ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ದಿನ ಭಟ್ಕಳದ 12 ಮಂದಿಯಲ್ಲಿ ಕೊರೊನಾ ಪತ್ತೆ

|
Google Oneindia Kannada News

ಕಾರವಾರ, ಮೇ 08: ಭಟ್ಕಳ ಮೂಲದ 12 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದ್ದು, ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಸುಮಾರು 20 ದಿನಗಳ ಬಳಿಕ ಭಟ್ಕಳದ 18 ವರ್ಷದ ಯುವತಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಭಯಭೀತರಾಗಿದ್ದ ಜನತೆ, ಇದೀಗ ಒಮ್ಮೆಲೆ‌ 12 ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದರಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಯುವತಿಯ ಕುಟುಂಬದ ಹಾಗೂ ಅಕ್ಕಪಕ್ಕದ ಮನೆಯ ಆರು ಮಂದಿ, ಪಕ್ಕದ ಬೀದಿಯ ಓರ್ವ, ಹೆದ್ದಾರಿ ಬಳಿಯಲ್ಲಿ ಮನೆ ಹೊಂದಿರುವ ಓರ್ವನಿಗೆ ಹಾಗೂ ಇನ್ನೊಂದು ಬೀದಿಯ 4 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

5 ತಿಂಗಳ ಹೆಣ್ಣುಮಗು, 3 ವರ್ಷದ ಬಾಲಕ, 83 ಹಾಗೂ 60 ವರ್ಷದ ವೃದ್ಧ, 75 ವರ್ಷದ ವೃದ್ಧೆ, 39 ವರ್ಷದ ಮಹಿಳೆ, 33 ಹಾಗೂ 30 ವರ್ಷದ ಪುರುಷ, 25, 22, 11 ಹಾಗೂ 12 ವರ್ಷದ ಯುವತಿಯರಲ್ಲಿ ಸೋಂಕು ದೃಢಪಟ್ಟಿದೆ.

12 Corona Positive Case Reported In Bhatkala Today

ಫಸ್ಟ್ ನ್ಯೂರೊ ನಂಟು: ಈ ಸೋಂಕಿನ ಮೂಲ ದಕ್ಷಿಣ ಕನ್ನಡ ಜಿಲ್ಲೆಯ ಪಡೀಲ್ ನ ಫಸ್ಟ್ ನ್ಯೂರೊ ಆಸ್ಪತ್ರೆಯದ್ದು ಎನ್ನಲಾಗಿದೆ. ಭಟ್ಕಳದ ಈ ಸೋಂಕಿತ ಯುವತಿಯ ಅಕ್ಕ, ಬಾವ ತಮ್ಮ ಮಗುವಿಗೆ ಅನಾರೋಗ್ಯದ ಕಾರಣ ಪಾಸ್ ಪಡೆದು ಮಂಗಳೂರಿಗೆ ಏ.19ಕ್ಕೆ ತೆರಳಿದ್ದರು. ಪರಿಚಯಸ್ಥರೊಬ್ಬರ ಮನೆಯಲ್ಲಿ ಉಳಿದು, ಏ.20ರಂದು ಮಗುವಿಗೆ ಚಿಕಿತ್ಸೆ ಕೊಡಿಸಿ ಭಟ್ಕಳಕ್ಕೆ ವಾಪಸ್ಸಾಗಿದ್ದರು. ಹೀಗಾಗಿ ಇವರ ಸಂಪರ್ಕದಲ್ಲಿದ್ದ ಯುವತಿಗೆ ಸೋಂಕು ಹರಡಿದೆ.

ಮೇ 1ರಂದು ಯುವತಿಗೆ ಮೈ ಕೈ ನೋವು ಮತ್ತು ಜ್ವರ ಬಂದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ತೆಗೆದು ಪರೀಕ್ಷೆ ಮಾಡಿಸಿದ್ದರು. ಮೇ 5ರಂದು ಬಂದ ಪ್ರಯೋಗಾಲಯದ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ ಯುವತಿಯ ಕುಟುಂಬದವರು, ಸಂಪರ್ಕಕ್ಕೆ ಬಂದಿದ್ದ 100ಕ್ಕೂ ಅಧಿಕ ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಈ ಪೈಕಿ ಇದೀಗ 12 ಜನರಿಗೆ ಸೋಂಕು ದೃಢಪಟ್ಟಿದೆ.

English summary
12 coronavirus positive case has been reported in Bhatkala of uttara kannada district today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X