ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ತಂದ ಬದಲಾವಣೆ: ಆನ್ ಲೈನ್ ಮೂಲಕ ಸರಳ ವಿವಾಹ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 26: ಕೊರೊನಾ ಲಾಕ್ ಡೌನ್ ನಿಂದಾಗಿ ಸರಳವಾಗಿ ಹಾಗೂ ಆಧುನಿಕವಾಗಿ ಕಾರ್ಯಕ್ರಮಗಳನ್ನು ನಡೆಸಲು ಜನ ಮುಂದಾಗಿದ್ದಾರೆ. ಭಟ್ಕಳದ ಯುವಕನೋರ್ವ ಕೂಡ ಬೆಂಗಳೂರಿನಲ್ಲಿದ್ದುಕೊಂಡು ಚೆನ್ನೈನ ವಧುವಿನೊಂದಿಗೆ ಆನ್ ಲೈನ್ ವಿವಾಹವಾಗಿ ವಿಶೇಷತೆ ಮೆರೆದಿದ್ದಾನೆ.

Recommended Video

Sonu Sood gifts tractor for Andhra Pradesh farmer | Oneindia Kannada

ಭಟ್ಕಳದಿಂದ ಆಯ್ಕೆಯಾಗಿದ್ದ ಮೊದಲ ಮಂತ್ರಿ ದಿ.ಜುಕಾಕೋ ಶಮ್ಸುದ್ದೀನ್ ಅವರ ಮರಿಮೊಮ್ಮೊಗ ಮುಹಮ್ಮದ್ ಆದಿಲ್ ಕೌಡ ಮಾಲ್ಡೀವ್ಸ್ ನಲ್ಲಿ ಪೈಲಟ್ ಆಗಿದ್ದು, ಲಾಕ್ ಡೌನ್ ಪೂರ್ವ ತನ್ನ ಹೆತ್ತವರೊಂದಿಗೆ ಉಮ್ರಾ ನಿರ್ವಹಿಸಲಿಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಲಾಕ್ ಡೌನ್ ಘೋಷಣೆಯಾದ ಬಳಿಕ ಅವರು ಬೆಂಗಳೂರಿನಲ್ಲೇ ಸಿಲುಕಿಕೊಂಡಿದ್ದು, ಈ ನಡುವೆ ಅವರ ನಿಶ್ಚಿತಾರ್ಥ ಚೆನ್ನೈ ಮೂಲದ ಆಂಬೂರು ನಿವಾಸಿ ಆಫಿಯಾ ಮರಿಯಮರೊಂದಿಗೆ ಏರ್ಪಟ್ಟಿದೆ.

Coronavirus Effect: Simple Wedding Through Online In Bhatkala

ನೂತನ ಎಂಎಲ್ಸಿ ಶಾಂತಾರಾಮ ಸಿದ್ದಿಯವರ ಮನೆಗೆ ಸಚಿವರ ಭೇಟಿ ನೂತನ ಎಂಎಲ್ಸಿ ಶಾಂತಾರಾಮ ಸಿದ್ದಿಯವರ ಮನೆಗೆ ಸಚಿವರ ಭೇಟಿ

ನೂರಾರು ಕಿ.ಮೀ ದೂರ ಇರುವ ವಧು ಮತ್ತು ವರ ವಿವಾಹಕ್ಕಾಗಿ ಒಂದು ಕಡೆ ಸೇರುವುದು ಕಷ್ಟವಾಗಿರುವ ಈ ಪರಿಸ್ಥಿತಿಯಲ್ಲಿ ಆನ್ ಲೈನ್ ಮೂಲಕ ಅವರಿಬ್ಬರು ಹಾಗೂ ಅವರ ನೂರಾರು ಕುಟುಂಬಸ್ಥರು ಅತ್ಯಂತ ಸರಳವಾಗಿ ಯುವ ಜನಾಂಗಕ್ಕೆ ಮಾದರಿಯೆಂಬಂತೆ ಅನ್ಯೋನ್ಯವಾದ ವಿವಾಹವನ್ನು ಶುಕ್ರವಾರದಂದು ಬೆಂಗಳೂರಿನಲ್ಲಿ ನಡೆಸಿದ್ದಾರೆ. ಪ್ರಪಂಚದ ವಿವಿಧ ಭಾಗಗಳಲ್ಲಿರುವ ಅವರು ಕುಟುಂಬಸ್ಥರು ಮತ್ತು ಸ್ನೇಹಿತರು ಸಿಸ್ಕೋ ಆಪ್ ಮೂಲಕ ಆನ್ ಲೈನ್ ನ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Coronavirus Effect: Simple Wedding Through Online In Bhatkala

ಭಟ್ಕಳಕ್ಕೆ ಯಾರೂ ಹೊರಗಿನಿಂದ ಬರುವಂತಿಲ್ಲ: ಡಿಸಿ ಕಟ್ಟುನಿಟ್ಟಿನ ಆದೇಶಭಟ್ಕಳಕ್ಕೆ ಯಾರೂ ಹೊರಗಿನಿಂದ ಬರುವಂತಿಲ್ಲ: ಡಿಸಿ ಕಟ್ಟುನಿಟ್ಟಿನ ಆದೇಶ

ವಿವಾಹ ಸಂಬಂಧ ಎಲ್ಲ ರೀತಿಯ ದಾಖಲಾತಿಗಳನ್ನು ಈಗಾಗಲೇ ಚೆನ್ನೈನಲ್ಲಿ ಸಿದ್ಧ ಮಾಡಿಕೊಟ್ಟುಕೊಳ್ಳಲಾಗಿದೆ. ಅದೇ ರೀತಿ ಕೆಲವು ಕೆಲಸಗಳನ್ನು ಸಹ ವಿಡಿಯೋ ರೆಕಾರ್ಡಿಂಗ್ ಮೂಲಕ ಪೂರ್ಣಗೊಳಿಸಲಾಗಿದೆ. ಆದರೆ ಇತರ ಕಾರ್ಯಗಳನ್ನು ಖಾಜಿ ಸಾಹಿಬ್ ಮತ್ತು ಅವರ ಮುಂದೆ ಸಹಿ ಹಾಕುವ ಮೂಲಕ ಶುಕ್ರವಾರ ವಿವಾಹ ನೆರವೇರಿಸಲಾಗಿದೆ ಎಂದು ಭಟ್ಕಳ ಮೂಲದ ಚೆನ್ನೈನ ಅಬ್ದುಲ್ ರಹೀಂ ಪಟೇಲ್ ಮಾಹಿತಿ ನೀಡಿದ್ದಾರೆ.

English summary
A young man from Bhatkal is with an online Married with a bride from Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X