ್ಟಿದೆ. ನಾಗರಿಕ ಆಡಳಿತದಿಂದ ನಾಗರಿಕ ಆಸ್ಪತ್ರೆಗಳಿಗೆ ಆಕ್ಸಿಜನ್ ಒದಗಿಸಲು ಕೋರಿದರೆ ಗೋವಾ ನೇವಲ್ ಏರಿಯಾ ಹೆಡ್‌ಕ್ವಾರ್ಟ್ರಸ್ ಅದನ್ನು ಒದಗಿಸಲು ಕೂಡ ಸಜ್ಜಾಗಿದೆ.

ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕರ (ಡಿಜಿಎಎಫ್‌ಎಂಎಸ್) ನಿರ್ದೇಶನದ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ ಕೋವಿಡ್ ಆರೈಕೆಗಾಗಿ ಸ್ಥಾಪಿಸಲಾಗುತ್ತಿರುವ ಆಸ್ಪತ್ರೆಗಳಿಗೆ ಯುದ್ಧಭೂಮಿ ನರ್ಸಿಂಗ್ ಸಹಾಯಕರಾಗಿ ತರಬೇತಿ ಪಡೆದ ವೈದ್ಯಕೀಯ ಮತ್ತು ವೈದ್ಯಕೀಯೇತರರನ್ನು ಸೇರಿದಂತೆ ಸಣ್ಣಪುಟ್ಟ ಕರ್ತವ್ಯಕ್ಕೆ ನಿಯೋಜನೆಗಾಗಿ ಸಂಯೋಜಿತ ತಂಡಗಳನ್ನು ಮುಂಬೈನ ಐಎನ್‌ಎಚ್‌ಎಸ್ ಅಶ್ವಿನಿಯಲ್ಲಿ ತಯಾರು ಮಾಡಲಾಗಿದೆ.

   #Covid19Update: ದೇಶದಲ್ಲಿ ಒಂದೇ ದಿನ 2,97,540 ಮಂದಿ ಕೊರೊನಾ ಸೋಂಕಿನಿಂದ ಗುಣಮುಖ | Oneindia Kannada

   ಕೋವಿಡ್ ಪೀಡಿತ ಪ್ರದೇಶಗಳಿಗೆ ಅತ್ಯವಶ್ಯ ವೈದ್ಯಕೀಯ ಮಳಿಗೆಗಳು/ ಸಲಕರಣೆಗಳನ್ನು ಸಾಗಿಸಲು, ಬಡವರಿಗೆ ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸಲು ಮತ್ತು ಅಗತ್ಯವಿರುವ ಇತರ ತಾಂತ್ರಿಕ ಸಹಾಯಕ್ಕಾಗಿ ಗುಜರಾತ್ ನೌಕಾ ಪ್ರದೇಶವು ನಾಗರಿಕ ಆಡಳಿತಕ್ಕೆ ಬೆಂಬಲವನ್ನು ನೀಡಿರುವುದಾಗಿ ರಕ್ಷಣಾ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ.

   English summary
   COVID-19 cases raising in India. Three naval hospitals under the Western Naval Command INHS Jeevanti, Goa, INHS Patanjali, Karwar and INHS Sandhani, Mumbai have been kept ready for use by the civil administration.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X